Green Chilli Storage: ಹಸಿಮೆಣಸಿನಕಾಯಿ ತಂದ ಎರಡೇ ದಿನಕ್ಕೆ ಹಣ್ಣಾಗುತ್ತಿದೆಯೇ ಅಥವಾ ಕೊಳೆಯುತ್ತಿದೆಯೇ? ಹಾಗಿದ್ದರೆ ನೀವು ಈ ಒಂದು ಸಣ್ಣ ಕೆಲಸ ಮಾಡುತ್ತಿಲ್ಲ ಎಂದರ್ಥ! ಇನ್ಮೇಲೆ 5 ನಿಮಿಷದ ಈ ಸಿಂಪಲ್ ಟ್ರಿಕ್ ಪಾಲಿಸಿ. ಮೆಣಸಿನಕಾಯಿ 20 ದಿನದರೆಗೆ ಮಾರುಕಟ್ಟೆಯಿಂದ ತಂದಂತೆ ಫ್ರೆಶ್ ಆಗಿರುತ್ತದೆ.

ಎಲ್ಲರ ಮನೆಯಲ್ಲೂ ಸಾಮಾನ್ಯ ದೂರು ಎಂದರೆ, "ನಿನ್ನೆಯಷ್ಟೇ ಹಸಿಮೆಣಸಿನಕಾಯಿ ತಂದಿದ್ದೆವು, ಆದರೆ ಎರಡೇ ದಿನಕ್ಕೆ ಅದು ಒಣಗಿ ಹೋಗಿದೆ ಅಥವಾ ಕೊಳೆತು ಹೋಗಿದೆ" ಎಂಬುದು. ಆದರೆ ಇಂತಹ ಸಮಸ್ಯೆಗೆ ಅದ್ಭುತ ಪರಿಹಾರವೊಂದನ್ನು ಇದೀಗ ಗೃಹಿಣಿಯೋರ್ವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹಸಿಮೆಣಸಿನಕಾಯಿಯನ್ನು ದೀರ್ಘಕಾಲದವರೆಗೆ ಹೇಗೆ ಸಂಗ್ರಹಿಸಬೇಕು ಎಂದು ಅವರು ವಿವರಿಸಿದ್ದು, ಕೆಲವು ಸಣ್ಣ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಸಾಕು ಮೆಣಸಿನಕಾಯಿಯನ್ನು ಒಂದು ತಿಂಗಳವರೆಗೆ ಸಂಪೂರ್ಣ ತಾಜಾವಾಗಿ ಇಡಬಹುದು.

*ಮೊದಲು ಮೆಣಸಿನಕಾಯಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.*ತೊಳೆದ ನಂತರ, ಮೆಣಸಿನಕಾಯಿಯ ಮೇಲಿರುವ ಡಂಡಿ ಅಥವಾ ತೊಟ್ಟುಗಳನ್ನು (Stems) ಕಿತ್ತು ಪ್ರತ್ಯೇಕಿಸಿ.*ತೊಟ್ಟು ತೆಗೆದ ನಂತರ ಮೆಣಸಿನಕಾಯಿಯನ್ನು ಪೂರ್ಣವಾಗಿ ಒಣಗಿಸಿ. ನೆನಪಿಡಿ, ಅದರಲ್ಲಿ ಸ್ವಲ್ಪವೂ ತೇವಾಂಶ ಅಥವಾ ನೀರು ಇರಬಾರದು.*ನಂತರ ಗಾಳಿಯಾಡದ ಡಬ್ಬ (Air Tight Container) ಅಥವಾ ಬಿಗಿಯಾಗಿ ಮುಚ್ಚಳ ಮುಚ್ಚುವ ಪ್ಲಾಸ್ಟಿಕ್ ಡಬ್ಬ ಸಿದ್ಧಪಡಿಸಿಕೊಳ್ಳಿ.

ನೀವು ತೆಗೆದುಕೊಂಡ ಗಾಳಿಯಾಡದ ಡಬ್ಬದಲ್ಲಿ ಮೆಣಸಿನಕಾಯಿ ತುಂಬುವ ಮುನ್ನ ಈ ಹಂತವನ್ನು ಅನುಸರಿಸಿ*ಡಬ್ಬದ ಒಳಗೆ ಒಂದು ಟಿಶ್ಯೂ ಪೇಪರ್ ಅಥವಾ ಸಾಮಾನ್ಯ ನ್ಯೂಸ್‌ಪೇಪರ್ ಅನ್ನು ಹಾಕಿ.*ಈ ಪೇಪರ್ ಮೆಣಸಿನಕಾಯಿಯಲ್ಲಿ ಕಾಲಕಾಲಕ್ಕೆ ಉಂಟಾಗುವ ತೇವಾಂಶವನ್ನು ಹೀರಿಕೊಳ್ಳುತ್ತದೆ.*ಇದರ ಮೇಲೆ ಹಸಿಮೆಣಸಿನಕಾಯಿಗಳನ್ನು ಹಾಕಿ ಡಬ್ಬ ಮುಚ್ಚಿ ಫ್ರಿಜ್‌ನಲ್ಲಿ ಇಡಿ.*ಹೀಗೆ ಮಾಡಿದರೆ ಕನಿಷ್ಠ 15-20 ದಿನಗಳವರೆಗೆ ಮೆಣಸಿನಕಾಯಿ ತಾಜಾವಾಗಿಯೇ ಇರುತ್ತದೆ.

ಮೆಣಸಿನಕಾಯಿ ಇನ್ನೂ ಹೆಚ್ಚಿನ ದಿನ ಬಾಳಿಕೆ ಬರಬೇಕೆಂದರೆ ಈ ಕೆಳಗಿನ ಅಂಶಗಳನ್ನು ನೆನಪಿಡಿ*ವಾರಕ್ಕೊಮ್ಮೆಯಾದರೂ ಡಬ್ಬವನ್ನು ತೆರೆದು ಸ್ವಲ್ಪ ಹೊತ್ತು ಫ್ಯಾನ್ ಗಾಳಿಯ ಕೆಳಗೆ ಇಡಿ.*ಹೊರಗಿನ ತಾಜಾ ಗಾಳಿ ತಗುಲುತ್ತಿದ್ದರೆ ಮೆಣಸಿನಕಾಯಿ ಕೊಳೆಯುವ ಸಾಧ್ಯತೆ ತೀರಾ ಕಡಿಮೆ.*ನಡುವೆ ಆಗಾಗ ಡಬ್ಬ ತೆರೆದು ಒಮ್ಮೆ ಪರಿಶೀಲಿಸಿ. ಒಂದು ವೇಳೆ ಯಾವುದಾದರೂ ಮೆಣಸಿನಕಾಯಿ ಕೊಳೆತಿದ್ದರೆ ಅದನ್ನು ತಕ್ಷಣ ತೆಗೆದುಹಾಕಿ. ಇಲ್ಲದಿದ್ದರೆ ಆ ಒಂದೇ ಒಂದು ಮೆಣಸಿನಕಾಯಿ ಇಡೀ ಡಬ್ಬದಲ್ಲಿರುವ ಉಳಿದ ಮೆಣಸಿನಕಾಯಿಗಳನ್ನು ಹಾಳು ಮಾಡಬಹುದು.

ಒಂದು ವೇಳೆ ನೀವು ಮೆಣಸಿನಕಾಯಿಯನ್ನು ಪೇಸ್ಟ್ ಮಾಡಿ ಇಡಲು ಬಯಸಿದರೆ, ಮೆಣಸಿನಕಾಯಿ ರುಬ್ಬುವಾಗ ಅದಕ್ಕೆ ಒಂದು ಚಮಚ ಅಡುಗೆ ಎಣ್ಣೆ ಮತ್ತು ಚಿಟಿಕೆ ಉಪ್ಪು ಸೇರಿಸಿ. ಹೀಗೆ ಮಾಡುವುದರಿಂದ ಮೆಣಸಿನಕಾಯಿ ಪೇಸ್ಟ್ ಫ್ರಿಜ್‌ನಲ್ಲಿಟ್ಟರೂ ಅದರ ಬಣ್ಣ ಬದಲಾಗುವುದಿಲ್ಲ ಮತ್ತು ರುಚಿ ಹಾಗೆಯೇ ಇರುತ್ತದೆ.

Source link
ನಿಮ್ಮ ಕಿಚನ್‌ನಲ್ಲಿ ಈ ವಸ್ತು ಇದ್ರೆ ಸಾಕು.. ಹಸಿಮೆಣಸಿನಕಾಯಿ ಕೊಳೆಯೋದೂ ಇಲ್ಲ, ಒಣಗೋದು ಇಲ್ಲ