ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ನಡೆಯಿತು ಸ್ವಾರಸ್ಯಕರ ಚರ್ಚೆ

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ನಡೆಯಿತು ಸ್ವಾರಸ್ಯಕರ ಚರ್ಚೆ


ಬೆಳಗಾವಿ, ಡಿಸೆಂಬರ್ 16: ಬೆಳಗಾವಿ ಚಳಿಗಾಲದ ಅಧಿವೇಶನ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೆಳೆದಿದ್ದು, ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಗುದ್ದಾಟದ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಸುರೇಶ್ ಕುಮಾರ್, ‘ಮುಖ್ಯಮಂತ್ರಿಗಳು ಈ ಹಿಂದೆ ನಾನು ಏಕವಚನದಲ್ಲಿ ಮಾತನಾಡಿದ್ದೇನೆ. ಆದರೆ ಈಗ ನಾವು ಎಂಬ ಬಹುವಚನಕ್ಕೆ ಬದಲಾಗಿದ್ದೇವೆ’ ಎಂದು ಟಾಂಗ್ ಕೊಟ್ಟರು. ಸಿದ್ದರಾಮಯ್ಯ ಅವರ ಈ ವರ್ತನೆಯು ವೈಯಕ್ತಿಕ ನಾಯಕತ್ವದಿಂದ ಸಾಮೂಹಿಕ ನಾಯಕತ್ವದ ಕಡೆಗೆ ಬದಲಾಗುತ್ತಿದೆ ಎಂದು ಸುರೇಶ್ ಕುಮಾರ್, ಕನಕದಾಸರ ಮಾತು (ನಾನು ಹೋದರೆ ಹೋದೆನು) ಉಲ್ಲೇಖಿಸಲಾಗಿದೆ. ‘ನಾನು’ ಹೋಗಿ ‘ನಾವು’ ಆಗಿದ್ದೇವೆ. ನಾವು ಸರ್ಕಾರ ನಡೆಸಿದೆ ಎಂದು ಹೇಳಲಾಗುತ್ತಿದೆ. ಆಗಿರುವ ಸಿದ್ದರಾಮಯ್ಯ, ಇದು ‘ನನ್ನ ಸರ್ಕಾರ’ ಎನ್ನುವುದರ ‘ನಮ್ಮ ಸರ್ಕಾರ’ ಎಂಬುದೇ ಸರಿ. ನನ್ನನ್ನು ಕನಕ ದಾಸರ ಜೊತೆ ಹೋಲಿಸಬೇಡಿ ಎಂದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *