ಬೆಂಗಳೂರು, ಜ.15: ಇಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ (ಕರ್ನಾಟಕ ಹವಾಮಾನ) ವಾತಾವರಣ ಹೇಗಿದೆ. ಹವಾಮಾನ ಇಲಾಖೆ ನೀಡಿದ ಸೂಚನೆಗಳೇನು? ಇಲ್ಲಿ ತಿಳಿದುಕೊಳ್ಳಬಹುದು, ಕರ್ನಾಟಕದಾದ್ಯಂತ ಹವಾಮಾನವು ಮಿಶ್ರವಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಹಿತಕರವಾದ ವಾತಾವರಣವಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೀತಗಾಳಿಯ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28°C ರಿಂದ 29°C ವರೆಗೆ ಇರುತ್ತದೆ, ಕನಿಷ್ಠ ತಾಪಮಾನ 16°C ಇರಲಿದೆ. ಮುಂಜಾನೆ ಮಂಜು ಮುಸುಕಿದ ವಾತಾವರಣವಿದ್ದು, ದಿನವಿಡಿ ಮೋಡ ಕವಿದ ಹವಾಮಾನವಿದೆ. ಮಳೆ ಬರುವ ಸಾಧ್ಯತೆ ತೀರಾ ಕಡಿಮೆ.
ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಶೀತಗಾಳಿ (ಶೀತ ಅಲೆ) ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಇದೆ. ಈ ಭಾಗಗಳಲ್ಲಿ ಕನಿಷ್ಠ ತಾಪಮಾನವು ಕಡಿಮೆಯಾಗಲಿದೆ. ಇನ್ನು ಹೊನ್ನಾವರ, ಮಂಗಳೂರು ಮತ್ತು ಕಾರವಾರ ಭಾಗಗಳಲ್ಲಿ ಶುಷ್ಕ ಹವಾಮಾನವಿದ್ದು, ಗರಿಷ್ಠ ತಾಪಮಾನವು 33°C – 35°C ದಾಖಲಾಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಒಣ ಹವಾಮಾನವಿರಲಿದೆ, ರಾತ್ರಿಯ ಸಮಯದಲ್ಲಿ ಚಳಿ ಹೆಚ್ಚಾಗಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯೆಲ್ಲೋ ಲೈನ್ನಲ್ಲಿ ಇಂದಿನಿಂದ 7ನೇ ರೈಲು ಸಂಚಾರ
ಇನ್ನು ರಾಜ್ಯದ ಹವಾಮಾನ ವರದಿಯ ಪ್ರಕಾರ, ಕರ್ನಾಟಕದ ಬಯಲು ಪ್ರದೇಶವಾದ ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 11.0°C ದಾಖಲಾಗಿದೆ. ಈ ಮಧ್ಯೆ, ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶುಷ್ಕ ಹವಾಮಾನದ ಪರಿಸ್ಥಿತಿ ಇರುತ್ತದೆ. ಮೋಡ ಕವಿದಿದೆ, ಬೆಳಗಿನ ಜಾವ ಮಂಜಿನ ವಾತಾರಣ ಇರಲಿದೆ. ಹಗಲು ಮತ್ತು ರಾತ್ರಿ ತಾಪಮಾನವು ಸ್ಥಿರವಾಗಿದೆ . ಗರಿಷ್ಠ 27°C ಮತ್ತು ಕನಿಷ್ಠ 17°C ಹತ್ತಿರ ಇರುತ್ತದೆ. ಒಟ್ಟಾರೆಯಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದರೆ, ಉತ್ತರ ಭಾಗದಲ್ಲಿ ಚಳಿಯ ಪ್ರಭಾವ ಹೆಚ್ಚಾಗಿರುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ