Kaun Banega Crorepati 17:ಭಾರತೀಯ ಚಿತ್ರರಂಗದಲ್ಲಿ ‘ಕಾಂತಾರ’ ಸಿನಿಮಾವು ದೊಡ್ಡ ಕ್ರಾಂತಿ ಸೃಷ್ಟಿ ಮಾಡಿದೆ. ಕೆಜಿಎಫ್ ಸಿನಿಮಾದಿಂದ ಕನ್ನಡ ಚಿತ್ರರಂಗದ ತಾಕತ್ತು, ಪ್ರತಿಭೆ ಏನು ಎನ್ನೋದು ಜಗತ್ತಿಗೆ ಗೊತ್ತಾಗಿತ್ತು. ರಿಷಬ್ ಶೆಟ್ಟಿ, ಕ್ವಿಜ್ ಶೋ ಕೌನ್ ಬನೇಗಾ ಕರೋಡ್‌ಪತಿಗೆ ಆಗಮಿಸಿದ್ದಾರೆ.

ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಈ ಶೋನ ನಿರೂಪಕರು. ಈ ಶೋನಲ್ಲಿ ರಿಷಬ್ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕೇವಲ ಒಂದು ಕ್ವಿಜ್ ಆಟವಲ್ಲ, ಬದಲಿಗೆ ಸಾಕಷ್ಟು ವಿಷಯಗಳು ಚರ್ಚೆ ಆಗುತ್ತವೆ, ಕಾಣಸಿಗುತ್ತವೆ.

2000ರಿಂದ ‘ಕೌನ್ ಬನೇಗಾ ಕರೋಡ್‌ಪತಿ’ ಶುರುವಾಗಿದೆ. ಬ್ರಿಟಿಷರ ‘ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್’ ಶೋನ ರಿಮೇಕ್ ಇದಾಗಿದೆ. ಸೋನಿ ಎಂಟರ್‌ಟೈನ್‌ಮೆಂಟ್ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. 2025ರಲ್ಲಿ 17ನೇ ಸೀಸನ್ ಶುರುವಾಗಲಿದೆ. ಈ ಬಾರಿ ಒಟ್ಟಾರೆಯಾಗಿ 7 ಕೋಟಿ ರೂಪಾಯಿ ಗೆಲ್ಲುವ ಅವಕಾಶ ಇದೆಯಂತೆ.

ರಿಷಬ್ ಶೆಟ್ಟಿ, ಕನ್ನಡ ಚಿತ್ರರಂಗಕ್ಕೆ ಮೆರುಗು ತಂದುಕೊಟ್ಟಿದ್ದಾರೆ, ತುಳುನಾಡಿನ ವೈಭವವನ್ನು ಇಡೀ ಜಗತ್ತಿಗೆ ಸಾರಿದ್ದಾರೆ. 2022ರಲ್ಲಿ ‘ಕಾಂತಾರ’ ಸಿನಿಮಾ ರಿಲೀಸ್ ಆಯ್ತು. ಈ ಸಿನಿಮಾದಿಂದ ಭೂತ ಕೋಲ, ಕಂಬಳ, ಗುಳಿಗ, ಪಂಜುರ್ಲಿ ದೈವಗಳ ಇತಿಹಾಸವು ಎಲ್ಲರಿಗೂ ಗೊತ್ತಾಗುವ ಹಾಗೆ ಆಯ್ತು. ಈ ಸಿನಿಮಾವು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದಹಾಗೆ ಅಕ್ಟೋಬರ್ 2ರಂದು ತೆರೆ ಕಂಡ ‘ಕಾಂತಾರ’ ಸಿನಿಮಾವು ಇಲ್ಲಿಯವರೆಗೆ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಹೊಂಬಾಳೆ ಫಿಲ್ಮ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಮಿತಾಭ್ ಬಚ್ಚನ್ ಜೊತೆ ರಿಷಬ್ ಶೆಟ್ಟಿ ಅವರ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದೆ. ಮುಂದಿನ ಎಪಿಸೋಡ್‌ನಲ್ಲಿ ರಿಷಬ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಸುಳಿವನ್ನು ಕೂಡ ನೀಡಿದೆ.
View this post on Instagram
A post shared by Hombale Films (@hombalefilms)

ಅಮಿತಾಭ್ ಬಚ್ಚನ್ ಅವರು ರಿಷಬ್ ಶೆಟ್ಟಿ ಜೊತೆಗೆ ಏನು ಮಾತನಾಡಲಿದ್ದಾರೆ? ಕನ್ನಡ ಹಾಗೂ ತುಳು ಪದಗಳನ್ನು ಅಮಿತಾಭ್ ಮಾತನಾಡುತ್ತಾರಾ? ಕನ್ನಡದ ಜೊತೆಗೆ ಅಮಿತಾಭ್ ನಂಟು ಕೂಡ ಇದೆ. ಈ ಬಗ್ಗೆಯೂ ಚರ್ಚೆ ಆಗಲಿದೆಯಾ? ರಿಷಬ್ ಶೆಟ್ಟಿ ಅವರು ಎಷ್ಟು ಹಣ ಗಳಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Source link
Kaun Banega Crorepati 17 ಶೋನಲ್ಲಿ Rishab Shetty; ಅಮಿತಾಭ್ ಬಚ್ಚನ್ ಜೊತೆ 'ಹೆಮ್ಮೆಯ ಕನ್ನಡಿಗ'