ನವೆಂಬರ್ ಮುಗಿಯುವುದರೊಳಗೆ ಬಾಕಿ ಇರುವ ಎಲ್ಲಾ ವಾಹನ ನೋಂದಣಿ ಅರ್ಜಿಗಳನ್ನು ಪೂರ್ಣಗೊಳಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ
ಬೆಂಗಳೂರು, ನವೆಂಬರ್ 14: ರಾಜ್ಯದಲ್ಲಿ ಬಾಕಿ ಇರುವ ಎಲ್ಲಾ ವಾಹನ ನೋದಣಿ ಅರ್ಜಿಗಳನ್ನು ಪೂರ್ಣಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆರ್ಟಿಓ (RTO) ಗಳಿಗೆ ಸೂಚನೆ ನೀಡಲಾಗಿದೆ. ಗುರುವಾರ (ನ.13)ದಂದು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸಾಕಷ್ಟು ನೋಂದಣಿ ಅರ್ಜಿಗಳು ಬಾಕಿ ಇವೆ. ಅದರ ಜೊತೆಗೆ ಶೇ. 50ರಷ್ಟು ಹೊಸ ನೋಂದಣಿ ಅರ್ಜಿಗಳು ಸಲ್ಲಿಕೆಯಾಗಿವೆ. ನವೆಂಬರ್ 30 ರೊಳಗೆ ಈ ಎಲ್ಲಾ ಅಜಿರ್ಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಬೇಕು ಎಂದು ಹೇಳಿದರು. ಅರ್ಜಿಗಳ ಡಿಜಿಟಲೀಕರಣದಲ್ಲಿ ಕೆಲವು ಸಾಫ್ಟ್ವೇರ್ ದೋಷಗಳು ಕಂಡುಬಂದಿವೆ, ಇಲಾಖೆಯು ದೋಷಗಳನ್ನು ಸರಿಪಡಿಸುವ ಪ್ರಯತ್ನದಲ್ಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿ.
ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸಲು ಸೂಚನೆ
ಫಿಟ್ನೆಸ್ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಲೋಕಲ್ ಬಸ್ ಆಗಿರಲಿ, ಐಷಾರಾಮಿ ಬಸ್ ಆಗಿರಲಿ ತುರ್ತು ನಿರ್ಗಮನದ ಬಾಗಿಲು ಕಡ್ಡಾಯವಾಗಿದೆ. ಹಲವಾರು ಬಸ್ಸುಗಳಲ್ಲಿ ಕೇವಲ ತುರ್ತು ನಿರ್ಗಮನದ ಕಿಟಕಿಗಳು ಮಾತ್ರ, ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ತೊಂದರೆಯಾಗಬಹುದು. ಹೀಗಾಗಿ ತುರ್ತು ಬಾಗಿಲು ಅತ್ಯಗತ್ಯ. ಯಾವಾಗ ವಾಹನಗಳಾದರೂ ನೋಂದಣಿಯಾಗಲಿ, ನಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ನಮ್ಮ ನೀತಿ ನಿಯಮಗಳಿಗೆ ಬದ್ಧರಾಗಿರಲೇಬೇಕು ಎಂದು ರಾಮಲಿಂಗ ರೆಡ್ಡಿ ಹೇಳಿದ್ದು, ಸಾರ್ವಜನಿಕ ಸಾರಿಗೆಗಳಲ್ಲಿ ಅತಿಯಾದ ವಾಣಿಜ್ಯ ವಸ್ತುಗಳ ಸಾಗಾಟ ನಡೆದಿದ್ದು, ಇಲಾಖೆಯು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಮುಂಬರುವ ದಿನಗಳಲ್ಲಿ ಹೆಚ್ಚಿನ ಆದಾಯದ ಗುರಿ
ಅಖಿಲ ಭಾರತ ಪ್ರವಾಸಿ ಪರವಾನಗಿ ಹೊಂದಿರುವ ಬಸ್ಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಾದ್ಯಂತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೆ ರಾಜ್ಯದ ಶಾಲಾ ವಾಹನಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ ನೀಡುವ ಮೊದಲು ಸಂಪೂರ್ಣ ತಪಾಸಣೆ ನಡೆಸುವಂತೆ ಇಲಾಖೆಗೆ ತಿಳಿಸಲಾಗಿದೆ. ಅದರೊಂದಿಗೆ ಶಾಲಾ ವಾಹನಗಳ ಮಾಸಿಕ ತಪಾಸಣೆಗಾಗಿ ವಿಶೇಷ ತಂಡವನ್ನು ನೇಮಿಸುವಂತೆಯೂ ಸೂಚಿಸಲಾಗಿದೆ. ಸಧ್ಯದ ಹಣಕಾಸು ವರ್ಷದ ಸಾರಿಗೆ ಇಲಾಖೆಯು 7,451.45 ಕೋಟಿ ರೂ.ಗಳ ಆದಾಯವನ್ನು ಗಳಿಸಿದ್ದು, ಮುಂಬರುವ ಹಣಕಾಸು ವರ್ಷದಲ್ಲಿ ರಾಜ್ಯ ಸಾರಿಗೆ ಇಲಾಖೆಯು 14,457.73 ಕೋಟಿ ರೂ.ಗಳ ಆದಾಯವನ್ನು ಗಳಿಸುವಂತೆ ಸರ್ಕಾರವನ್ನು ನಿಗದಿಪಡಿಸಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.