ಪ್ರಾಚೀನ ಪರಂಪರೆಗೆ ಆಧುನಿಕ ಸ್ಪರ್ಶ: ಮೋದಿ ಸರ್ಕಾರದ ಅವಧಿಯಲ್ಲಿ ಭಾರತದ ಆಧ್ಯಾತ್ಮಿಕ ಪುನರುತ್ಥಾನ! | Kashi Mahakal Corridors Boost Indias Spiritual Tourism San

ಪ್ರಾಚೀನ ಪರಂಪರೆಗೆ ಆಧುನಿಕ ಸ್ಪರ್ಶ: ಮೋದಿ ಸರ್ಕಾರದ ಅವಧಿಯಲ್ಲಿ ಭಾರತದ ಆಧ್ಯಾತ್ಮಿಕ ಪುನರುತ್ಥಾನ! | Kashi Mahakal Corridors Boost Indias Spiritual Tourism San


ನವದೆಹಲಿ (ಸೆ.15): ಭಾರತದ ಸಾವಿರಾರು ವರ್ಷಗಳ ಪ್ರಾಚೀನ ಪರಂಪರೆ ಮತ್ತು ಆಧ್ಯಾತ್ಮಿಕತೆಗೆ ಮರುಜೀವ ನೀಡುವ ಸಂಕಲ್ಪದೊಂದಿಗೆ 2014ರ ನಂತರ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶದ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದಿದೆ. ಕೇವಲ ಸಂರಕ್ಷಣೆಯಲ್ಲ, ಪರಂಪರೆಯನ್ನು ಅಭಿವೃದ್ಧಿಯೊಂದಿಗೆ ಬೆಸೆಯುವ ಮೂಲಕ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದೆ. ಸರ್ಕಾರದ ಈ ಪ್ರಯತ್ನಗಳು ಇದೀಗ ಫಲ ನೀಡಲು ಆರಂಭಿಸಿದ್ದು, ದೇಶ-ವಿದೇಶಗಳಲ್ಲಿ ಭಾರತದ ಸಾಂಸ್ಕೃತಿಕ ಕೀರ್ತಿ ಪತಾಕೆ ಹಾರುತ್ತಿದೆ.

Narendra Modi ರಾಜಕೀಯ ಸನ್ಯಾಸ ? ಮುಂದಿನ ಪ್ರಧಾನಿ ಯಾರು? ದೇಶಕ್ಕೇನಾಗಲಿದೆ? ಈ ಭವಿಷ್ಯವಾಣಿ ಕೇಳಿ…

ಕಾಶಿ ವಿಶ್ವನಾಥ ಕಾರಿಡಾರ್: ವಾರಣಾಸಿಯ ಕಿರಿದಾದ ರಸ್ತೆಗಳು, ಪ್ರಾಚೀನ ಘಟ್ಟಗಳ ನಡುವೆ ಇದ್ದ ಕಾಶಿ ವಿಶ್ವನಾಥ ದೇಗುಲಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ. ಸುಮಾರು ₹339 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ‘ಶ್ರೀ ಕಾಶಿ ವಿಶ್ವನಾಥ ಕಾರಿಡಾರ್’ ಅನ್ನು ಡಿಸೆಂಬರ್ 13, 2021 ರಂದು ಉದ್ಘಾಟಿಸಲಾಯಿತು. ಇದು ಭಕ್ತರಿಗೆ ಸುಲಭ ದರ್ಶನ ಮತ್ತು ದೈವಿಕ ಅನುಭೂತಿ ನೀಡುವಲ್ಲಿ ಯಶಸ್ವಿಯಾಗಿದೆ.

ಮಹಾಕಾಲ್ ಲೋಕ್ ಯೋಜನೆ: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲು ‘ಮಹಾಕಾಲ್ ಲೋಕ್’ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಯಾತ್ರಾರ್ಥಿಗಳ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.

 



Source link

Leave a Reply

Your email address will not be published. Required fields are marked *