Headlines

ಯುಗಾದಿಯಂದು ಅಧಿಕಾರಿಗಳ ಕಡ್ಡಾಯ ಹಾಜರಿಗೆ ಸೂಚನೆ: ರಂಜಾನ್​​ ದಿನ ಸಭೆ ಕರಿಯಬಹುದಿತ್ತಲ್ಲವೇ ಎಂದ ಬಿಜೆಪಿ ಶಾಸಕ

ಯುಗಾದಿಯಂದು ಅಧಿಕಾರಿಗಳ ಕಡ್ಡಾಯ ಹಾಜರಿಗೆ ಸೂಚನೆ: ರಂಜಾನ್​​ ದಿನ ಸಭೆ ಕರಿಯಬಹುದಿತ್ತಲ್ಲವೇ ಎಂದ ಬಿಜೆಪಿ ಶಾಸಕ


ಯುಗಾದಿಯಂದು ಅಧಿಕಾರಿಗಳ ಕಡ್ಡಾಯ ಹಾಜರಿಗೆ ಸೂಚನೆ: ರಂಜಾನ್ ದಿನ ಸಭೆ ಕರಿಯಬಹುದಿತ್ತಲ್ಲವೇ ಎಂದ ಬಿಜೆಪಿ ಶಾಸಕ

ಬೆಂಗಳೂರು, ಮಾರ್ಚ್ 18: ವಿಧಾನಸಭೆಯಲ್ಲಿ ಪ್ರಶ್ನೆ ಉತ್ತರ ನೀಡುವುದು ಬಾಕಿ ಹಿನ್ನೆಲೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಯುಗಾದಿ (ಯುಗಾದಿ) ಹಬ್ಬದ ರಜೆಯನ್ನು ಕಡಿತಗೊಳಿಸಲಾಗಿದೆ. ಆ ಮೂಲಕ ಹಬ್ಬದ ದಿನವೂ ಕಡ್ಡಾಯ ಪ್ರವೇಶಕ್ಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟರಿಯಾ ಸೂಚನೆ.

ಯುಗಾದಿ ಹಬ್ಬದ ದಿನವೂ ಕಡ್ಡಾಯ ಹಾಜರಿಗೆ ಸೂಚನೆ

ಕರ್ನಾಟಕ ವಿಧಾನ ಸಭೆ ಸಮಾರಂಭದಲ್ಲಿ ಕಛೇರಿ ಮಾರ್ಚ್ 23 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳು ಬಾಕಿ ಉಳಿದಿವೆ. ಸೂಚಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಜೊತೆಗಿನ ಮದುವೆ ಹಿಂಸಾತ್ಮಕವಾಗಿ ವಿಚ್ಛೇದನ: ಖರ್ಗೆ ಹೇಳಿಕೆಗೆ ದೇವೇಗೌಡರ ಕೌಂಟರ್

ಮೊನ್ನೆಯಷ್ಟೇ ಸರ್ಕಾರದ ಕಡೆಯಿಂದ ಉತ್ತರ ಬಾರದೇ ಇರುವುದಕ್ಕೆ ಸ್ಪೀಕರ್ ಅಸಮಾಧಾನಗೊಂಡಿದ್ದರು. ಸ್ಪೀಕರ್ ಕಿಡಿ ಹಿನ್ನೆಲೆ ಸಿಎಂ ಸಿದ್ದರಾಮಯ್ಯರಿಂದ 9 ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಕೊಟ್ಟ ಕಾರಣಕ್ಕೆ ಹಿರಿಯ ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಹಬ್ಬದ ಖುಷಿ ಇಲ್ಲದಂತೆ ಮಾಡಿದ್ದಾರೆ. ಒಂದು ರೀತಿಯಲ್ಲಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಿಲ್ಲ.

ಸರ್ಕಾರದ ನಡೆಗೆ ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯ

ಇನ್ನು ಈ ಬಗ್ಗೆ ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಮತ್ತೊಮ್ಮೆ ತನ್ನ ವಿವೇಚನಾ ಕೊರತೆಯನ್ನು ಪ್ರದರ್ಶಿಸಿದ ಸರ್ಕಾರ. ನಾಳೆ, ಗುರುವಾರ 19.3.26. ನಮ್ಮ ನಾಡಿನಲ್ಲಿ ಚಂದ್ರಮಾನ ಯುಗಾದಿ ಹಬ್ಬ. ಎಲ್ಲಾ ಹಿಂದೂಗಳು ಆಚರಿಸುವ ದೊಡ್ಡ ಹಬ್ಬ. ನಮ್ಮ ಹೊಸ ವರ್ಷದ ವರುಷದ ಆರಂಭ.

ಈ ಹಬ್ಬದ ದಿನವೇ ಹಾಜರಿರಲು ದೈಹಿಕ ಇಲಾಖೆಯಿಂದ ಸೂಚನೆ ಪತ್ರ ಕೊಟ್ಟಿರುವುದು ಯಾವ ಪ್ರಸ್ತುತ? ನಾಡಿದ್ದು, ಶುಕ್ರವಾರ ಅಥವಾ ಶನಿವಾರ ಈ ಸಭೆ ಕರಿಯಬಹುದಿತ್ತಲ್ಲವೇ? ಓ! ಮರೆತಿದ್ದೆ. ಶುಕ್ರವಾರ, ಶನಿವಾರ ರಂಜಾನ್ ಅಲ್ಲವೇ? ಅಂದು ಕರೆದರೆ ಈ ಸರ್ಕಾರ ಜಾತ್ಯತೀತವಾಗುವುದಿಲ್ಲ.

ಇದನ್ನೂ ಓದಿ: ಲೋಪ ಬೆನ್ನಲ್ಲೇ ಜಿಬಿಎ ಮತದಾರರ ಪಟ್ಟಿ ಆಕ್ಷೇಪಣೆಗೆ ನೀಡಿದ್ದ ಕಾಲಾವಕಾಶ ವಿಸ್ತರಣೆ

ಯುಗಾದಿ ಹಬ್ಬದ ದಿನವೇ ರಜೆ ದಿನವಾಗಿದ್ದರೂ ಸರ್ಕಾರಿ ಅಧಿಕಾರಿಗಳನ್ನು ಕರೆಯುವುದು ನಿಜವಾದ ಜಾತ್ಯತೀತತೆ! ವಾಹ್! ಕರ್ನಾಟಕ ಸರ್ಕಾರದ ಈ ನಡೆಗೆ ಭೇಷ್ ಅನ್ನಬೇಕೋ ಅಥವಾ ಛೀ ಅನ್ನಬೇಕೋ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *