
ಕೊಟ್ರಯ್ಯ ಅಜ್ಜನವರು ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರು ನಮ್ಮ ಕೊಟ್ಟೂರು ಭಾಗದ ಮಾನವ ಕಂಪ್ಯೂಟರ್ “ಮಗ್ಗಿ ಕೊಟ್ರಯ್ಯ” ಅಜ್ಜ. ಲಕ್ಷ ಲಕ್ಷ ಕೊಟ್ಟು ಇಂಗ್ಲಿಷ್ ಮೀಡಿಯಂ ಓದಿದವರು, ನಿಮ್ಮ ಮುಂದೆ ಬಚ್ಚಾಗಳು ತಾತ. ಯಪ್ಪಾ ದೇವರೇ, ಎನ್ ಪಾ ಇವರ್ ಟ್ಯಾಲೆಂಟ್. ದೇವರು ನಿಮಗೆ ಒಳ್ಳೆ ಆರೋಗ್ಯ ಕೊಡಲಿ ತಾತ, ಸದಾ ಹಸನ್ಮುಖಿಯಾಗಿರಿ, ನಿಮಗಿರುವ ಟ್ಯಾಲೆಂಟ್‌ಗೆ ಎಷ್ಟು ದುಡ್ಡು ಕೊಟ್ಟರೂ ಸಾಲದು ಎಂದು ಕಮೆಂಟ್ ಮಾಡಿದ್ದಾರೆ.