ಬೆಂಗಳೂರು, ಡಿ.18: ಬೆಂಗಳೂರು ಸೇರಿದಂತೆ ರಾಜ್ಯದ (ಕರ್ನಾಟಕ ಹವಾಮಾನ ಮುನ್ಸೂಚನೆ) ಹಲವು ಭಾಗಗಳಲ್ಲಿ ಇಂದು ಒಣಹವೆ ವಾತಾವರಣ ಇರಲಿದೆ. ಜೊತೆಗೆ ಗಾಳಿ ಗುಣಮಟ್ಟದಲ್ಲಿ ಬದಲಾವಣೆಗಳು ಆಗಲಿವೆ. ಕೆಲವು ಜಿಲ್ಲೆಗಳಲ್ಲಿ ಮಂಜು ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ 15°C, ಬೆಂಗಳೂರು ಗ್ರಾಮಾಂತರ 14°C ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಇಂದು ತಾಪಮಾನ ಶೇಕಡ 24.4ರಷ್ಟು ಇರಲಿದೆ. ಹಾಗೂ ಬೆಂಗಳೂರು ಗ್ರಾಮೀಣ ಭಾಗದಲ್ಲಿ ಶೇಕಡ 24.6ರಷ್ಟು ಇದೆ. ಶುಕ್ರವಾರ (ಡಿ.19) ಹಾಗೂ ಶನಿವಾರ (ಡಿ.20) ಕೂಡ ಇದೆ ತಾಪಮಾನ ಇರಬಹುದು ಎಂದು ಹವಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದ ಭಾಗದಲ್ಲಿ ಇಂದು ಮಂಜಿನ ವಾತಾವರಣ ಇರಲಿದೆ. ಗ್ರಾಮೀಣ ಭಾಗದಲ್ಲಿ ಮಂಜು ಮತ್ತು ಮಬ್ಬು ಎರಡು ಕೂಡ ಕಾಣಿಸಲಿದೆ.
ಇನ್ನು ಉತ್ತರ ಕರ್ನಾಟಕ ಭಾಗಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಕೂಡ ಹವಾಮಾನ ಇರಲಿದೆ ಎಂದು ಇಲಾಖೆ ತಿಳಿಸಿದೆ. ಇನ್ನು ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಹೆಚ್ಚಾಗಿ ಒಣ ಹವೆ ಇರುತ್ತದೆ, ಆಕಾಶವು ಶುಭ್ರ ನಡುವೆ, ಸೂರ್ಯಾಸ್ತದ ನಂತರ ತಾಪಮಾನದಲ್ಲಿ ತೀವ್ರ ಕುಸಿತ ಕಂಡುಬರುತ್ತದೆ. ಇಲ್ಲಿಗೆ ಕರಾವಳಿ ಭಾಗದಲ್ಲಿ ಮಧ್ಯಮ ಉಷ್ಣತೆ ಮತ್ತು ತೇವಾಂಶ ಇರುತ್ತದೆ. ಮಂಗಳೂರಿನಂತಹ ನಗರಗಳಲ್ಲಿ ಗರಿಷ್ಠ ತಾಪಮಾನ 33°C ಸಮೀಪ ಇರುತ್ತದೆ .
ಇದನ್ನೂ ಓದಿ: ದಟ್ಟ ಮಂಜಿನಿಂದ 4ನೇ ಟಿ20 ಪಂದ್ಯ ರದ್ದು; ಸರಣಿಯಲ್ಲಿ ಭಾರತದ ಮೇಲುಗೈ
ಬೀದರ್, ಹಾವೇರಿ, ಮತ್ತು ದಾವಣಗೆರೆಯಲ್ಲಿ 24 ಗಂಟೆಗಳ ಕಾಲ, ಶೀತ ಅಲೆಗಳ ಸ್ಥಿತಿ ಮುಂದುವರಿಯುವ ಬಗ್ಗೆ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಒಳನಾಡಿನ ಜಿಲ್ಲೆಗಳಲ್ಲಿ ಮುಂಜಾನೆ ಮಂಜು ಅಥವಾ ಮಂಜು ಕವಿದಿರುವ ಸಾಧ್ಯತೆಯಿದೆ, ಬೆಳಗಿನ ಪ್ರಯಾಣ ಮಾಡುವವರು ತುಂಬಾ ಎಚ್ಚರಿಕೆಯಿಂದ ಪ್ರಯಾಣಿಸಲು ಇಲಾಖೆ ತಿಳಿಸಿದೆ. ಇನ್ನು ಇಂದು ರಾಜ್ಯದ ಯಾವುದೇ ಭಾಗದಲ್ಲೂ ಇಂದು ಮಳೆಯಾಗುವ ಸಾಧ್ಯತೆಗಳಿಲ್ಲ. ಮಳೆಯಾಗುವ ಸಾಧ್ಯತೆ 0% ನಷ್ಟಿದೆ ಎಂದು ಇಲಾಖೆ ಹೇಳಿದೆ.
ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಮೋದಿ ಇರಲಿದೆ, ತಂಪು ವಾತಾವರಣದ ಅನುಭವ ಪ್ರದರ್ಶನ. ಉತ್ತರ ಒಳನಾಡಿನ ಇತರ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ರಾಯಚೂರು, ಕಲಬುರಗಿ ಮತ್ತು ಯಾದಗಿರಿಗಳಲ್ಲಿ ಕನಿಷ್ಠ ತಾಪಮಾನ 12°C ಮತ್ತು 14°C ನಡುವೆ ಇರುತ್ತದೆ ಎಂದು ವರದಿಯಾಗಿದೆ. ಈ ಪ್ರದೇಶಗಳಲ್ಲಿ ಬೆಳಿಗ್ಗೆ ಅಸಾಮಾನ್ಯವಾಗಿ ಶೀತ, ಕೆಲವು ಸ್ಥಳಗಳಲ್ಲಿ ಮಂಜು ಕವಿದ ವಾತಾವರಣ ಮತ್ತು ಸೂರ್ಯಾಸ್ತದ ನಂತರ ತೀವ್ರ ಚಳಿ ಇರುತ್ತದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ