Headlines

ಎಲ್ಲವೂ ಸುಭಿಕ್ಷವಾಗಿದೆ: ರಾಹುಲ್ ಗಾಂಧಿ ಭೇಟಿ ಬಳಿಕ ಬಿಕೆ ಹರಿಪ್ರಸಾದ್ ಅಚ್ಚರಿಕೆ ಹೇಳಿಕೆ

ಎಲ್ಲವೂ ಸುಭಿಕ್ಷವಾಗಿದೆ: ರಾಹುಲ್ ಗಾಂಧಿ ಭೇಟಿ ಬಳಿಕ ಬಿಕೆ ಹರಿಪ್ರಸಾದ್ ಅಚ್ಚರಿಕೆ ಹೇಳಿಕೆ


ನವಂಬರ್, (ನವೆಂಬರ್ 24): ಕರ್ನಾಟಕ ಸಿಎಂ ಕುರ್ಚಿ ಕದನ ದೆಹಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಡಿಕೆಶಿ ಶಿವಕುಮಾರ್ ಬಣದ ಶಾಸಕರು ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಡಿಕೆಶಿ ಸಿಎಂ ಸ್ಥಾನ ಕೊಡಲು ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದ್ದಾರೆ. ಇದರ ನಡುವೆ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ವರದಿ ಸಲ್ಲಿಸಿದ್ದಾರೆ.

ರಾಹುಲ್ ಗಾಂಧಿ ಭೇಟಿ ಮಾಡಿ ಆಚೆ ಬಂದ ಬಳಿಕ ಹರಿಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಲು ನಿರಾಕರಿಸಿದ್ದು, ಎಲ್ಲವೂ ಸುಭೀಕ್ಷವಾಗಿದೆ ಎಂದಷ್ಟೇ ತೆರಳಿದರು. ಈ ಮೂಲಕ ಹರಿಪ್ರಸಾದ್ ಕರ್ನಾಟಕ ಕಾಂಗ್ರೆಸ್ ನಲ್ಲಿ ಬಣ ಬಡಿದಾಟವನ್ನು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದು, ಇದಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *