Headlines

ತಮ್ಮನ ಜೊತೆ ದೆಹಲಿ ದಂಡಯಾತ್ರೆ, ಖರ್ಗೆ-ಡಿಕೆಶಿ ಭೇಟಿ: ಬಂಡೆಗೆ ಸಿಕ್ಕ ಮೂರು ಆಯ್ಕೆಗಳೇನು? | Karnataka Political Crisis Dk Shivakumar Meets Congress High Command Gow

ತಮ್ಮನ ಜೊತೆ ದೆಹಲಿ ದಂಡಯಾತ್ರೆ, ಖರ್ಗೆ-ಡಿಕೆಶಿ ಭೇಟಿ: ಬಂಡೆಗೆ ಸಿಕ್ಕ ಮೂರು ಆಯ್ಕೆಗಳೇನು? | Karnataka Political Crisis Dk Shivakumar Meets Congress High Command Gow


ನಾಯಕತ್ವ ಬದಲಾವಣೆ ಚರ್ಚೆಯೇ ಇಲ್ಲ ಅಂತಿದ್ದಾರೆ ಡಿ.ಕೆ.ಶಿವಕುಮಾರ್. ಹೀಗಿದ್ರೂ ಇದು ಸಹ ಡಿಕೆಶಿಯ ತೆರೆ ಹಿಂದಿನ ಆಟ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಇಬ್ಬರು ಒಂದಾಗಿ ಮಲ್ಲಿಕಾರ್ಜುನ ಖರ್ಗೆಯರವನ್ನ ಭೇಟಿಯಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಎಐಸಿಸಿ ಅಧ್ಯಕ್ಷರು, ಬಂಡೆ ಬ್ರದರ್ಸ್​ಗೆ ಏನೆಲ್ಲಾ ಸಂದೇಶಗಳನ್ನ ಕೊಟ್ಟಿರ್ಬೋದು ಅನ್ನೋ ವಿಚಾರವಾಗಿ ಒಂದಿಷ್ಟು ವಿಶ್ಲೇಷಣೆಗಳನ್ನ ಮಾಡಲಾಗ್ತಿದೆ.ಖರ್ಗೆ ಜೊತೆಗಿನ ಸಭೆಯಲ್ಲಿ ನಾಯಕತ್ವ ವಿಚಾರವಾಗಿ ಚರ್ಚೆಯಾಗಿದ್ದೇ ಆದಲ್ಲಿ ಮೂರು ಆಯ್ಕೆಗಳನ್ನ ಡಿಕೆ ಮುಂದಿಟ್ಟಿರಬಹುದು ಮಲ್ಲಿಕಾರ್ಜುನ ಖರ್ಗೆ. ಮೊದಲನೆಯಾದಾಗಿ, ಎರಡುವರೆ ವರ್ಷಕ್ಕೆ ಸಿದ್ದರಾಮಯ್ಯ ಅವರು ಡಿಕೆಗೆ ಸಿಂಹಾಸನ ಬಿಟ್ಟು ಕೊಡ್ಬೇಕು ಅಂತ ಒಪ್ಪಂದ ಆಗಿದ್ದೇ ಆದಲ್ಲಿ, ಆ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೂ ಮನಸ್ಸಿದ್ದಲ್ಲಿ, ಡಿಕೆಗೆ ಸಿಂಹಾಸನ ಸಿಗುವ ಭರವಸೆಯನ್ನ ಕೊಟ್ಟಿ ಕಳುಹಿಸಿರಬಹುದು.. ಇಲ್ಲದೇ ಹೋದ್ರೆ, ತಾಳ್ಮೆಯಿಂದಿರಿ ಎನ್ನುವ ಸಂದೇಶವನ್ನೂ ತಲುಪಿಸಿರಬಹುದು.ಸಿದ್ದರಾಮಯ್ಯ ಅವರಿಗೆ ದೇವರಾಜ್ ಅರಸು ಅವರ ದಾಖಲೆ ಮುರಿಬೇಕು ಅನ್ನೋ ಆಸೆಯಿದೆ. ಹೋಗಾಗಿ ಅಲ್ಲಿಯ ತನಕ ತಾಳ್ಮೆಯಿಂದಿರಿ. ಅದಾದ ಮೇಲೆ ಬೇಕಾದ್ರೂ ಸಿಎಂ ಸಿಂಹಾಸನದ ಬಗ್ಗೆ ಮತ್ತೆ ಚರ್ಚೆ ಮಾಡೋಣ ಅನ್ನೋ ಭರವಸೆಯನ್ನೂ ಮಲ್ಲಿಕಾರ್ಜುನ ಖರ್ಗೆಯವರು ಡಿಕೆ ಕೊಟ್ಟಿರಬಹುದು.



Source link

Leave a Reply

Your email address will not be published. Required fields are marked *