ನವದೆಹಲಿ, (ಫೆಬ್ರವರಿ 11): ಕರ್ನಾಟಕ ಕಾಂಗ್ರೆಸ್ ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದ್ದರೆ, ಇದೀಗ ದೆಹಲಿ ಅಂಗಳ ತಲುಪಿದೆ. ಸಿಎಂ ಪಟ್ಟಕ್ಕಾಗಿ ಹಿಡಿದಿರುವ ಡಿಕೆ ಶಿವಕುಮಾರ್ ಗಾಂಧಿ ಮನವೊಲಿಕೆಗೆ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಅಸ್ಸಾಂ ಚುನಾವಣಾ ಪೂರ್ವ ಸಿದ್ಧತೆ ನೆಪದಲ್ಲಿ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಭೇಟಿಗೆ ಇನ್ನಿಲ್ಲದ ಕಸರತ್ತು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಭೇಟಿಗೆ ಇನ್ನೂ ಸಮಯ ಕೇಳಿಲ್ಲ. ಅಸ್ಸಾಂ ರಾಜ್ಯದ ಚುನಾವಣೆ ವಿಚಾರದ ಜಂಜಾಟದಲ್ಲಿದ್ದೇನೆ. ನಾನು ಯಾರನ್ನೂ ಭೇಟಿ ಮಾಡಿಲ್ಲ. ಸುಮ್ಮನೇ ವಿಭಿನ್ನ ರೀತಿಯಲ್ಲಿ ಬೇಡ, ಮಾತನಾಡುತ್ತೇನೆ.