ಬೆಂಗಳೂರು, ಮಾರ್ಚ್ 04: ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಶಾಕ್ ಕೊಟ್ಟಿದೆ. 2025-26ರ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ವಿದ್ಯುತ್ ದರ ಏರಿಕೆಯಾಗುತ್ತಿದೆ, ಈ ನಿರ್ಧಾರವನ್ನು ಖಂಡಿಸಿ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ಗರಂ ಆಗಿವೆ. ದರ ಏರಿಕೆ ಸಂಬಂಧ ಚರ್ಚೆ ಫೆಬ್ರವರಿ 20 ರಂದು ಸಾರ್ವಜನಿಕರ ಜೊತೆ ನಡೆದಿದ್ದು, ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿದ್ಯುತ್ ದರ ಏರಿಕೆ ಮಾಡಲ್ಲವೆಂದು ಕೆಇಆರ್‌ಸಿ ಭರವಸೆ ನೀಡಿತ್ತು. ಆದರೀಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಯುಟರ್ನ್ ಹೊಡೆದಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಯೂನಿಟ್‌ಗೆ ಎಷ್ಟು ದರ ಏರಿಕೆ?
- LT-3(A) ವಾಣಿಜ್ಯ ಬಳಕೆ ವಿದ್ಯುತ್ ದರ ₹7 ರಿಂದ ₹7.10ಕ್ಕೆ ಏರಿಕೆ
- LT-5 ಕೈಗಾರಿಕೆಗೆ ಬಳಸುವ ವಿದ್ಯುತ್ ದರ ₹4.50 ರಿಂದ ₹5.20ಕ್ಕೆ ಏರಿಕೆ
- HT-2 ಮೆಟ್ರೋ, ಇತರ ವಿದ್ಯುತ್ ದರ ₹6.60 ರಿಂದ 6.70ಕ್ಕೆ ಏರಿಕೆ
- HT-2(B) ಕಾಂಪ್ಲೆಕ್ಸ್, ಥಿಯೇಟರ್, ಹೋಟೆಲ್‌ಗೆ ಬಳಸು ವಿದ್ಯುತ್ ದರ 5.95 ರೂ.ನಿಂದ 6.90 ರೂ.ಗೆ ಏರಿಕೆ
(ಮಾಹಿತಿ ಅಪ್‌ಡೇಟ್ ಆಗುತ್ತಿದೆ)