ಬೆಂಗಳೂರು, ನವೆಂಬರ್ 21: ಜನಸಂಖ್ಯೆ, ವಾಹನ ಮತ್ತು ಉದ್ಯಮಗಳ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿಗೆ ಒತ್ತಡ ಕಡಿಮೆ ಮಾಡಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. ಬೆಂಗಳೂರಿನಿಂದ ಹೊರಗೆ, ಕರ್ನಾಟಕ (ಕರ್ನಾಟಕ) ಇತರ ಭಾಗಗಳಿಗೆ ಸ್ಟಾರ್ಟಪ್‌ಗಳನ್ನು (ಸ್ಟಾರ್ಟ್‌ಅಪ್‌ಗಳು) ನೆಲೆಗೊಳಿಸುವ ದೃಷ್ಟಿಯಲ್ಲಿ ನೀತಿಗಳನ್ನು ರೂಪಿಸಲಾಗಿದೆ. ಬೆಂಗಳೂರು ಹೊರಗೆ ಸ್ಥಾಪನೆಯಾಗುವ ಸ್ಟಾರ್ಟಪ್‌ಗಳಿಗೆ ನಾನಾ ರೀತಿಯ ಉತ್ತೇಜನಗಳನ್ನು ಸರ್ಕಾರ ಒದಗಿಸಲು ಸಿದ್ಧವಿದೆ. ಬೆಂಗಳೂರಿನಿಂದ ಹೊರಗೆ ಉದ್ಯೋಗ ವರ್ಗಾವಣೆ ಆಗುವ ವ್ಯಕ್ತಿಗೂ 50,000 ರೂ ನೀಡಲು ಸರ್ಕಾರ ಸಿದ್ಧವಾಗಿದೆ.
ಬೆಂಗಳೂರು ಟೆಕ್ ಸಮಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (ಸಿದ್ದರಾಮಯ್ಯ) ಅವರು ಮೂರು ಪ್ರಮುಖ ನೀತಿಗಳನ್ನು ಬಿಡುಗಡೆ ಮಾಡಿದ್ದಾರೆ. 2025-30ರ ಕರ್ನಾಟಕದ ಐಟಿ ನೀತಿ, ಬಾಹ್ಯಾಕಾಶ ತಂತ್ರಜ್ಞಾನ ನೀತಿ, ಮತ್ತು ಸ್ಟಾರ್ಟಪ್ ನೀತಿಗಳನ್ನು ಸರ್ಕಾರ ಅನಾವರಣಗೊಳಿಸಿದೆ. ಐಟಿ ಮತ್ತು ಸ್ಟಾರ್‌ಟಪ್ ಸೆಕ್ಟರ್‌ಗಳಲ್ಲಿ ರಾಜ್ಯದ ನಾಯಕತ್ವ ಸ್ಥಾನವನ್ನು ಉಳಿಸಿಕೊಂಡು ಹೋಗಲು ಈ ನೀತಿಗಳು ಸಹಕಾರಿಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; ಹಳೆಯ 29 ಕಾನೂನುಗಳ ಬದಲಿಗೆ ಹೊಸ 4 ಕಾನೂನು ಸಂಹಿತೆ ಜಾರಿಗೆ
ಸ್ಟಾರ್ಟಪ್ ಗಳಿಗೆ ಉತ್ತೇಜನ ನೀಡುವ ನೀತಿ…
ಬೆಂಗಳೂರಿನಲ್ಲಿರುವ ರಾಜ್ಯದ ಇತರ ನಗರಗಳಲ್ಲಿ ಸ್ಟಾರ್ಟಪ್‌ಗಳನ್ನು ಬೆಳೆಸುವ ಗುರಿಯನ್ನು ಇಡಲಾಗಿದೆ. ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಧಾರವಾಡ, ಕಲಬುರ್ಗಿಯಂತಹ ನಗರಗಳಲ್ಲಿ ಸ್ಟಾರ್ಟ್‌ಟಾಪ್ ಝೋನ್‌ಗಳು, ಇನ್ನೋವೇಶನ್ ಕ್ಲಸ್ಟರ್‌ಗಳು ಇತ್ಯಾದಿಗಳನ್ನು ನಿರ್ಮಿಸುವ ಯೋಜನೆಯನ್ನು ಮಾಡಲಾಗಿದೆ.
2030ರೊಳಗೆ 30,000 ಸ್ಟಾರ್ಟ್‌ಗಳನ್ನು ಕರ್ನಾಟಕದಲ್ಲಿ ಸ್ಥಾಪಿಸುವ ಗುರಿ ಇದೆ. 5,000 ಸ್ಟಾರ್ಟ್‌ಗಳು ಕೆಳಸ್ತರದ ನಗರಗಳಲ್ಲಿ ನಿರ್ಮಾಣವಾಗಬೇಕೆಂಬ ಆಶಯವಿದೆ.
ಹೊಸ ಸ್ಟಾರ್ಟಪ್‌ಗಳಿಗೆ ಆಫೀಸ್ ರೆಂಟ್‌ನಲ್ಲಿ ಶೇ. 50ರಷ್ಟು ರಿಂಬರ್ಸ್ಮೆಂಟ್, ಪ್ರಾಪರ್ಟಿ ಟ್ಯಾಕ್ಸ್ ಶೇ. 30 ವಿನಾಯಿತಿ ಸಿಗುತ್ತದೆ (ಸೀಮಿತ ಅವಧಿಗೆ).
ಬೆಂಗಳೂರಿನಿಂದ ಹೊರಗೆ ಶಿಫ್ಟ್ ಆಗುವ ಸ್ಟಾರ್ಟಪ್‌ಗಳಿಗೆ ಐದು ವರ್ಷ ವಿದ್ಯುತ್ ಸುಂಕದಲ್ಲಿ ವಿನಾಯಿತಿ ಸಿಗುತ್ತದೆ. 12 ಲಕ್ಷ ರೂವರೆಗೆ ಫೋನ್ ಮತ್ತು ಇಂಟರ್ನೆಟ್ ಬಿಲ್‌ನಲ್ಲಿ ರಿಯಾಯಿತಿ ಸಿಗುತ್ತದೆ. ಬೆಂಗಳೂರಿನಿಂದ ವರ್ಗಾವಣೆಯಾಗುವ ಉದ್ಯೋಗಕ್ಕೆ ಸರ್ಕಾರವು 50,000 ರೂ ಭತ್ಯೆ ನೀಡುತ್ತದೆ.
ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ
ಇನ್ನೋವೇಶನ್ ಸೆಕ್ಟರ್‌ನಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಸರ್ಕಾರ ಸಾಕಷ್ಟು ಉತ್ತೇಜನ ನೀಡಿದೆ. ಆರ್ ಅಂಡ್ ಡಿ ವೆಚ್ಚದಲ್ಲಿ ಶೇ. 40ರಷ್ಟನ್ನು ಸರ್ಕಾರ ಭರಿಸುತ್ತದೆ. ಎಐ, ಮೆಶಿನ್ ಲರ್ನಿಂಗ್, ಕ್ವಾಂಟಂ ಕಂಪ್ಯೂಟಿಂಗ್, ಬ್ಲಾಕ್‌ಚೆನ್‌ನಲ್ಲಿ ಕೆಲಸ ಮಾಡುವ ಸ್ಟಾರ್ಟಪ್‌ಗಳಿಗೆ ಹೆಚ್ಚುವರಿ ಬಂಡವಾಳ ಉತ್ತೇಜನವನ್ನು ಸರ್ಕಾರ ನೀಡಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ