ಮತ್ತೊಮ್ಮೆ ಸುದ್ದಿಯಾದ ಜಿಲ್ಲಾ ಕಾರಾಗೃಹ, ಕೈದಿಗಳ ಬಳಿ ಏಳು ಮೊಬೈಲ್ ಪತ್ತೆ
ಕಾರವಾರ, ಡಿಸೆಂಬರ್ 15: ಕಾರವಾರ ನಗರದ ಜಿಲ್ಲಾಕಾರಗೃಹದಲ್ಲಿ (ಕಾರವಾರ ಜೈಲು) ಕೆಲವೇ ದಿನಗಳ ಹಿಂದೆ ತುಂಬಾ ನೀಡಿಲ್ಲವೆಂಬ ಕಾರಣಕ್ಕೆ ಜೈಲರ್ ಹಾಗೂ ಮೂವರು ಸಿಬ್ಬಂದಿ ಮೇಲೆ ಮಂಗಳೂರು ಮೂಲದ ಮೂವರು ರೌಡಿಗಳು ಹಲ್ಲೆ ನಡೆಸಿದರು. ಅದಾದ ಬಳಿಕವೂ ಗ್ಯಾಂಗ್‌ಗೆ ಸೇರಿದ ಇಬ್ಬರು ಮತ್ತೊಮ್ಮೆ ಗಲಾಟೆ ಮಾಡಿ, ಟಿವಿ ಸೇರಿ ಹಲವು ವಸ್ತುಗಳನ್ನು ನಾಶ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಕಾರಾಗೃಹದ ಸುದ್ದಿ, ಜೈಲಿನಲ್ಲಿ ಏಳು ಮೊಬೈಲ್ ಇದೆ.
ಕೈದಿಗಳ ತಪಾಸಣೆಯಲ್ಲಿ ಫೋನ್ ಪತ್ತೆ
ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಬಳಿಯಿದ್ದ ಏಳು ಮೊಬೈಲ್‌ಗಳು ಹಾಗೂ ಚಾರ್ಜರ್‌ಗಳನ್ನು ಜೈಲು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರು ನಡೆಸಿದ ತಪಾಸಣೆಯಲ್ಲಿ ಈ ವಸ್ತುಗಳು ಇವೆ. ಇತ್ತೀಚೆಗೆ ಮಾದಕ ವಸ್ತು ನೀಡಲಿಲ್ಲ ಎಂಬ ಕಾರಣಕ್ಕೆ ಕೈದಿಗಳು ಜೈಲು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಮತ್ತೊಂದು ಘಟನೆಯಲ್ಲಿ ಜೈಲಿನ ಟಿವಿಯನ್ನು ಒಡೆದುಹಾಕಿದ್ದರು. ಈ ಹಿನ್ನಲೆಯಲ್ಲಿ ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಜೈಲು ಅಧಿಕಾರಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಕೈದಿಗಳ ಗಲಾಟೆ: ಮಾದಕವಸ್ತು ಕೊಟ್ಟಿಲ್ಲವೆಂದು ಟಿವಿ ಒಡೆದು ದಾಂಧಲೆ
ಒಂದೇ ವಾರದಲ್ಲಿ ಹಲವು ಬಾರಿ ಗಲಾಟೆ
ಕಳೆದ ವಾರದಲ್ಲಿ ತುಂಬು ಜೈಲು ಬಳಕೆಗೆ ಅನುಮತಿ ನೀಡಲಿಲ್ಲವೆಂಬ ಕಾರಣ ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ಎಂಬ ಕೈದಿಗಳು ಜೈಲರ್ ಮೇಲೆ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಘಟನೆ ತಿಳಿದ ಕೂಡಲೆ 20ಕ್ಕೂ ಹೆಚ್ಚು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಹಲ್ಲೆಗೈದವರ ಮೇಲೆ ಕ್ರಮ ಕೈಗೊಂಡಿದ್ದರು. ಅಷ್ಟೇ ಅಲ್ಲದೆ ಅದೇ ಗ್ಯಾಂಗ್‌ಗೆ ಸೇರಿದ ಕಬೀರ್ ಮತ್ತು ನೌಶಾದ್ ಎಂಬ ಕೈದಿಗಳು ಜೈಲಿನಲ್ಲಿ ಗಲಾಟೆ ಮಾಡುವುದರ ಜೊತೆಗೆ ಟಿವಿಯನ್ನು ಒಡೆದು ಹಾಕಿ, ಹಲವು ವಸ್ತುಗಳನ್ನು ನಾಶಮಾಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದರು. ಇದೀಗ ಮತ್ತೆ ಇಂತಹದ್ದೇ ಘಟನೆ ನಡೆದಿದ್ದು, ಕಾರಾಗೃಹದ ಸುರಕ್ಷತೆಯ ಮೇಲೆ ಪ್ರಶ್ನೆ ಮೂಡುವಂತೆ ಮಾಡಿದೆ.
ಸೂರಜ್ ಉತ್ತುರೆ, ಟಿವಿ9 ಬೆಂಗಳೂರು
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.