ಹೊಸ ವರ್ಷಕ್ಕೆ ಭರ್ಜರಿ ಕಿಕ್​​ ಕೊಟ್ಟ ಮದ್ಯ: ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ

ಹೊಸ ವರ್ಷಕ್ಕೆ ಭರ್ಜರಿ ಕಿಕ್​​ ಕೊಟ್ಟ ಮದ್ಯ: ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ


ಬೆಂಗಳೂರು, ಜನವರಿ 01: ರಾಜ್ಯಾದ್ಯಂತ ಹೊಸ ವರ್ಷಾಚರಣೆ (ಹೊಸ ವರ್ಷ 2026) ಸಂಭ್ರಮ ಜೋರಾಗಿತ್ತು. ಪಬ್, ಬಾರ್, ರೆಸ್ಟೋರೆಂಟ್‌ಗಳು ಕುಡಿದ ಟೈಮುಟದ ಯುವಕ, ಯುವತಿಯರು ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದರು. ಇನ್ನು ಮದ್ಯ (ಮದ್ಯ) ಮಾರಾಟದ ಅವಧಿಯನ್ನು ವಿಸ್ತರಿಸಲಾಗಿದೆ. ಹೀಗಾಗಿ ಹೊಸ ವರ್ಷದಂದು ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯವಾಗಿದೆ. ಈ ವರ್ಷ ಅಬಕಾರಿ ಇಲಾಖೆ ಒಟ್ಟು 587.51 ಕೋಟಿ ರೂ. ಆದಾಯ ಗಳಿಸಿದೆ.

ಈ ವರ್ಷ ಹೆಚ್ಚಿನ ಮದ್ಯ ಮಾರಾಟ: 587.51 ಕೋಟಿ ರೂ ಆದಾಯ

ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಗದಿತ ಸಮಯ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ. ಆ ಮೂಲಕ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿತ್ತು. ಸೂರ್ಯೋದಕ್ಕೂ ಮುನ್ನವೇ ಬಾರ್‌ಗಳು ತೆರೆದಿದ್ದವು. ಕಳೆದ ವರ್ಷಕ್ಕೆ ಈ ವರ್ಷ ಹೆಚ್ಚಿನ ಮದ್ಯ ಮಾರಾಟವಾಗಿದೆ.

ಇದನ್ನೂ ಓದಿ: ಹೊಸ ವರ್ಷದಂದು ಬಿಎಂಟಿಸಿಗೆ ಭರ್ಜರಿ ಆದಾಯ: ನಿನ್ನೆ ಒಂದೇ ದಿನ ಗಳಿಸಿದ್ದೆಷ್ಟು ಗೊತ್ತಾ?

ಐಎಂಎಲ್, ಬಿಯರ್ ಮಾರಾಟದಿಂದ 587.51 ಕೋಟಿ ಆದಾಯವಾಗಿದೆ. ಕಳೆದ ವರ್ಷಕ್ಕೆ ಹೆಚ್ಚುವರಿಯಾಗಿ 166.74 ಕೋಟಿ ರೂ ಈ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದುಬಂದಿದೆ.

ಇದನ್ನೂ ಓದಿ: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್ ಆದಾಯ: ಆದ ಕಲೆಕ್ಷನ್ ಎಷ್ಟು?

2024ರ ಡಿ.29, 30, 31ರಂದು 8.25 ಲಕ್ಷ ಬಾಕ್ಸ್ IML ಮತ್ತು 5.03 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುವ ಮೂಲಕ 2024ರಲ್ಲಿ 420.77 ಕೋಟಿ ರೂ ಆದಾಯ ಗಳಿಸಿದೆ. 2025ರ ಡಿ.29, 30, 31 ರಂದು 9.84 ಲಕ್ಷ ಬಾಕ್ಸ್ IML, ಅಂದರೆ ಕಳೆದ ವರ್ಷಕ್ಕೆ 1.59 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಮತ್ತು ಇದೇ ದಿನದಂದು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕೆ 1.61 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಐಎಂಎಲ್, ಬಿಯರ್ ಮಾರಾಟದಿಂದ ಈ ವರ್ಷ ಅಬಕಾರಿ 587.51 ಕೋಟಿ ಆದಾಯವಾಗಿದೆ. ಇದನ್ನು ಕಳೆದ ವರ್ಷಕ್ಕೆ ಹೆಚ್ಚುವರಿಯಾಗಿ 166.74 ಕೋಟಿ ರೂ ಆದಾಯ ಹರದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 5:04 pm, ಗುರುವಾರ, 1 ಜನವರಿ 26



Source link

Leave a Reply

Your email address will not be published. Required fields are marked *