Headlines

'ಸೆರಗ ಸರ್ಸೆ' ವಿವಾದದ ಬೆನ್ನಲ್ಲೇ ಸೋಷಿಯಲ್​ ಮೀಡಿಯಾದ ಎಲ್ಲಾ ಖಾತೆ ಡಿಲೀಟ್ ಮಾಡಿದ ಗಾಯಕಿ​- ಆಗಿದ್ದೇನು

'ಸೆರಗ ಸರ್ಸೆ' ವಿವಾದದ ಬೆನ್ನಲ್ಲೇ ಸೋಷಿಯಲ್​ ಮೀಡಿಯಾದ ಎಲ್ಲಾ ಖಾತೆ ಡಿಲೀಟ್ ಮಾಡಿದ ಗಾಯಕಿ​- ಆಗಿದ್ದೇನು

'ಸೆರಗ ಸರ್ಸೆ' ವಿವಾದದ ಬೆನ್ನಲ್ಲೇ ಸೋಷಿಯಲ್​ ಮೀಡಿಯಾದ ಎಲ್ಲಾ ಖಾತೆ ಡಿಲೀಟ್ ಮಾಡಿದ ಗಾಯಕಿ​- ಆಗಿದ್ದೇನು

ಕೆಡಿ ಚಿತ್ರದ ‘ಸೆರಗ ಸರ್ಸೆ’ ಹಾಡಿನ ಅಶ್ಲೀಲ ಸಾಹಿತ್ಯದ ವಿವಾದ ಭುಗಿಲೆದ್ದಿದೆ. ನಿರ್ದೇಶಕ ಪ್ರೇಮ್ ಕ್ಷಮೆಯಾಚಿಸಿದ್ದರೆ, ನಟಿ ನೋರಾ ಫತೇಹಿ ಸಾಹಿತ್ಯದ ಅರ್ಥ ತಿಳಿದಿರಲಿಲ್ಲ ಎಂದಿದ್ದಾರೆ. ಈ ನಡುವೆ, ಗಾಯಕಿ ಐಶ್ವರ್ಯಾ ರಂಗರಾಜನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.

ಕೆಡಿ ಚಿತ್ರದ ಸೆರಗ ಸರ್ಸು ಹಾಡಿನ ವಿವಾದ ಭುಗಿಲೆದ್ದಿದೆ. ಇದರಲ್ಲಿನ ಅಶ್ಲೀಲ ಸಾಹಿತ್ಯದ ವಿರುದ್ಧ ಭಾರಿ ದೂರು ದಾಖಲಾಗಿದ್ದು, ಹಾಡುಗಳನ್ನೆಲ್ಲಾ ಸೋಷಿಯಲ್​ ಮೀಡಿಯಾದಿಂದಲೂ ಡಿಲೀಟ್​ ಮಾಡಲಾಗಿದೆ.

ಇದಾಗಲೇ ಪ್ರೇಮ್​ ಅವರು ಜನರ ಕ್ಷಮೆ ಕೋರಿದ್ದಾರೆ. ತಮ್ಮಿಂದ ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಹಾಡಿಗೆ ಸೆರಗನ್ನು ಸರಿಸಿ ಸೊಂಟ ಬಳುಕಿಸಿದ್ದ ಬಾಲಿವುಡ್​ ನಟಿ ನೋರಾ ಫತೇಹಿ, ನನಗೆ ಈ ಸಾಹಿತ್ಯದ ಅರ್ಥವೇ ಗೊತ್ತಿರಲಿಲ್ಲ, ಸೆರನ್ನು ಸರಿಸಿಬಿಟ್ಟೆ ಎಂದು ನುಣುಚಿಕೊಂಡು, ತಮ್ಮ ಬಳಿ ವಿವಾದ ಸುಳಿಯದಂತೆ ನೋಡಿಕೊಂಡಿದ್ದಾರೆ.

ಇವರಿಗೆ ಎಲ್ಲವನ್ನು ಅರ್ಥ ಮಾಡಿಸಿಯೇ ಡಾನ್ಸ್​ ಮಾಡಿಸಲಾಗಿತ್ತು. ಅಷ್ಟಕ್ಕೂ ಅರ್ಥ ಗೊತ್ತಿಲ್ಲದೇ ನಟನೆ ಮಾಡುವುದು ಆಗುವುದಿಲ್ಲ, ಆದರೂ ನಟಿ ಹೀಗೆ ಏಕೆ ಹೇಳಿದ್ರೋ ಎಂದು ಪ್ರೇಮ್​ ಉತ್ತರ ಕೊಟ್ಟಾಗಿದೆ.

ಇದರ ನಡುವೆಯೇ, ಇದೀಗ ಈ ಹಾಡನ್ನು ಹಾಡಿದ ಗಾಯಕಿ ಗಾಯಕಿ ಐಶ್ವರ್ಯಾ ರಂಗರಾಜನ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯನ್ನೇ ಡಿಲೀಟ್​ ಮಾಡಿಬಿಟ್ಟಿದ್ದಾರೆ.

ಈ ವಿವಾದದ ಬೆನ್ನಲ್ಲೇ ಡಿಲೀಟ್​ ಆಗಿರುವ ಕಾರಣ, ಈ ವಿವಾದದಿಂದ ಸ್ವಲ್ಪ ದಿನ ದೂರ ಉಳಿಯಲು ನಟಿ ನಿರ್ಧರಿಸಿರಬಹುದು ಎನ್ನಲಾಗಿದೆ. ಅಷ್ಟಕ್ಕೂ ಐಶ್ವರ್ಯ ಅವರು ತಮ್ಮ ಕಂಚಿನ ಕಂಠದಿಂದ ಇದಾಗಲೇ ಹಲವಾರು ಹಿನ್ನೆಲೆ ಗಾಯಕಿಯಾಗಿ ದನಿಯಾಗಿದ್ದಾರೆ. ಆದರೆ ಈ ಹಾಡು ಅವರನ್ನೂ ಫಜೀತಿಗೆ ತಂದಿದೆ.

Source link

Leave a Reply

Your email address will not be published. Required fields are marked *