ಕಾರವಾರ, ಜನವರಿ 11: ಬೇಡ್ತಿ-ವರ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆಗೆ ಇಂದು ಉತ್ತರ ಕನ್ನಡ ಜಿಲ್ಲೆ ಶಿರಸಿ ಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಯಿತು. ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀ ಸಮಾವೇಶದ ನೇತೃತ್ವ ವಹಿಸಿದ್ದರು. ಈ ಬಗ್ಗೆ ಟಿವಿ9 ಜೊತೆಗೆ ಅವರು ಮಾತನಾಡಿದರು, ಯೋಜನೆ ಜಾರಿಯಾದರೆ ನದಿಯ ಸಹಜ ನೀರಿನ ಹರಿವು ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿಯುತ್ತದೆ. ಇಡೀ ಜಿಲ್ಲೆ ಬರಪೀಡಿತವಾಗುವ ಅಪಾಯವಿದೆ. ಈ ಯೋಜನೆಯು ಯಶಸ್ವಿಯಾಗಿ ಮಾರಕವಾಗಿದೆ, ಶಾಶ್ವತ ವಿನಾಶಕ್ಕೆ ಕಾರಣವಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.