ಬೆಂಗಳೂರು, ಫೆಬ್ರವರಿ 13: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸದ ಬಳಿಕವೂ ಅಧಿಕಾರ ಹಸ್ತಾಂತರದ ಬಗ್ಗೆ ಯಾವುದೇ ಸ್ಪಷ್ಟ ಚಿತ್ರ ಸಿಕ್ಕಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಡಿಕೆಶಿಪಾಳಯವು ಒಂದು ಮಹತ್ವದ ಬೆಳವಣಿಗೆಯ ನಿರೀಕ್ಷೆಯಲ್ಲಿತ್ತು. ಆದರೆ ದೆಹಲಿ ಭೇಟಿಯು ಅಸ್ಸಾಂ ಚುನಾವಣೆ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಈ ಬಾರಿಯಾದರೂ ಗುಡ್ ನ್ಯೂಸ್ ಸಿಗುತ್ತದೆ ಎಂದು ಆಶಿಸಿರುವ ಬೆಂಬಲಿತ ಶಾಸಕರು ಮತ್ತೆ ನಿರಾಸೆಗೊಂಡಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿರುವುದು, ಅಧಿಕಾರ ಹಂಚಿಕೆ ವಿಚಾರವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಹೀಗಾಗಿ ಮುಂಚಿತವಾಗಿ ಬಜೆಟ್ ಈ ವಿಷಯ ಇತ್ಯರ್ಥವಾಗಬೇಕಿದೆ ಡಿಕೆಶಿ ಪಟ್ಟು ಹಿಡಿದಿದೆ ಇನ್ನು ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಇಂದು ಅಜ್ಜಯ್ಯನ ಮೊರೆ ಹೋಗಲಿದ್ದಾರೆ. ನೊಣವಿನಕೆರೆ ಅಜ್ಯಯ್ಯ ಸನ್ನಿಧಿಗೆ ತೆರಳಲಿರುವ ಡಿಸಿಎಂ, ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.