’ಕೆಡಿ’ ಚಿತ್ರದ ‘ಸೆರಗು ಸರ್ಸೆ’ ಹಾಡಿನ ಅಶ್ಲೀಲ ಸಾಹಿತ್ಯದ ವಿವಾದದಿಂದಾಗಿ ಅದನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ನಟಿ ನೋರಾ ಫತೇಹಿ ನೀಡಿದ ಹೇಳಿಕೆ ಮತ್ತು ನಂತರದ ಯು-ಟರ್ನ್ ನಿರ್ದೇಶಕ ಪ್ರೇಮ್ ಅವರಿಗೆ ತೀವ್ರ ಬೇಸರ ತರಿಸಿದೆ.

’ಕೆಡಿ’ ಚಿತ್ರದ ಸೆರಗು ಸರ್ಸೆ ಹಾಡಿನಲ್ಲಿ ಇರುವ ಅಶ್ಲೀಲ ಸಾಹಿತ್ಯದ ವಿರುದ್ಧ ಇದಾಗಲೇ ದೇಶದ ವಿವಿಧೆಡೆಗಳಲ್ಲಿ ಸಾಕಷ್ಟು ದೂರು ದಾಖಲಾಗಿವೆ. ಈ ಹಿಂದೆಯೂ ಕೆಲವು ಸಿನಿಮಾಗಳಲ್ಲಿ ಇಂಥ ಅಶ್ಲೀಲ ಸಾಹಿತ್ಯ, ಸಂಭಾಷಣೆಗಳು ಇಲ್ಲ ಎಂದೇನಿಲ್ಲ. ಆದರೆ ಈ ಹಾಡು ಒಂದು ಹಂತವನ್ನು ಮೀರಿ ಹೋಗಿದೆ ಎನ್ನುವ ಕಾರಣಕ್ಕೆ ವಿವಾದ ಭುಗಿಲೆದ್ದಿದ್ದು, ಇದಾಗಲೇ ಪ್ರೇಮ್ ಕೂಡ ಕ್ಷಮೆ ಕೋರಿದ್ದಾರೆ.

ಪ್ರತಿಭಟನೆಗಳು ಮತ್ತು ದೂರುಗಳ ಹಿನ್ನೆಲೆಯಲ್ಲಿ ಸರ್ಕಾರವು ಈ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಿಸಿದೆ.ಈ ವಿಷಯ ಲೋಕಸಭೆಯಲ್ಲೂ ಚರ್ಚೆಯಾಗಿದ್ದು, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯವು ಅಬಾಧಿತವಲ್ಲ ಎಂದು ಎಚ್ಚರಿಸಿ, ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇಷ್ಟೆಲ್ಲಾ ಆಗುತ್ತಿದ್ದಂತೆಯೇ ಸೆರಗು ಸರಿಸಿ ಧಾರಾಳ ಪ್ರದರ್ಶನ ಮಾಡಿರುವ ನಟಿ ನೋರಾ (ಐಟಂ ಸಾಂಗ್ಗೇ ಫೇಮಸ್ ಆಗಿರೋ ನಟಿ ಇವರು) ವಿವಾದವಾಗುವ ಬಗ್ಗೆ ನನಗೆ ತಿಳಿದಿತ್ತು. ಇದು ನನ್ನ ಮರ್ಯಾದೆ ಪ್ರಶ್ನೆ ಎಂದು ನಿರ್ದೇಶಕರಿಗೆ ಎಚ್ಚರಿಸಿದ್ದೆ ಎಂದು ಹೇಳಿ, ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಮಾತನಾಡಿದ್ದರು.

"ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಕನ್ನಡ ಎಂಬ ಭಾಷೆಯಲ್ಲಿ ಚಿತ್ರೀಕರಿಸಿದ್ದೆ. ಅದು ಸ್ಯಾಂಡಲ್‌ವುಡ್ ಎಂಬ ಬೇರೆ ಇಂಡಸ್ಟ್ರಿಯ ಭಾಗವಾದ ಹಾಡು. ನಾನು ಈ ಹಾಡಿಗೆ ಒಪ್ಪಿಗೆ ನೀಡಿದ್ದು ಏಕೆಂದರೆ ಅದು ದೊಡ್ಡ ಸಿನಿಮಾದ ಭಾಗವಾಗಿತ್ತು ಮತ್ತು ಐಕಾನ್ ಸಂಜಯ್ ದತ್ ಅವರ ಜೊತೆಗಿನ ಹಾಡಾಗಿತ್ತು. ಅವರ ಜೊತೆ ಕೆಲಸ ಮಾಡಲು ಯಾರು ತಾನೇ ‘ಬೇಡ’ ಎನ್ನುತ್ತಾರೆ? ಜೊತೆಗೆ ಇದು ‘ನಾಯಕ್ ನಹಿ’ ಹಾಡಿನ ರಿಮೇಕ್ ಎಂದು ನಾನು ಭಾವಿಸಿದ್ದೆ’ ಎಂದು ಹೇಳಿ ಯು ಟರ್ನ್ ಹೊಡೆದಿದ್ದಾರೆ.

ಇದಕ್ಕೆ ಪ್ರೇಮ್ ಅವರು ಇದೀಗ ಭಾರಿ ಬೇಸರ ವ್ಯಕ್ತಪಡಿಸಿದ್ದಾರೆ. . ‘ನೋರಾ ಮಾತನಾಡಿದ್ದು ತಪ್ಪು. ಸಾಹಿತ್ಯ ಗೊತ್ತಿಲ್ಲದೆ ಭಾವನೆ ಬರಲ್ಲ. ಏಕೆ ಹಾಗೆ ಮಾತಾಡಿದ್ರೋ ಗೊತ್ತಿಲ್ಲ. ವಿವಾದಿಂದ ತಪ್ಪಿಸಿಕೊಳ್ಳಬೇಕು ಎಂದು ಹೀಗೆ ಹೇಳಿರಬಹುದು. ಪ್ರೇಮ್ ಜೊತೆ ಕೆಲಸ ಮಾಡಿದ್ದು ಖುಷಿ ಆಯ್ತು ಎಂದಿದ್ದಾರೆ.

ಯಾವುದೇ ನಟರು, ಹಾಡಿಗೆ ಎಕ್ಸ್ಪ್ರೆಷನ್ ಕೊಡುವಾಗ ಅದರ ಸಾಹಿತ್ಯದಲ್ಲಿನ ಅರ್ಥ ತಿಳಿದುಕೊಳ್ಳಲೇಬೇಕು. ಹಾಗೆ ತಿಳಿದುಕೊಂಡಿದ್ದರೆ ಮಾತ್ರ ಅದಕ್ಕೆ ತಕ್ಕನಾದ ಎಕ್ಸ್ಪ್ರೆಷನ್ ಕೊಡಬಹುದು. ಈ ಸಾಂಗ್ನಲ್ಲಿ ನಟಿ ಕೊಟ್ಟಿರುವ ಎಕ್ಸ್ಪ್ರೆಷನ್ ನೋಡಿದರೆ ಅವರಿಗೆ ಇದು ಅರ್ಥ ಆಗಿರುವುದು ಸ್ಪಷ್ಟ ಎಂದಿದ್ದಾರೆ ಪ್ರೇಮ್.

ಆದರೆ, ಈಗ ನಟಿ ಹೀಗೆ ಯಾಕೆ ಹೇಳಿದ್ರೋ ಗೊತ್ತಾಗಲಿಲ್ಲ. ಸಾಂಗ್ ರಿಲೀಸ್ ಆದಾಗ ತುಂಬಾ ಖುಷಿ ಪಟ್ಟು, ಇದು ಚೆನ್ನಾಗಿ ಬಂದಿದೆ. ಪ್ರೇಮ್ ಜೊತೆ ಕೆಲಸ ಮಾಡಿದ್ದು ಖುಷಿ ಎಂದೆಲ್ಲಾ ಹೇಳಿದ್ರು. ಆದರೆ ಈಗ ಎಂದಿರುವ ಪ್ರೇಮ್ ನೊಂದ ಜೀವ ಚೆನ್ನಾಗಿರಲಿ’ ಎಂದು ಹೇಳಿದ್ದಾರೆ.

Source link
KD Film: ಸೆರಗು ಸರಿಸಿ ಪ್ರದರ್ಶಿಸಿದ ನಟಿ ನೋರಾ ಯು- ಟರ್ನ್! ಪ್ರೇಮ್ ಕೊಟ್ರು ಶಾಕಿಂಗ್ ಸ್ಟೇಟ್ಮೆಂಟ್