Headlines

ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ

ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ


ಡೇಟಿಂಗ್ ವಿಷಯದಲ್ಲಿ ಕಾರ್ತಿಕ್ ಆರ್ಯನ್ (ಕಾರ್ತಿಕ್ ಆರ್ಯನ್) ಆಗ ಸುದ್ದಿಯಲ್ಲಿ ಇರುತ್ತಾರೆ. ಈ ಮೊದಲು ಅವರು ಅನನ್ಯಾ ಪಾಂಡೆ ಜೊತೆ ಸಿದರು ಎನ್ನಲಾಗುತ್ತದೆ. ಸಾರಾ ಅಲಿ ಖಾನ್ ಕೂಡ ಆರ್ಯನ್ ಜೊತೆ ಡೇಟಿಂಗ್ ನಡೆಸಿದ್ದರು. ಕನ್ನಡದ ಶ್ರೀಲೀಲಾ ಕೂಡ ಕೆಲ ಸಮಯ ಕಾರ್ತಿಕ್ ಜೊತೆ ಕಾಣಿಸಿಕೊಂಡಿದ್ದರು. ಇದಕ್ಕೆ ಕಾರಣ ಸಿನಿಮಾ ಎಂಬುದು ಬಳಿಕ ಸ್ಪಷ್ಟವಾಯಿತು. ಈಗ ಕಾರ್ತಿಕ್ ಅವರು ಡೇಟಿಂಗ್ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಅವರು ಅಪ್ರಾಪ್ತೆ ಜೊತೆ ಸುತ್ತಾಟ ನಡೆಸಿರುವುದು ಚರ್ಚೆಗೆ ಕಾರಣ.

ಕಾರ್ತಿಕ್ ಆರ್ಯನ್ ಇತ್ತೀಚೆಗೆ ಗೋವಾ ತೆರಳಿದ್ದರು. ಈ ವೇಳೆ ಬೀಚ್ ಸಮೀಪ ಇರುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಹುಡುಗಿ ಕೂಡ ಇದ್ದರು. ಇದು ಡೇಟಿಂಗ್ ವದಂತಿ ಹಬ್ಬಿಸಿತ್ತು. ಆದರೆ, ಆ ಹುಡುಗಿ ಯಾರು ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿಲ್ಲ. ಈಗ ಅದು ಗೊತ್ತಾಗಿದೆ. ಅವರ ಹೆಸರು ಕರೀನಾ ಕುಬಿಲಿಯುಟೆ. ಇವರಿಗೆ ಇನ್ನೂ 18 ವರ್ಷ ತುಂಬಿಲ್ಲ!

ಕಾರ್ತಿಕ್ ಆರ್ಯನ್ ಫೋಟೋದಲ್ಲಿರೋ ಹುಡುಗಿ ಯಾರು ಎಂಬ ಹುಡುಕಾಟದಲ್ಲಿ ಅಭಿಮಾನಿಗಳಿಗೆ ಕರೀನಾ ಅವರ ಖಾತೆ ಕಂಡಿದೆ. ಅದರಲ್ಲಿ ಕೆಲ ಗೋವಾ ಫೋಟೋಗಳು ಇದ್ದವು. ಕಾರ್ತಿಕ್ ಪೋಸ್ಟ್ ಮಾಡಿದ ಜಾಗದಲ್ಲೇ ಕರೀನಾ ಕೂಡ ಫೋಟೋ ತೆಗೆದುಕೊಂಡಿದ್ದರು. ಹೀಗಾಗಿ ಇಬ್ಬರ ಮಧ್ಯೆ ಲಿಂಕ್ ಮಾಡಲಾಗಿದೆ. ಈ ಮೊದಲು ಕರೀನಾ ಅವರು ಕಾರ್ತಿಕ್ನ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುತ್ತಿರುವಂತೆ. ಫೋಟೋ ವೈರಲ್ ಆಗಿರುವುದರಿಂದ ಅವರು ಅನ್ಫಾಲೋ ಆಗಿದ್ದಾರೆ.

ಇನ್ನು, ಈ ಬಗ್ಗೆ ಕರೀನಾ ಸ್ಪಷ್ಟನೆ ನೀಡಿದ್ದಾರೆ. ಇನ್ಸ್ಟಾದಲ್ಲಿ ಸ್ಟೇಟಸ್ ಹಾಕಿರೋ ಅವರು, ‘ನಾನು ಅವರ ಗರ್ಲ್ ಫ್ರೆಂಡ್ ಅಲ್ಲ’ ಎಂದು ಹೇಳಿದ್ದಾರೆ. ಆದರೆ, ಇದನ್ನು ಫ್ಯಾನ್ಸ್ ಒಪ್ಪಿಲ್ಲ. ‘ಬಾಲಕಿಗೆ 18 ವರ್ಷ ತುಂಬಿದ ಮೇಲೆ ಈ ವಿಷಯವನ್ನು ಕಾರ್ತಿಕ್ ಮಾಡಬಹುದು’ ಎಂದು ಕೆಲವರು ಕಾಲೆಳೆದಿದ್ದಾರೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಮನೆಯಲ್ಲಿ ಹಬ್ಬ ಆಚರಿಸಿದ ಶ್ರೀಲೀಲಾ: ಹೆಚ್ಚಿತು ಅನುಮಾನ

ಕರೀನಾ ಅವರು ಇಂಗ್ಲೆಂಡ್ನಲ್ಲಿ ಬೆಳೆದವರು. ಅವರು 2008ರ ಜೂನ್ 16ರಂದು ಜನಿಸಿದರು. ಅಂದರೆ ಈ ವರ್ಷ ಜೂನ್‌ಗೆ ಅವರಿಗೆ 18 ವರ್ಷ ತುಂಬಲಿದೆ. ಕಾರ್ತಿಕ್ ವಯಸ್ಸು 35 ವರ್ಷ. ಹೀಗಾಗಿ ಇಬ್ಬರ ಮಧ್ಯೆ ಬರೋಬ್ಬರಿ 18 ವರ್ಷ ವಯಸ್ಸಿನ ಅಂತರವಿದೆ. ಅವರು ಬ್ರಿಟನ್ ಪ್ರಜೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *