‘ಸರ್ಸೆ ನಿನ್ನ ಸೆರಗ ಸರ್ಸೆ’ ವಿವಾದ ಬಳಿಕ ಇನ್​​ಸ್ಟಾದಿಂದ ಮಾಯವಾದ ಐಶ್ವರ್ಯಾ ರಂಗರಾಜನ್

‘ಸರ್ಸೆ ನಿನ್ನ ಸೆರಗ ಸರ್ಸೆ’ ವಿವಾದ ಬಳಿಕ ಇನ್​​ಸ್ಟಾದಿಂದ ಮಾಯವಾದ ಐಶ್ವರ್ಯಾ ರಂಗರಾಜನ್


'ಸರ್ಸೆ ನಿನ್ನ ಸೆರಗ ಸರ್ಸೆ' ವಿವಾದದ ಬಳಿಕ ಇನ್ಸ್ಟಾದಿಂದ ಮಾಯವಾದ ಐಶ್ವರ್ಯಾ ರಂಗರಾಜನ್

‘ಕೇಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ರಿಲೀಸ್ ಆಗಿ ವಿವಾದ ಸೃಷ್ಟಿ ಮಾಡಿತು. ಈ ಹಾಡಿನ ಸಾಲುಗಳು ಚರ್ಚೆಯನ್ನು ಹುಟ್ಟುಹಾಕಿದವು. ಈ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್, ಹಾಡಲ್ಲಿ ಡ್ಯಾನ್ಸ್ ಮಾಡಿದ ನೋರಾ ಫತೇಹಿ ಅವರನ್ನು ಟೀಕೆ ಮಾಡಲಾಗುತ್ತಿದೆ. ಈ ಘಟನೆ ಬಳಿಕ ಹಾಡಿನ ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ಸೋಶಿಯಲ್ ಮೀಡಿಯಾದಿಂದ ಮಾಯವಾಗಿದ್ದಾರೆ.

‘ಕೇಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಶನಿವಾರ (ಮಾರ್ಚ್ 14) ರಿಲೀಸ್ ಆಯಿತು. ಹಾಡು ಬಿಡುಗಡೆಯಾದ ಕೆಲವೇ ದಿನಕ್ಕೆ ವಿವಾದದ ಹೊಗೆ ಕಾಣಿಸಿಕೊಂಡಿತು. ಕನ್ನಡದಿಂದ ಹಿಡಿದು ಬಾಲಿವುಡ್‌ವರೆಗೆ ಈ ಚಿತ್ರದ ಹಾಡನ್ನು ಟೀಕಿಸಿದರು. ಸಾಹಿತ್ಯ ಅಶ್ಲೀಲವಾಗಿದೆ ಎಂದು ಟೀಕಿಸಲಾಗಿದೆ. ಈಗ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ಯೂಟ್ಯೂಬ್ ನಿಂದ ತೆಗೆಯಲಾಗಿದೆ.

‘ಸರ್ಸೆ’ ಹಾಡಿಗೆ ಕನ್ನಡದಲ್ಲಿ ಸಾಂಗ್ ಬರೆದಿದ್ದು ಜೋಗಿ ಪ್ರೇಮ್ ಅವರು. ಈ ಹಾಡನ್ನು ಹಾಡಿದ್ದು ಐಶ್ವರ್ಯಾ ಅವರು. ಈ ಕಾರಣಕ್ಕೆ ಅವರ ಇನ್ಸ್ಟಾ ಖಾತೆಗೆ ಸಾಕಷ್ಟು ಸಂದೇಶ ಮತ್ತು ಕಮೆಂಟ್ಗಳು ಬಂದಿರಬಹುದು. ಈ ಕಾರಣದಿಂದ ಇನ್ ಸ್ಟಾಗ್ರಾಮ್ ನಿಂದ ದೂರ ಉಳಿದರೇ ಎಂಬ ಪ್ರಶ್ನೆ ಮೂಡಿದೆ. ವಿವಾದ ತಣ್ಣಗಾದ ಬಳಿಕ ಅವರು ಕಂಬ್ಯಾಕ್ ಮಾಡಬಹುದು ಎಂಬ ನಿರೀಕ್ಷೆ ಇದೆ.

ಇನ್ಸ್ಟಾಗ್ರಾಮ್ ಖಾತೆಯನ್ನು ಡಿ ಆ್ಯಕ್ಟಿವೇಟ್ ಮಾಡಲು ಕಾರಣ ಏನು ಎಂದು ಅವರು ರಿವೀಲ್ ಮಾಡಿಲ್ಲ. ಹಾಡಿನ ವಿವಾದ ಸಂದರ್ಭದಲ್ಲೇ ಅವರು ಡಿ ಆ್ಯಕ್ಟಿವೇಟ್ ಮಾಡಿದ್ದರೆ ಸಾಕಷ್ಟು ಚರ್ಚೆ ಆಗಿದೆ. ಇದು ಕಾಕತಾಳೀಯ ಕೂಡ ಇರಬಹುದು ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ‘ಸರ್ಸೆ ಸೆರೆಗು’ ಹಾಡು ವಿವಾದ: ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ಪ್ರೇಮ್

‘ಸರ್ಸೆ ನಿನ್ನ ಸೆರಗ ಸರ್ಸೆ’ ಸಾಂಗ್ ನ ಲಿರಿಕ್ಸ್ ಅನ್ನು ಸಂಪೂರ್ಣವಾಗಿ ಬದಲಿಸಿ ಹೊಸ ಹಾಡಿನ ಮೂಲಕ ಬರೋದಾಗಿ ಜೋಗಿ ಪ್ರೇಮ್ ಹೇಳಿದ್ದಾರೆ. ಸಿನಿಮಾ ರಿಲೀಸ್ ಗೆ ಕೆಲವೇ ವಾರಗಳು ಬಾಕಿ ಇರುವ ವಿವಾದ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *