Headlines

Madikeri: ಅರಣ್ಯ ಸಿಬ್ಬಂದಿಯಿಂದಲೇ ಮರಗಳ್ಳತನ; ರಕ್ಷಕನೇ ಇಲ್ಲಿ ಭಕ್ಷಕ!

Madikeri: ಅರಣ್ಯ ಸಿಬ್ಬಂದಿಯಿಂದಲೇ ಮರಗಳ್ಳತನ; ರಕ್ಷಕನೇ ಇಲ್ಲಿ ಭಕ್ಷಕ!


ವಶಪಡಿಸಿಕೊಳ್ಳಲಾಗಿದೆ ಮರದ ದಿಮ್ಮಿಗಳು.

ಮಡಿಕೇರಿ, ಡಿಸೆಂಬರ್ 23: ಬೇಲಿಯೇ ಎದ್ದು ಹೊಲ ಮೆಯ್ದಂತೆ ಎಂಬ ಗಾದೆ ಕೊಡಗಿನಲ್ಲಿ ಅಕ್ಷರಶಃ ಸತ್ಯವಾಗಿದೆ. ಕಾಡಿನಲ್ಲಿ ಅಪಾರ ಬೆಲೆ ಬಾಳುವ ಮರಗಳ ರಕ್ಷಣೆ ಕೆಲಸ ಮಾಡಬೇಕಿದ್ದ ಸಿಬ್ಬಂದಿಯೇ ಅವರ ಮಾರಣ ಹೋಮ ಮಾಡಿ ಕಳ್ಳತನ ನಡೆಸುತ್ತಿದ್ದ ಎಂಬ ಸರ್ಕಾರಿ ವಿಷಯ ಇಲಾಖೆ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಮರಗಳ್ಳತನ ಆರೋಪಿಗಳನ್ನು ಹಿಡಿಯಲು ಹೋದ ಅರಣ್ಯ ಸಿಬ್ಬಂದಿಯೇ ಘಟನೆಯಿಂದಾಗಿ ಶಾಕ್ ಆಗಿದ್ದಾರೆ.

ಘಟನೆ ಏನು?

ಮರಗಳ್ಳತನದ ಉದ್ದೇಶದಿಂದ ಗ್ಯಾಂಗೊಂದು ಸೋಮವಾರಪೇಟೆ ತಾಲೂಕಿನ ಕಾಜೂನು ಬಳಿ ಮೀಸಲು ಅರಣ್ಯದಲ್ಲಿ 7 ತೇಗದ ಮರ ಕಡಿದು ಉರುಳಿಸಿರೋದು ಗಸ್ತು ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಗಮನಕ್ಕೆ ಬಂದಿತ್ತು. ಹೀಗಾಗಿ ಆರೋಪಿಗಳ ಸೆರೆಗೆ ಸಿಬ್ಬಂದಿ 4 ದಿನಗಳ ಕಾಲ ಕಾದು ಕುಳಿತಿದ್ದರು. ಡಿಸೆಂಬರ್ 12 ರಂದು ಮಧ್ಯರಾತ್ರಿ ಮರಗಳ್ಳರು ಅರಣ್ಯಕ್ಕೆ ಎಂಟ್ರಿಕೊಟ್ಟಿದ್ದು, ಮರಗಳ್ಳರನ್ನು ಹಿಡಿಯುವ ಸಂದರ್ಭದಲ್ಲಿ ಘರ್ಷಣೆಯಾಗಿದೆ. ಈ ವೇಳೆ ಅಧಿಕಾರಿ ಚಂದ್ರಶೇಖರ್ ಗಾಳಿಯಲ್ಲಿ 2 ಸುತ್ತು ಗುಂಡುಹಾರಿಸಿದ್ದರು. ಘಟನೆಯಲ್ಲಿ ಲೋಡರ್ ಸಂತೋಷನನ್ನು ಸಿಬ್ಬಂದಿ ಬಂಧಿಸಿದ್ದಾರೆ, ಉಳಿದ ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಎಡವಾರೆ ಮೀಸಲು ಅರಣ್ಯದಲ್ಲಿ ಒಟ್ಟು 27 ತೇಗದ ಮರಗಳು ಕಳವಾಗಿವೆ. ಕತ್ತರಿಸಿದ್ದ 7 ತೇಗದ ಮರಗಳ ಜೊತೆ ಪಿಕ್ಅಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಚೆಂದುಳ್ಳಿ ಚೆಲುವೆಯ ಮಾತಿಗೆ ಮರುಳಾಗಿ ಹೋಗಿದ್ದವ ರಸ್ತೆಯಲ್ಲಿ ಬೆತ್ತಲಾಗಿ ನಿಂತ; ಆಗಿದ್ದೇನು?

ಬಂಧಿತ ಸಂತೋಷ್ ವಿಚಾರಣೆ ವೇಳೆ ಮರಗಳ್ಳರಿಗೆ ಸಹಕಾರ ನೀಡುತ್ತಿದ್ದ ಆರ್ಟಿ ಸಿಬ್ಬಂದಿ ವಿನೋದ್ ಪಾತ್ರ ಬಯಲಾಗಿದೆ. ಅರಣ್ಯದ ಬಳಿ ಬೈಕ್ ನಲ್ಲಿ ಈತ ಮಾಹಿತಿ ನೀಡುತ್ತಿದ್ದ ಎನ್ನುತ್ತಿದ್ದ, ಮರಗಳ್ಳತನ ಬಹಿರಂಗವಾಗ್ತಿದ್ದಂತೆ ವಿನೋದ್ ತಲೆಮರೆಸಿಕೊಂಡಿದ್ದಾರೆ. ಘಟನೆ ಸಂಬಂಧ ಆರ್‌ಆರ್‌ಟಿ ಸಿಬ್ಬಂದಿ ವಿನೋದ ಸೇರಿದಂತೆ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:05 pm, ಮಂಗಳವಾರ, 23 ಡಿಸೆಂಬರ್ 25



Source link

Leave a Reply

Your email address will not be published. Required fields are marked *