
ಬೆಂಗಳೂರು, (ಮಾರ್ಚ್ 11): ಬೆಂಗಳೂರಿನ ಆರ್ಟಿಒ ಕಚೇರಿಗಳಲ್ಲಿ ಹೊರರಾಜ್ಯದ ವಾಹನಗಳಿಗೆ ಯಾವುದೇ ತಪಾಸಣೆ ನಡೆಸದೆ ಅಕ್ರಮವಾಗಿ ಅರ್ಹತಾ ಪತ್ರ (ಫಿಟ್ನೆಸ್ ಪ್ರಮಾಣಪತ್ರ) ನೀಡಲಾಗುತ್ತಿದೆ. ಆರ್ಟಿಓ ಅಧಿಕಾರಿಗಳು ವಾಹನಗಳು ತಪಾಸಣೆ ಮಾಡದೆ,ಕೆಲ ವಾಹನಗಳು ರಾಜ್ಯಕ್ಕೆ ಬಾರದಿದ್ದರೂ ಯಾವುದೇ ವಾಹನಗಳಿಗೆ ಅನಧಿಕೃತವಾಗಿ ಎಫ್ಎಸ್ಐ ನೀಡಲಾಗುತ್ತಿಲ್ಲ, ಈ ಬಗ್ಗೆ ನಿಮ್ಮ ಟಿವಿ9, ಟಿಓಗಳ ಕರ್ಮಕಾಂಡದ ಬಗ್ಗೆ ಸುದ್ದಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡ ರಾಜ್ಯ ಸಾರಿಗೆ ಇಲಾಖೆ, ಎಫ್ಸಿ ಮಾಡಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ, ಇನ್ಮುಂದೆ ಎಫ್ಸಿ ಮಾಡಬೇಕು ಅಂದರೆ ಜಿಯೋ ಫೆನ್ಸಿಂಗ್ ಕಡ್ಡಾಯಗೊಳಿಸಲಾಗಿದೆ.
ಎಫ್ಸಿಗೆ ಹೊಸ ರೂಲ್ಸ್ ಏನು?
ಎಫ್ಸಿ ಮಾಡಬೇಕು ಅಂದರೆ ಜಿಯೋ ಫೆನ್ಸಿಂಗ್ ಕಡ್ಡಾಯಗೊಳಿಸಲಾಗಿದೆ. ವಾಹನಗಳು 6 ಜಿಪಿಎಸ್ ಫೋಟೋ, ಜಿಪಿಎಸ್ ವಿಥ್ ಲೊಕೇಷನ್ ನಲ್ಲೇ ಎಫ್ಸಿ ಮಾಡಬೇಕು. ಎಲ್ಲಾ ಮಾಹಿತಿಯನ್ನು ಅಪ್ಲೋಡ್ ಮಾಡಲು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಫೋಟೋ ಅಪ್ಲೋಡ್ ಮಾಡುತ್ತಿರಲಿಲ್ಲ. ಇದೀಗ ಅದನ್ನು ಕಡ್ಡಾಯಗೊಳಿಸಿದ್ದು, ಈ ಮೂಲಕ ಆರ್ ಟಿಓಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲಾಗಿದೆ.
ಇದನ್ನೂ ನೋಡಿ: ಆರ್ ಟಿಓ ಅಧಿಕಾರಿಗಳು ಮತ್ತೊಂದು ಕಳ್ಳಾಟ ಬಯಲು
ಕೇರಳ, ಮಹಾರಾಷ್ಟ್ರ, ಗುಜರಾತ್ ರಾಜ್ಯದ ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, 10,022 ವಾಹನಗಳಿಗೆ ಕೋರ ಆರ್ಟಿ ಕಚೇರಿಯ ಮೋಟಾರು ನಿರೀಕ್ಷಕರು ಎಫ್ಎಸ್ಸಿ ನೀಡಿದ್ದ ಬಗ್ಗೆ, ಕಳೆದ ಫೆಬ್ರವರಿ 13 ರಂದು ಟಿವಿ9 ಕನ್ನಡ ಪ್ರಸಾರ ಮಾಡಿತ್ತು.ಇತ್ತ ಗುಜರಾತ್ ನ 41 ವಾಹನಗಳಿಗೆ ಅನಧಿಕೃತವಾಗಿ ಎಫ್ಎಸ್ಸಿ ನೀಡಿದ ಟಿವಿ9 ಕನ್ನಡ ಜನವರಿ- 20 ರಂದು ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನೆಲೆ ನಿಸಾರ್ ಅಹಮದ್ ನನ್ನ ಸಾರಿಗೆ ಇಲಾಖೆ ಆಯುಕ್ತರು ಸಸ್ಪೆಂಡ್ ಮಾಡಿದರು. ಬಳಿಕ ಅಲರ್ಟ್ ಆಗಿರುವ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಖಡಕ್ ರೂಲ್ಸ್ ಜಾರಿ ಮಾಡಿದ್ದಾರೆ.