‘ನೋರಾ ಹೇಳಿದ್ದು ತಪ್ಪು, ವಿವಾದದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿರಬಹುದು’; ಪ್ರೇಮ್

‘ನೋರಾ ಹೇಳಿದ್ದು ತಪ್ಪು, ವಿವಾದದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿರಬಹುದು’; ಪ್ರೇಮ್


'ನೋರಾ ಹೇಳಿದ್ದು ತಪ್ಪು, ವಿವಾದದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಬಹುದಿತ್ತು'; ಪ್ರೇಮ್

‘ಕೇಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಚರ್ಚೆ ಹುಟ್ಟುಹಾಕಿದೆ. ನೋರಾ ಫತೇಹಿ (ನೋರಾ ಫತೇಹಿ) ಕನ್ನಡದಲ್ಲಿ ಕಾಣಿಸಿಕೊಂಡ ಮೊದಲ ಹಾಡು ಇದು. ಈ ಹಾಡನ್ನು ನೋಡಿ ಅನೇಕರು ಅಪಸ್ವರ ಎತ್ತಿದ್ದಾರೆ. ಈ ಹಾಡನ್ನು ಈಗ ತಾತ್ಕಾಲಿಕವಾಗಿ ತೆಗೆದು ಹಾಕಲಾಯಿತು, ಹೊಸ ಸಾಹಿತ್ಯದ ಮೂಲಕ ಬರೋದಾಗಿ ಪ್ರೇಮ್ ಹೇಳಿದ್ದಾರೆ. ಈ ಮಧ್ಯೆ ಹಾಡಿನ ವಿಷಯದಲ್ಲಿ ನೋರಾ ಉಲ್ಟಾ ಹೊಡೆದಿದ್ದಾರೆ. ಇಷ್ಟು ಕೆಟ್ಟ ಸಾಹಿತ್ಯ ಇದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿರುವುದು ಪ್ರೇಮ್ ಅಸಮಾಧಾನಕ್ಕೆ ಕಾರಣ.

ವಿವಾದ ಭುಗಿಲೇಳುವಂತೆ ನೋರಾ ಫತೇಹಿ ಅವರು ವಿವಾದದಿಂದ ದೂರ ಆಗಲು ಪ್ರಯತ್ನಿಸಿದರು. ‘ಮೂರು ವರ್ಷಗಳ ಹಿಂದೆಯೇ ಈ ಹಾಡು ಚಿತ್ರೀಕರಿಸಲ್ಪಟ್ಟಿದೆ. ಸಂಜಯ್ ದತ್ ಇರೋದ್ರಿಂದ ನಾನು ಸಿನಿಮಾ ಒಪ್ಪಿಕೊಂಡೆ. ಕನ್ನಡ ಭಾಷೆ ನನಗೆ ತಿಳಿಯಲ್ಲ. ಹೀಗಾಗಿ, ಹಾಡಿನ ಅರ್ಥವನ್ನು ತಂಡದವರು ಬಳಿ ಕೇಳಿ ತಿಳಿದುಕೊಂಡೆ’ ಎಂದು ನೋರಾ ಹೇಳಿದ್ದಾರೆ. ಹಿಂದಿ ಭಾಷೆಗೆ ಹೇಗೆ ತರ್ಜಮ್ಯ ಮಾಡಿದ್ದರೂ ಐಡಿಯಾ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಹಾಡು ಬಿಡುಗಡೆಗೆ ನನ್ನನ್ನು ಕರೆದಾಗ ನನ್ನ ಫೋಟೋಗಳನ್ನು ಬಳಸಿದ ರೀತಿ ಕಂಡು ನನಗೆ ಬೇಸರವಾಯಿತು ಎಂದು ಅವರು ಹೇಳಿದರು.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ನೋರಾ ಫತೇಹಿ (@norafatehi) ಅವರು ಹಂಚಿಕೊಂಡ ಪೋಸ್ಟ್

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಫಸ್ಟ್ ಡೇ ಫಸ್ಟ್ ಶೋ ಕನ್ನಡ (@fdfs_kannada) ಹಂಚಿಕೊಂಡ ಪೋಸ್ಟ್

ನೋರಾ ಹೇಳಿಕೆಗೆ ಪ್ರೇಮ್ ಉತ್ತರ ತಿಳಿಸಿದ್ದಾರೆ. ‘ನೋರಾ ಮಾತನಾಡಿದ್ದು ತಪ್ಪು. ಸಾಹಿತ್ಯ ಗೊತ್ತಿಲ್ಲದೆ ಭಾವನೆ ಬರಲ್ಲ. ಏಕೆ ಹಾಗೆ ಮಾತಾಡಿದ್ರೋ ಗೊತ್ತಿಲ್ಲ. ವಿವಾದದಿಂದ ತಪ್ಪಿಸಿಕೊಳ್ಳಬೇಕು ಎಂದು ಹೀಗೆ ಹೇಳಬಹುದು. ಪ್ರೇಮ್ ಜೊತೆ ಕೆಲಸ ಮಾಡಿದ್ದು ಖುಷಿ ಆಯ್ತು ಎಂದು ಸಾಂಗ್ ರಿಲೀಸ್ ಆದಾಗ ಹೇಳಿದ್ದರು. ನೊಂದ ಜೀವ ಚೆನ್ನಾಗಿರಲಿ’ ಎಂದು ಪ್ರೇಮ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರೇಮ್‌ಗೆ ಆ ದಿನವೇ ಎಚ್ಚರಿಕೆ ನೀಡಿದ್ದೆ: ಅಶ್ಲೀಲ ಹಾಡಿನ ವಿವಾದಕ್ಕೆ ನೋರಾ ಫತೇಹಿ ತಿರುಗೇಟು

ಸದ್ಯ ‘ಸರ್ಸೆ..’ ಹಾಡನ್ನು ಯೂಟ್ಯೂಬ್‌ನಿಂದ ತೆಗೆಯಲಾಗಿದೆ. ಹೊಸ ಹಾಡನ್ನು ಬರೆದು ಅಪ್ಲೋಡ್ ಮಾಡುವುದಾಗಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *