ದೈವದ ಕುರಿತ ಸೂಕ್ಷ್ಮ ವಿಷಯ ಹೇಳಲಿದೆ ‘ಕಟ್ಟೆಮಾರ್’; ಮುಖ್ಯಭೂಮಿಕೆಯಲ್ಲಿ ಜೆಪಿ, ಸ್ವರಾಜ್ ಶೆಟ್ಟಿ

ದೈವದ ಕುರಿತ ಸೂಕ್ಷ್ಮ ವಿಷಯ ಹೇಳಲಿದೆ ‘ಕಟ್ಟೆಮಾರ್’; ಮುಖ್ಯಭೂಮಿಕೆಯಲ್ಲಿ ಜೆಪಿ, ಸ್ವರಾಜ್ ಶೆಟ್ಟಿ


‘ಕಾಂತಾರ’ ರಿಲೀಸ್ ಆದ ಬಳಿಕ ದೈವದ ಬಗ್ಗೆ ಹಾಗೂ ತುಳುನಾಡಿನ ಸಂಸ್ಕೃತಿಯ ಬಗ್ಗೆ ಅನೇಕರಿಗೆ ಪರಿಚಯವಾಗಿದೆ. ದೇಶ-ವಿದೇಶಗಳಲ್ಲಿ ಇದರ ಜನಪ್ರಿಯತೆ ಹಬ್ಬಿದೆ. ಈಗ ದೈವದ ಕುರಿತು ಹೊಸ ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಹೆಸರು ‘ಕಟ್ಟೆಮಾರ್’ ಚಿತ್ರದ. ‘ಸು ಫ್ರಮ್ ಸೋ’ ಖ್ಯಾತಿಯ ಜೆಪಿ ತುಮಿನಾಡು ಹಾಗೂ ‘ಕಾಂತಾರ’ದಲ್ಲಿ ಗುರುವ ಪಾತ್ರದಲ್ಲಿ ನಟಿಸಿದ ಸ್ವರಾಜ್ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ.

‘ಕಟ್ಟೆಮಾರ್’ ಚಿತ್ರದಲ್ಲಿ ದೈವಾರಾಧನೆ ವಿಷಯ ಹೇಳಲಾಗುತ್ತಿದೆಯೇ? ಇಲ್ಲ. ದೈವ ಯಾವ ರೀತಿಯಲ್ಲಿ ನಮ್ಮನ್ನು ಕಾಪಾಡುತ್ತದೆ, ಸೂಚ್ಯವಾಗಿ ಹೇಳುವ ಪ್ರಯತ್ನವನ್ನು ತಂಡ ಮಾಡಿದೆ. ಎಲ್ಲಿಯೂ ಆಡಂಬರವಿಲ್ಲದೆ, ದೈವಾರಾಧನೆ ತೋರಿಸದೇ ಸಿನಿಮಾ ತಯಾರಾಗಿದೆ. ತುಳುನಾಡಿನ ನಂಬಿಕೆಗಳ ಬಗ್ಗೆಯೂ ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ಪ್ರೇಮಕಥೆ, ಸಸ್ಪೆನ್ಸ್ ವಿಷಯಗಳು ಕೂಡ ಇವೆ. ಎಲ್ಲವನ್ನು ಹದವಾಗಿ ಬೆರೆಸಿ, ಸಿನಿಮಾ ಸಿದ್ಧಪಡಿಸಲಾಗಿದೆ ಎಂಬುದು ತಂಡದ ಮಾತು.

‘ಕಟ್ಟೆಮಾರ್’ ಚಿತ್ರವನ್ನು ರಕ್ಷಿತ್ ಗಾಣಿಗ ಹಾಗೂ ಸಚಿನ್ ಕಟ್ಲ ನಿರ್ದೇಶನ ಮಾಡಿದ್ದಾರೆ. ಜನವರಿ 23 ರಂದು ಈ ಚಿತ್ರ ತುಳುವಿನಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ಡಬ್ ಆಗಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಕಾಣಲಿದೆ. ಬಿಡುಗಡೆ ಕಂಡಿರುವ ಟ್ರೇಲರ್ ಗಮನ ಸೆಳೆದಿದೆ.

‘ಸು ಫ್ರಮ್ ಸೋ’ ಬಳಿಕ ಜೆಪಿ ತುಮಿನಾಡು ಜನಪ್ರಿಯತೆ ಹೆಚ್ಚಿದೆ. ಅವರು ಒಂದು ಕಥೆ ಒಪ್ಪಿಕೊಳ್ಳುತ್ತಾರೆ ಎಂದಾಗ ಖಂಡಿತವಾಗಿಯೂ ನಿರೀಕ್ಷೆ ಹೆಚ್ಚಾಗಿರುತ್ತದೆ. ಈಗ ‘ಮಾಕಟ್ಟೆ’ ಸಿನಿಮಾ ಮೂಲಕ ಅವರು ಮತ್ತೆ ಎದುರು ಬರಲು ಸಿದ್ಧರಾಗಿದ್ದಾರೆ. ಆದಷ್ಟು ಬೇಗ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿ ಎಂಬುದು ಅಭಿಮಾನಿಗಳ ಕೋರಿಕೆ.

ಇದನ್ನೂ ಓದಿ: ಜೆಪಿ ತುಮಿನಾಡುಗೆ ಮುಂದಿದೆ ದೊಡ್ಡ ಸವಾಲು

ಸಂತೋಷ್ ಆಚಾರ್ಯ ಛಾಯಾಗ್ರಹಣ, ಗಣೇಶ್ ನಿರ್ಚಾಲ್ ಸಂಕಲನ ಚಿತ್ರಕ್ಕಿದೆ. ವಿಶ್ವಾಸ್ ಅಡ್ಯಾರ್, ಆರ್.ಕೆ.ಮುಲ್ಕಿ, ವಿನೋದ್ ಶೆಟ್ಟಿ ಕೃಷ್ಣಾಪುರ, ಸಂದೇಶ್ ಉಕ್ಕುಡ ನಿರ್ದೇಶನದ ತಂಡವಿದೆ. ಅಸ್ತ್ರ ಪ್ರೊಡಕ್ಷನ್ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *