Headlines

ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ


ಬೆಂಗಳೂರು, ಜ.1: ಹೊಸ ವರ್ಷಕ್ಕೆ ವಾತಾವರಣದಲ್ಲೂ (ಕರ್ನಾಟಕ ಹವಾಮಾನ ಮುನ್ಸೂಚನೆ) ಕೂಡ ಬದಲಾವಣೆಗಳು ಆಗಿವೆ. ರಾಜ್ಯದ ಹಲವು ಭಾಗಗಳಲ್ಲಿ ವಾತಾವರಣ ಬದಲಾಗಿದೆ. ಇಂದು ರಾಜ್ಯದ (ಜನವರಿ 1), ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣವಿದೆ. ಬೆಂಗಳೂರು ಮತ್ತು ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿರುತ್ತದೆ, ಕನಿಷ್ಠ ತಾಪಮಾನ 13°C ಮತ್ತು 19°C ನಡುವೆ ಇರುತ್ತದೆ. ಗರಿಷ್ಠ ತಾಪಮಾನ ಸುಮಾರು 27°C-28°C ಇರಲಿದೆ. ಬೀದರ್ , ವಿಜಯಪುರ ಮತ್ತು ಕಲಬುರಗಿ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಶೀತ ಅಲೆಯ ಪರಿಸ್ಥಿತಿ ಇರುತ್ತದೆ, ಎಲ್ಲೋ ಎಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಕಡಿಮೆಯಾಗಿದೆ. ಬೀದರ್ 6.4°C, ವಿಜಯಪುರ 9.9°C, ಬೆಳಗಾವಿ 8.7°Cರಷ್ಟು ತಾಪಮಾನ ಇದೆ.

ಕರಾವಳಿ ಕರ್ನಾಟಕದಲ್ಲಿ ಬೆಚ್ಚಗಿನ ಮತ್ತು ಇಬ್ಬನಿಯಿಂದ ಕೂಡಿದ್ದು, ಕನಿಷ್ಠ ತಾಪಮಾನವು 19°C-20°C ಇರುತ್ತದೆ. ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಬೆಳಿಗ್ಗೆ ತಂಪಾದ ವಾತಾವರಣ ಇರಲಿದೆ. ಮಂಗಳೂರು ಭಾಗದಲ್ಲಿ ಗರಿಷ್ಠ ತಾಪಮಾನ ಸುಮಾರು 28°C-30°C , ಕನಿಷ್ಠ ತಾಪಮಾನ ಸುಮಾರು 20°C-21°C ಇರಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದೆ, ಒಣ ಹವಾಮಾನವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದೆ.

ಬೆಳಗಾವಿ (8.7°C), ಬಾಗಲಕೋಟೆ (9.9°C), ರಾಯಚೂರು (10.4°C), ಧಾರವಾಡ ಮತ್ತು ಗದಗ (ತಲಾ 10.7°C) ತೀವ್ರ ಚಳಿಗಾಲದ ಚಳಿಯನ್ನು ಅನುಭವಿಸಿವೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ, ಚಿಕ್ಕಮಗಳೂರು (11.1°C), ಹಾಸನ (13.1°C), ತುಮಕೂರು (13.1°C), ಕೋಲಾರ (13.3°C) ಮತ್ತು ಚಿತ್ರದುರ್ಗ (13°C) ಶೀತದ ವಾತಾವರಣವನ್ನು ಹೊಂದಿದೆ. ಇನ್ನು ಬೆಂಗಳೂರಿನ ಐಎಂಡಿ ಪ್ರಕಾರ, ಬೆಂಗಳೂರಿನಲ್ಲಿ ತಕ್ಷಣಕ್ಕೆ ಮಳೆಯಾಗುವ ಮುನ್ಸೂಚನೆ ಇಲ್ಲ, ಮುಂದಿನ ಕೆಲವು ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ. ಮೋಡ ಕವಿದ ವಾತಾವರಣ ಕೂಡ ಹೆಚ್ಚಾಗಲಿದೆ. ರಾತ್ರಿ ಹೊತ್ತು ಕೂಡ ತಂಪಾದ ಗಾಳಿ ಇರಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

ಮುಂದಿನ ಕೆಲವು ದಿನಗಳಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ವೇಳೆ ತಂಪಾದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೆಚ್ಚು ಹಗಲಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವಿದ್ದರೂ, ರಾತ್ರಿ ಮತ್ತು ಮುಂಜಾನೆಯ ವೇಳೆ ಚಳಿಯ ವಾತಾವರಣ ಇರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *