Headlines

ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವ ಇದ್ದರೂ ಅಪಾಯ ಫಿಕ್ಸ್​​, ಯಾಕೆ ಗೊತ್ತಾ?

ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವ ಇದ್ದರೂ ಅಪಾಯ ಫಿಕ್ಸ್​​, ಯಾಕೆ ಗೊತ್ತಾ?


ರಾಜ್ಯದಲ್ಲಿ ಬ್ಯಾನ್ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವ ಇದ್ದರೂ ಅಪಾಯ ಫಿಕ್ಸ್, ಯಾಕೆ ಗೊತ್ತಾ?

ಕೊಡಗು, ಏಪ್ರಿಲ್ 07: ಮಡಿಕೇರಿ ತಾಲೂಕಿನ ತಡಿಯಂಡಮೋಳ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿ ನಾಪತ್ತೆಯಾಗಿ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ ಬರೋಬ್ಬರಿ 4 ದಿನಗಳ ಬಳಿಕ ಸುರಕ್ಷಿತವಾಗಿ ಇದ್ದರು. ಆ ಬೆನ್ನಲ್ಲೇ ಅರಣ್ಯ ಇಲಾಖೆ ಕೊಡಗಿನ ತಡಿಯಂಡಮೋಳ ಟ್ರೆಕ್ಕಿಂಗ್ ಮಾರ್ಗವನ್ನು ಏಪ್ರಿಲ್ 11 ರಿಂದ ತಾತ್ಕಾಲಿಕವಾಗಿ ಮುಚ್ಚಿದೆ. ಈ ಮಾರ್ಗದಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಸುಧಾರಿಸುವ ಯೋಜನೆ ಕೈಗೊಂಡಿರುವ ಹಿನ್ನೆಲೆ ಈ ನಿರ್ವಾಹಕರು ಕೈಗೊಂಡಿದ್ದಾರೆ. ಮತ್ತೊಂದೆಡೆ ಸೋಲೋ ಟ್ರೆಕ್ಕಿಂಗ್ ಸಾಕಷ್ಟು ಅಪಾಯಕ್ಕೆ ಕಾರಣವಾಗಿರುವ ಕಾರಣ ಒಬ್ಬಂಟಿಯಾಗಿ ಚರಣಕ್ಕೆ ಹೋಗುವುದನ್ನು ನಿಷೇಧಿಸಬೇಕೆಂಬ ಆಗ್ರಹವೂ ಇದೆ.

ಟ್ರೆಕ್ಕಿಂಗ್ ಗೆಂದು ತೆರಳಿ ತಡಿಯಂಡಮೋಳ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಶರಣ್ಯಾಗೆ ಚರಣ ಹೊಸದೇನೂ ಆಗಿರಲಿಲ್ಲ. ಆ ಬಗ್ಗೆ ಸಾಕಷ್ಟು ಅನುಭವವಿತ್ತು. ಹೀಗಾಗಿ ಟ್ರೆಕ್ಕರ್‌ಗಳು ತುಂಬಾ ಅನುಭವ ಹೊಂದಿದ್ದರೂ ಪರಿಚಯವಿಲ್ಲದ ಮಾರ್ಗದಲ್ಲಿ ಒಬ್ಬರೇ ಟ್ರೆಕ್‌ಗೆ ಹೋಗುವುದು ಸೂಕ್ತವಲ್ಲ. ತಾವು ತೆರಳಲು ಉದ್ದೇಶಿಸಿದ ಮಾರ್ಗಗಳ ಕುರಿತು ಟ್ರೆಕ್ಕರ್‌ಗಳು ಮುಂಚಿತವಾಗಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಬೇಕು. ಒಬ್ಬರೇ ತೆರಳುವವರು ತಮ್ಮ ಹಾದಿಯನ್ನು ಜಾಗರೂಕತೆಯಿಂದ ಗುರುತಿಸಿಕೊಂಡು ಸಾಗಬೇಕು. ಹಲವು ಬಗೆಯ ನ್ಯಾವಿಗೇಷನ್ ಆಪ್‌ಗಳು ಲಭ್ಯವಿದ್ದು, ಅದನ್ನು ಒಳಿತು. ಏಕೆಂದರೆ ಇವುಗಳಲ್ಲಿ ಪೂರ್ವನಕ್ಷಿತ ಮಾರ್ಗಗಳು ಲಭ್ಯವಿರುತ್ತವೆ ಎಂಬ ಅಭಿಪ್ರಾಯಗಳು ಕೂಡಿವೆ. ಈ ಟ್ರೆಕ್ಕರ್‌ಗಳು ಅಗತ್ಯ ಸಾಧನಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಟಾರ್ಚ್‌ಲೈಟ್, ನೀರು ಮತ್ತು ಆಹಾರ, ಸೀಟಿ (ಶಿಳ್ಳೆ), ಪೋರ್ಟ್‌ಬಲ್ ಚಾರ್ಜರ್ ಮತ್ತು ಫಸ್ಟ್‌ಏಡ್ ಕಿಟ್

ಇದನ್ನೂ ಓದಿ: ಕೊಡಗಿನ ಟ್ರೆಕ್ಕಿಂಗ್ ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ 4 ದಿನದ ಬಳಿಕ ಪತ್ತೆ

ಈ ಕೊಡಗು ಜಿಲ್ಲೆಯ ಇತರ ಪ್ರಮುಖ ಟ್ರೆಕಿಂಗ್ ಮಾರ್ಗಗಳು ಸೋಮವಾರಪೇಟೆಯ ಬೀಡಹಳ್ಳಿಯಿಂದ ಪ್ರಾರಂಭವಾಗುವ ಕುಮಾರ ಪರ್ವತ ಟ್ರೆಕ್‌ಗೂ ಸ್ಪಷ್ಟ ಮಾರ್ಗಗಳಿದ್ದರೂ, ಅರಣ್ಯ ಪ್ರದೇಶಗಳು ಹೆಚ್ಚಾಗಿ ಸಾಗುವುದರಿಂದ ಹೆಚ್ಚಿನ ಸುರಕ್ಷತಾ ವ್ಯವಸ್ಥೆಗಳು ಬೇಕಾಗುತ್ತವೆ. ಜೊತೆಗೆ ಈ ಮಾರ್ಗಗಳಲ್ಲಿ ಎಚ್ಚರಿಕೆ ಮತ್ತು ಸೂಚನಾ ಫಲಕಗಳ ಸ್ಥಾಪನೆ, ಸಂವಹನ ಕೇಂದ್ರಗಳ ನಿರ್ಮಾಣ, ವಿಶ್ರಾಂತಿ ಶೆಲ್ಟರ್‌ಗಳ ವ್ಯವಸ್ಥೆ, ಬ್ಯಾಕಪ್ ರೆಸ್ಕ್ಯೂ ತಂಡಗಳ ನಿಯೋಜನೆ ಮತ್ತು ಬೇಸ್ ಕ್ಯಾಂಪ್‌ಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಬೇಕೇಂಬ ಬಗ್ಗೆಯೂ ಆಗ್ರಹ ಕೇಳಿಬಂದಿವೆ.

ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳುವವರಿಂದ ಅರಣ್ಯ ಇಲಾಖೆ ತಲಾ 250 ರೂ. ಆದರೆ ಚರಣ ತೆರಳುವವರ ಜೊತೆ ಯಾವುದೇ ಸಿಬ್ಬಂದಿಯನ್ನು ಕಳುಹಿಸುವುದಿಲ್ಲ. ಶರಣ್ಯಾ ಪ್ರಕರಣದಿಂದಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಾರಣ ಬರುವವರ ಜೊತೆ ಕನಿಷ್ಠ ಒಬ್ಬ ಸಿಬ್ಬಂದಿಯನ್ನು ಖಡ್ಡಾಯವಾಗಿ ಕಳುಹಿಸಬೇಕು. ಇದರಿಂದ ಚಾರಣಿಗರು ಸುರಕ್ಷಿತವಾಗಿ ಹಿಂದಿರುಗಲು ಅನುಕೂಲವಾಗುತ್ತದೆ ಎಂದು ವಕೀಲ ಅಚ್ಚಂಡಿರ ಪವನ್ ಪೆಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *