Headlines

ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್! ಯಶವಂತಪುರ-ತಾಳಗುಪ್ಪ ಸೇರಿದಂತೆ 19 ವಿಶೇಷ ರೈಲುಗಳು ಇನ್ನು ಮುಂದೆ ಖಾಯಂ

ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್! ಯಶವಂತಪುರ-ತಾಳಗುಪ್ಪ ಸೇರಿದಂತೆ 19 ವಿಶೇಷ ರೈಲುಗಳು ಇನ್ನು ಮುಂದೆ ಖಾಯಂ


ಕರ್ನಾಟಕ ಪ್ರಯಾಣಿಕರಿಗೆ ನ್ಯೂಸ್! ಯಶವಂತಪುರ-ತಾಳಗುಪ್ಪ ಸೇರಿದಂತೆ 19 ವಿಶೇಷ ರೈಲುಗಳು ಇನ್ನು ಮುಂದೆ ಖಾಯಂ

ಬೆಂಗಳೂರು, ಮಾರ್ಚ್ 24: ರಾಜ್ಯದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರೆತಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡ ರೈಲ್ವೇ ಮಂಡಳಿ (ರೈಲ್ವೆ ಮಂಡಳಿ) ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸಲಾಗಿದೆ. ಇದರಲ್ಲಿ 6 ಎಕ್ಸ್‌ಪ್ರೆಸ್, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಇವೆ. ಈ ನಿರ್ಧಾರದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಿಗೆ ಪ್ರಯಾಣಿಸುವ ಸೌಲಭ್ಯವಿದೆ.

ವಿಶೇಷ ರೈಲುಗಳ ಓಡಾಟದ ಸೇವೆಗಳು ಸಾಮಾನ್ಯವಾಗಿ ಹೆಚ್ಚಿನ ದರ ಮತ್ತು ಅನಿಶ್ಚಿತವಾಗಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದ್ದವು. ಈಗ ಖಾಯಂ ಸೇವೆಗೆ ಪರಿವರ್ತನೆಯಾದ ಟಿಕೆಟ್ ದರದಲ್ಲಿ ಗಮನಾರ್ಹ ಇಳಿಕೆ ಸಾಧ್ಯತೆ ಇದೆ. ಸ್ಲೀಪರ್ ಕೋಚ್‌ಗಳಲ್ಲಿ ಶೇ30 ರವರೆಗೆ ಮತ್ತು ಸಾಮಾನ್ಯ ಟಿಕೆಟ್‌ಗಳಲ್ಲಿ ಶೇ 10-15 ರವರೆಗೆ ದರ ಕಡಿಮೆಯಾಗಲಿದೆ.

ಈ 6 ವಿಶೇಷ ರೈಲುಗಳು ಖಾಯಂ

  • ಮೈಸೂರು – ಅಜ್ಮೀರ್ ಎಕ್ಸ್‌ಪ್ರೆಸ್‌ (ರೈ.ಸಂ 16281/16282) ವಾರಕ್ಕೊಮ್ಮೆ ಸಂಚರಿಸಲಿದೆ
  • ಬೆಂಗಳೂರು ದಂಡು – ಕಲಬುರಗಿ ಎಕ್ಸ್‌ಪ್ರೆಸ್‌ (ರೈ.ಸಂ 16563/16564) ವಾರಕ್ಕೊಮ್ಮೆ ಸಂಚರಿಸಲಿದೆ
  • SMVT ಬೆಂಗಳೂರು – ಬೀದರ್ ಎಕ್ಸ್‌ಪ್ರೆಸ್‌ (ರೈ.ಸಂ 16559/16560) ವಾರಕ್ಕೊಮ್ಮೆ ಸಂಚರಿಸಲಿದೆ
  • ಯಶವಂತಪುರ – ತಾಳಗುಪ್ಪ ಎಕ್ಸ್‌ಪ್ರೆಸ್ (ರೈ.ಸಂ16555/16556) ವಾರಕ್ಕೊಮ್ಮೆ ಸಂಚರಿಸಲಿದೆ
  • ಹುಬ್ಬಳ್ಳಿ – ಯೋಗನಗರಿ ರಿಷಿಕೇಶ ಎಕ್ಸ್‌ಪ್ರೆಸ್ (ರೈ.ಸಂ17363/17364) ವಾರಕ್ಕೊಮ್ಮೆ ಸಂಚರಿಸಲಿದೆ
  • ಮಡಗಾಂವ್ – ಕಾರವಾರ ಎಕ್ಸ್‌ಪ್ರೆಸ್ (ರೈ.ಸಂ 10109/10110)

9 ಮೆಮು, ಡೆಮು ರೈಲುಗಳ ಓಡಾಟ

  • ಬೆಂಗಳೂರು – ಹೊಸೂರು ಮೆಮು (ರೈ.ಸಂ 66595/96) ಪ್ರತಿದಿನ ಸಂಚರಿಸಲಿದೆ
  • ಹುಬ್ಬಳ್ಳಿ – ವಿಜಯಪುರ ಮೆಮು (ರೈ.ಸಂ66501/02) ಪ್ರತಿದಿನ ಸಂಚರಿಸಲಿದೆ
  • ಬೆಂಗಳೂರು – ಅಶೋಕಪುರಂ ಮೆಮು (ರೈ.ಸಂ66597/98) ಪ್ರತಿದಿನ ಸಂಚರಿಸಲಿದೆ
  • ಬೆಂಗಳೂರು – ಅಶೋಕಪುರಂ ಮೆಮು (ರೈ.ಸಂ 06213/14) ವಾರಕ್ಕೆ 3 ಬಾರಿ ಸಂಚರಿಸಲಿದೆ
  • ಬಂಗಾರಪೇಟೆ – SMVT ಬೆಂಗಳೂರು ಮೆಮು (ರೈ.ಸಂ 66537/38) ಪ್ರತಿದಿನ ಸಂಚರಿಸಲಿದೆ
  • ಹೊಸಪೇಟೆ – ಹುಬ್ಬಳ್ಳಿ ಡೆಮು (ರೈ.ಸಂ76507/08) ವಾರಕ್ಕೊಮ್ಮೆ ಸಂಚರಿಸಲಿದೆ
  • ಬಳ್ಳಾರಿ – ದಾವಣಗೆರೆ ಡೆಮು (ರೈ.ಸಂ76509/10)ವಾರಕ್ಕೆ 6 ದಿನ ಸಂಚರಿಸಲಿದೆ
  • ಬೆಂಗಳೂರು – ಹಾಸನ ಡೆಮು (ರೈ.ಸಂ66525/26)ವಾರಕ್ಕೆ 6 ದಿನ ಸಂಚರಿಸಲಿದೆ
  • ಬಳ್ಳಾರಿ – ಹೊಸಪೇಟೆ ಡೆಮು (ರೈ.ಸಂ07397/98) ವಾರಕ್ಕೆ 6 ದಿನ ಸಂಚರಿಸಲಿದೆ

ಇದರ ಜೊತೆಗೆ ಬೆಂಗಳೂರು-ಚನ್ನಪಟ್ಟಣ, ಮೈಸೂರು-ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ-ಹಿಂದೂಪುರ ಹಾಗೂ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲುಗಳು ಕೂಡ ಖಾಯಂಗೊಂಡಿವೆ. ಈ ಕ್ರಮದಿಂದ ಪ್ರಯಾಣ ಯೋಜನೆ ಸುಲಭವಾಗಿದ್ದು, ಮುಂಗಡ ಕಾಯ್ದಿರಿಸುವಿಕೆಗೆ ಅನುಕೂಲವಾಗಿದೆ. ಒಟ್ಟಾರೆಯಾಗಿ, ರೈಲ್ವೇ ಮಂಡಳಿಯ ಈ ತೀರ್ಮಾನ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *