ಸಿಇಟಿ ಅರ್ಜಿ ಸಲ್ಲಿಕೆಗೆ ಫೆ.27ರವರೆಗೆ ಗಡುವು ವಿಸ್ತರಣೆ; ಅಭ್ಯರ್ಥಿಗಳಿಗೆ ಕೆಇಎ ಕೊನೆಯ ಅವಕಾಶ!

ಸಿಇಟಿ ಅರ್ಜಿ ಸಲ್ಲಿಕೆಗೆ ಫೆ.27ರವರೆಗೆ ಗಡುವು ವಿಸ್ತರಣೆ; ಅಭ್ಯರ್ಥಿಗಳಿಗೆ ಕೆಇಎ ಕೊನೆಯ ಅವಕಾಶ!


ಬೆಂಗಳೂರು, ಫೆ.21: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅರ್ಜಿ ಸಲ್ಲಿಕೆಯ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 27 ಕೊನೆಯ ದಿನಾಂಕವಾಗಿದೆ.

ಕೆಇಇ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರ ಪ್ರಕಾರ, ಇದು ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ಕೊನೆಯ ಅವಕಾಶ. ಈ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇರುವುದಿಲ್ಲ. ಇದುವರೆಗೆ ಒಟ್ಟು 3.18 ಲಕ್ಷ ಅಭ್ಯರ್ಥಿಗಳು ಯಶಸ್ವಿಯಾಗಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ.

ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:

ಪ್ರಮುಖ ದಿನಾಂಕಗಳು:

ಆನ್‌ಲೈನ್ ನೋಂದಣಿ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-02-2026 ರ ರಾತ್ರಿ 11:59 ರವರೆಗೆ.

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 03-03-2026 ರ ಸಂಜೆ 5:30 ರವರೆಗೆ.

ಇದನ್ನೂ ಓದಿ: ಎಲ್ಸಿ, ಪಿಯುಸಿ ಪರೀಕ್ಷೆ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ

ಅರ್ಜಿ ಸಲ್ಲಿಸಿದವರ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳನ್ನು ‘ಸ್ಯಾಟ್ಸ್’ (SATS) ಮೂಲಕ ಆನ್‌ಲೈನ್‌ನಲ್ಲಿ ಪರಿಶೀಲಿಸಲಾಗಿದೆ. ಇನ್ನು 1.08 ಲಕ್ಷ ಅಭ್ಯರ್ಥಿಗಳ ದಾಖಲೆಗಳನ್ನು ಕಾಲೇಜು ಹಂತದಲ್ಲಿ ಪರಿಶೀಲನೆ ನಡೆಸಲಾಗಿದೆ. ಅಭ್ಯರ್ಥಿಗಳು ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಕೆಇಇ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ತನ್ನ ಎಕ್ಸ್ ಖಾತೆಯಲ್ಲಿ ವಿವರವಾಗಿ ಹಂಚಿಕೊಂಡಿದೆ. ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ cetonline.karnataka.gov.in, ಕೆಐಎ ವೆಬ್‌ಸೈಟ್‌ನ ‘UGCET 2026 ಆನ್‌ಲೈನ್ ಅಪ್ಲಿಕೇಶನ್’ ಲಿಂಕ್ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆ ವೇಳೆ ತಾಂತ್ರಿಕ ತೊಂದರೆ ಎದುರಾದರೆ 080-23460460 ಸಂಖ್ಯೆಗೆ ಕರೆ ಮಾಡಬಹುದು ಅಥವಾ keaugcet2026@gmail.com ಗೆ ಇಮೇಲ್ ಮಾಡಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *