ಸಿದ್ದರಾಮಯ್ಯ ಪವರ್ ಬ್ಯಾಂಕ್ ಸತೀಶ್ ಜಾರಕಿಹೊಳಿಗೆ 2 ಬಿಗ್ ಆಫರ್ ಕೊಟ್ಟ ಡಿಕೆಶಿ

ಸಿದ್ದರಾಮಯ್ಯ ಪವರ್ ಬ್ಯಾಂಕ್ ಸತೀಶ್ ಜಾರಕಿಹೊಳಿಗೆ 2 ಬಿಗ್ ಆಫರ್ ಕೊಟ್ಟ ಡಿಕೆಶಿ


ಬೆಂಗಳೂರು, (ನವೆಂಬರ್ 26): ಹೇಗಾದರೂ ಮಾಡಿ ಇನ್ನುಳಿದ ಎರಡು ವರ್ಷದ ಅವಧಿಗೆ ಸಿಎಂ ಗದ್ದುಗೆ ಏರಲೇ ಬೇಕು ಎಂದು ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಪಣ ತೊಟ್ಟಿದ್ದಾರೆ. ಇನ್ನೊಂದೆಡೆ ಕುರ್ಚಿಯಿಂದ ಸಿಎಂ ಆಗಿದ್ದಾರೆ ಅದ್ಹೇಗೆ ಇಳಿಸುತ್ತಾರೆ ಎಂದು ಸಿದ್ದರಾಮಯ್ಯ ಸಿದ್ಧರಾಗಿ ನಿಂತಿದ್ದಾರೆ. ಇಬ್ಬರ ನಡುವಿನ ಪಟ್ಟದಾಟ ಜೋರಾಗಿ ಇರುವಾಗಲೇ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಬಣದ ಶಾಸಕರು, ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ. ಮೊನ್ನೆಯಷ್ಟೇ ಸಚಿವ ಜಾರ್ಜ್, ಆಪ್ತ ಜಮೀರ್ ಭೇಟಿಗೆ ಡಿಕೆಶಿ, ನಿನ್ನೆ (ನವೆಂಬರ್ 25) ಸಿದ್ದರಾಮಯ್ಯ ಪಾಲಿಗೆ ಒಂದು ರೀತಿ ಪವರ್ ಬ್ಯಾಂಕ್ ಆಗಿರುವ ಸತೀಶ್ ಜಾರಕಿಹೊಳಿ (ಸತೀಶ್ ಕರ್ಕಿಹೊಳಿ) ಅವರನ್ನ ಭೇಟಿಯಾಗಿ ರಹಸ್ಯ ಮಾತುಕತೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆ ಡಿಸಿಎಂ ಆಫರ್ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿಗೆ 2 ಬಿಗ್ ಆಫರ್ ನೀಡಿದ ಡಿಕೆಶಿ

ಸತೀಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯರ ಉತ್ತರಾಧಿಕಾರಿ ಅಂತಲೇ ಗುರುತಿಸಿಕೊಂಡವರು. ಇದನ್ನ ಖುದ್ದು ಸಿಎಂ ಪುತ್ರ ಯತೀಂದ್ರ ಅವರೇ ಬಹಿರಂಗವಾಗಿಯೇ ಹೇಳಿದ್ದಾರೆ. ಅಹಿಂದ ನಾಯಕತ್ವದ ಹಕ್ಕು ಮಂಡನೆಯಾದರೆ, ಸತೀಶ್ ಅವರನ್ನೇ ಮುಂದಾಳು ಮಾಡ್ಬೇಕೆಂಬುದು ಕೈ ಪಾಳಯದಲ್ಲಿ ಬಹಿರಂಗ ಚರ್ಚೆ. ಆದರೆ, ಇದೀಗ ಸಿದ್ದರಾಮಯ್ಯ ಬಲಗೈಯಂತಿದ್ದ ಸತೀಶ್ ಜಾರಕಿಹೊಳಿ ಜೊತೆಗೆನೇ ಡಿಕೆ ರಹಸ್ಯ ಸಭೆ. ನಿನ್ನೆ (ನವೆಂಬರ್ 25) ತಡರಾತ್ರಿ ಇಬ್ಬರು ನಾಯಕರ ನಡುವೆ 1ಗಂಟೆಗೂ ಹೆಚ್ಚು ಕಾಲ ರಹಸ್ಯ ಸಭೆ ನಡೆಯಿತು. ಹೈಕಮಾಂಡ್ಗೆ ಏನಾದರೂ ಸಿಎಂ ಸ್ಥಾನ ಕೊಟ್ಟರೆ ಸಹಕರಿಸುವಂತೆ ಜಾರಕಿಹೊಳಿ ಡಿಕೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿ ಕಿತ್ತಾಟಕ್ಕೆ ಸ್ಫೋಟಕ ತಿರುವು: ಡಿಕೆಶಿ ಭೇಟಿಯಲ್ಲೇ ಆಟ ಶುರು ಮಾಡಿದ ಸತೀಶ್ ಜಾರಕಿಹೊಳಿ

ಇಷ್ಟೇ ಸಿದ್ದರಾಮಯ್ಯನವರ ಮನವೊಲಿಕೆ ಜೊತೆಗೆ ತಮ್ಮ ಸಹಕಾರವೂ ಬೇಕು. ಇನ್ನು ನಿಮ್ಮ ವಿಶ್ವಾಸವನ್ನು ಹೀಗೆ ಮುಂದುವರಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆ ಡಿಸಿಎಂ ಆಗಿ ಮುಂದುವರಿಯಬಹುದು ಡಿಕೆಶಿ ಆಫರ್ ಕೊಟ್ಟಿದ್ದಾರೆ. ಆದರೆ ಡಿಕೆ ಮಾತಿಗೆ ಪ್ರತಿಕ್ರಿಯೆ ನೀಡಿರುವ ಸತೀಶ್, ತಾವು ಸಿದ್ದರಾಮಯ್ಯರನ್ನ ಬಿಟ್ಟು ಬರಲ್ಲ ಎನ್ನುವ ಮಾತನ್ನ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಜಾರಕಿಹೊಳಿ ಜತೆಗಿನ ಸಭೆಯ ರಹಸ್ಯ ಬಿಚ್ಚಿಟ್ಟ ಡಿಕೆಶಿ

ಇನ್ನು ಈ ಭೇಟಿಯನ್ನ ಒಪ್ಪಿರುವ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಏನು ಬೇರೆ ಅಲ್ಲ. ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ. ಈಗ ಎರಡೂವರೆ ವರ್ಷ ಆಯ್ತು, ಮುಂದಿನ ಎರಡೂ ವರ್ಷಕ್ಕೆ ಹೊಸ ರೂಪ ಕೊಡುವುದರ ಬಗ್ಗೆ ಚರ್ಚಿಸಲಾಗಿದೆ. ಅಷ್ಟೇ ನನ್ನ ಅಲ್ಲ ಯಾವುದೇ ಬಣವೂ ಇಲ್ಲ.

ಡಿಕೆಶಿ ಭೇಟಿ ಬಗ್ಗೆ ಸಾಹುಕಾರ್ ಹೇಳಿದಷ್ಟು

ಇನ್ನೊಂದೆಡೆ ಡಿಕೆ ಶಿವಕುಮಾರ್ ಜೊತೆಗಿನ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ ಸತೀಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಅವರಿಗೂ ಸಿಎಂ ಆಗುವ ಆಸೆ ಇರುತ್ತದೆ. ಆದರೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನ ಸಿಎಂ ಎಂದು ತೀರ್ಮಾನಿಸಿದೆ. ಬದಲಾವಣೆ ಏನೂ ಇಲ್ಲ. ಅಷ್ಟೇ ಅಲ್ಲ ಸಿದ್ದರಾಮಯ್ಯ ಜೊತೆಗೆ ಗುರುತಿಸಿಕೊಂಡಿದ್ದೇವೆ ಮುಂದೆಯೂ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಆತ್ಮಸಾಕ್ಷಿಯನ್ನೇ ನಂಬಿದ್ದೇನೆ ಎನ್ನುತ್ತಿರುವ ಡಿಕೆ ಶಿವಕುಮಾರ್, ಪವರ್ ಶೇರಿಂಗ್ ಆಟಕ್ಕೆ ಹೊಸ ತಿರುವು ಕೊಟ್ಟಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.



Source link

Leave a Reply

Your email address will not be published. Required fields are marked *