Headlines

ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್​: ಕೊನೆಗೂ JDS ನಾಯಕಿಯ ಪುತ್ರ ಅರೆಸ್ಟ್​​

ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್​: ಕೊನೆಗೂ JDS ನಾಯಕಿಯ ಪುತ್ರ ಅರೆಸ್ಟ್​​


ಆರೋಪಿ ಚಿರಾಗ್ ಕೊಠಾರಕರ್, ರಿಶೇಲ್ ಡಿಸೋಜಾಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ

ಕಾರವಾರ, ಜನವರಿ 29: ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ (ರಿಶಾಲಾ ಡಿಸೋಜಾ) ಆತ್ಮಹತ್ಯೆ ಪ್ರಕರಣ ಎರಡು ಗ್ರಾಮಗಳ ವೈಮನಸ್ಸಿಗೆ ಕಾರಣವಾಗದೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕ್ರಿಶ್ಚಿಯನ್ ಸಮುದಾಯ ಸಿಡಿದೆದ್ದಿತ್ತು. ಯುವಕನ ಬಂಧನಕ್ಕೆ ಕಾರವಾರದಲ್ಲಿ ಪ್ರತಿಭಟನೆ ನಡೆಯಿತು. ಇದೀಗ ಕೊನೆಗೂ ಜೆಡಿಎಸ್ ಸ್ಥಳೀಯ ನಾಯಕಿ ಚೈತ್ರಾ ಕೋಠಾರಕರ್ ಪುತ್ರ ಆರೋಪಿ ಚಿರಾಗ್ನನ್ನು ಪೊಲೀಸರು ಬಂಧಿಸಿದ್ದಾರೆ (ಬಂಧನ).

ಘಟನೆ ಹಿನ್ನೆಲೆ

ಉತ್ತರ ಕನ್ನಡದ ಕಾರವಾರದಲ್ಲಿ ಜೆಡಿಎಸ್ ಸ್ಥಳೀಯ ನಾಯಕಿ ಪುತ್ರ ಚಿರಾಗ್ ಕಿರುಕುಳದಿಂದ ನೊಂದಿದ್ದ ರಿಶೇಲ್ ಡಿಸೋಜಾ ಜನವರಿ 9 ರಂದು ಜಿಲ್ಲೆಯ ಕದ್ರಾ ಗ್ರಾಮದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ತಂದೆ ಕ್ರಿಸ್ತೋದ ಡಿಸೋಜ ಅವರು ಜನವರಿ 10 ರಂದು ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣ : ಶವ ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ; ಕಾರಣ ಇಲ್ಲಿದೆ

ಮಗಳ ದೇಹದ ಮೇಲೆ ಕಚ್ಚಿದ ಗುರುತು ಇರುವುದನ್ನು ಕಂಡು ತಂದೆ ಅತ್ಯಾಚಾರದ ಅನುಮಾನ ವ್ಯಕ್ತಪಡಿಸಿದ್ದರು. ಅತ್ತ ಅತ್ಯಾಚಾರ ಪ್ರಕರಣ ದಾಖಲಾಗಿದೆ, ಇತ್ತ ಆರೋಪಿ ಚಿರಾಗ್ ತನ್ನ ತಂದೆ ತಾಯಿ ಜೊತೆ ನಾಪತ್ತೆ ಆಗಿದ್ದ. 20 ದಿನಗಳಿಂದ ಆರೋಪಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ತನ್ನ ಅಂಕಲ್ ಜತೆ ಚೆನ್ನೈನಲ್ಲಿದ್ದ ಚಿರಾಗ್ನನ್ನು ಇದೀಗ ಬಂಧಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಮುಖಂಡ ಪುತ್ರನ ಕಿರುಕುಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ: ಸಿಡಿದೆದ್ದ ಕ್ರಿಶ್ಚಿಯನ್ ಸಮುದಾಯ

ಇನ್ನು ಇಂದು ಕಾರವಾರ ಜಿಲ್ಲಾ ನ್ಯಾಯಲಯದಲ್ಲಿ ಪ್ರಕರಣದ ಅರ್ಜಿ ವಿಚಾರಣೆ ನಡೆದಿದೆ. ಆರೋಪಿ ಪರ ವಕೀಲ ನಾಗರಾಜ್ ನಾಯ್ಕ್ ಸುಮಾರು 2500 ಪುಟಗಳ ಚಾಟಿಂಗ್ ಪಟ್ಟಿ ಸೇರಿದಂತೆ ಹತ್ತಾರು ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಆರೋಪಿ ಚಿರಾಗ್ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರೂ ಅಷ್ಟರಲ್ಲಿ ತಿರ್ಪು ಕಾಯ್ದಿರಿಸಿ ಜನವರಿ 31ಕ್ಕೆ ಮುಂದೂಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *