ಕರ್ನಾಟಕ ಟಿ20 ತಂಡ ಪ್ರಕಟ

ಕರ್ನಾಟಕ ಟಿ20 ತಂಡ ಪ್ರಕಟ


ನವೆಂಬರ್ 26 ರಿಂದ ಶುರುವಾಗಲಿರುವ ದೇಶೀಯ ಅಂಗಳದ ಟಿ20 ಕರ್ನಾಟಕ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರು ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಹೊಸಮುಖಗಳಾಗಿ ಶ್ರೀಕರ್ ಶೆಟ್ಟಿ ಹಾಗೂ ಶ್ರೀವತ್ಸ ಆಚಾರ್ಯ ಕಾಣಿಸಿಕೊಂಡಿದ್ದಾರೆ. ಅನುಭವಿ ದಾಂಡಿಗ ಕರುಣ್ ನಾಯರ್ ಮತ್ತೆ ಕರ್ನಾಟಕ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನು ತಂಡದಲ್ಲಿ ಬ್ಯಾಟರ್‌ಗಳಾಗಿ ಮ್ಯಾಕ್ನೀಲ್ ನೊರೊನ್ಹಾ, ಸ್ಮರಣ್ ರವಿಚಂದ್ರನ್, ದೇವದತ್ ಪಡಿಕ್ಕಲ್, ಅಭಿನವ್ ಮನೋಹರ್ ಇದ್ದರೆ, ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ಶ್ರೀಜಿತ್ ಹಾಗೂ ಬಿಆರ್ ಶರತ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಕೂಡ ಕರ್ನಾಟಕ ತಂಡದಲ್ಲಿದ್ದಾರೆ.

ಇವರೊಂದಿಗೆ ಬೌಲರ್‌ಗಳಾಗಿ ವಿಜಯಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಪ್ರಶಸ್ತಿಗೆ ಕರ್ನಾಟಕ ತಂಡ ಈ ಕೆಳಗಿನಂತಿದೆ…

ಕರ್ನಾಟಕ ಟಿ20 ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಮ್ಯಾಕ್ನೀಲ್ ನೊರೊನ್ಹಾ, ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಶಿಖರ್ ಶೆಟ್ಟಿ, ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಶ್ರೀವತ್ಸಂಗ್ ಆಚಾರ್ಯ, ಪ್ರವೀತ್ ಬಿಗ್ ಆರ್. ಪಡಿಕ್ಕಲ್.

ಇದನ್ನೂ ಓದಿ: IND vs SA: ಟೀಮ್ ಇಂಡಿಯಾಗೆ ಕನ್ನಡಿಗ ನಾಯಕ?

ಕರ್ನಾಟಕ ತಂಡ:

ಸೈಯ್ಯದ್ ಮುಷ್ತಾಕ್ ಅಲಿ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಕರ್ನಾಟಕ ತಂಡವು ಉತ್ತರಾಖಂಡ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಜಾರ್ಖಂಡ್ ಹಾಗೂ ರಾಜಸ್ಥಾನ ತಂಡಗಳ ವಿರುದ್ಧ ಸೆಣಸಲಿದೆ. ಜೊತೆಗೆ ಕರ್ನಾಟಕ ತಂಡ ನಾಲ್ಕನೇ ಎದುರಾಳಿ ತಮಿಳುನಾಡು. ಈ ಪಂದ್ಯಗಳ ಬಳಿಕ ಕರ್ನಾಟಕ ತಂಡವು ದೆಹಲಿ, ಸೌರಾಷ್ಟ್ರ ಹಾಗೂ ತ್ರಿಪುರ ತಂಡಗಳನ್ನು ಎದುರಿಸಲಿದೆ.

  • ನವೆಂಬರ್ 26- ಕರ್ನಾಟಕ vs ಉತ್ತರಾಖಂಡ್
  • ನವೆಂಬರ್ 28- ಕರ್ನಾಟಕ vs ಜಾರ್ಖಂಡ್
  • ನವೆಂಬರ್ 30- ಕರ್ನಾಟಕ vs ರಾಜಸ್ಥಾನ
  • ಡಿಸೆಂಬರ್ 2- ಕರ್ನಾಟಕ vs ತಮಿಳುನಾಡು
  • ಡಿಸೆಂಬರ್ 4- ಕರ್ನಾಟಕ vs ದೆಹಲಿ
  • ಡಿಸೆಂಬರ್ 6- ಕರ್ನಾಟಕ vs ಸೌರಾಷ್ಟ್ರ
  • ಡಿಸೆಂಬರ್ 8- ಕರ್ನಾಟಕ vs ತ್ರಿಪುರ



Source link

Leave a Reply

Your email address will not be published. Required fields are marked *