ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಹೊರಟ ವೇಳೆ ಅಭಿಮಾನಿಯೊಬ್ಬ ಕೊಟ್ಟ ಕಾಂಪ್ಲಿಮೆಂಟ್ಸ್‌ಗೆ ನಟಿ ಹೇಳಿದ್ದೇನು? ನೀವೇ ನೋಡಿ

ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ತಮಿಳುನಾಡು ಸರ್ಕಾರದ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಲು ತಮ್ಮ ಮನೆಯಿಂದ ಹೊರಟಿದ್ದರು. ಈ ವೇಳೆ ನಡೆದ ಒಂದು ತಮಾಷೆಯ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸೀರೆ ಉಟ್ಟು, ತಲೆಗೆ ಮಲ್ಲಿಗೆ ಹೂವು ಮುಡಿದು ಕಾರು ಹತ್ತಲು ಹೋಗುತ್ತಿದ್ದ ಕೀರ್ತಿ ಅವರಿಗೆ, ‘ಹೂವು ಸೂಪರ್ ಆಗಿದೆ’ ಅಂತ ಅಭಿಮಾನಿಯೊಬ್ಬರು ಹೇಳಿದರು.

ಇದನ್ನು ಕೇಳಿದ ಕೀರ್ತಿ, ‘ಹೂವು ಚೆನ್ನಾಗಿದ್ಯಾ? ನನ್ನ ಲುಕ್ ಹೇಗಿದೆ ಅಂತ ಹೇಳೋ’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಈ ಮುದ್ದಾದ ಪ್ರತಿಕ್ರಿಯೆಯ ವಿಡಿಯೋಗೆ ನೆಟ್ಟಿಗರು ಮನಸೋತಿದ್ದಾರೆ.
View this post on Instagram
A post shared by Keerthy Suresh (@keerthysureshofficial)

ಆದಮ್ ದಾಸನ್ ನಿರ್ದೇಶನದ ‘ಪಾಂಬು ಸಟ್ಟೈ’ (2017) ಚಿತ್ರದ ನಟನೆಗಾಗಿ ಕೀರ್ತಿಗೆ ಈ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇದು ಅವರ ಮೊದಲ ರಾಜ್ಯ ಪ್ರಶಸ್ತಿಯಾಗಿದೆ.

ಪ್ರಶಸ್ತಿ ಸ್ವೀಕರಿಸಿದ ನಂತರ ಕೀರ್ತಿ ಸುರೇಶ್ ಇನ್‌ಸ್ಟಾಗ್ರಾಂನಲ್ಲಿ ಹೀಗೆ ಬರೆದುಕೊಂಡಿದ್ದಾರೆ: "ನನ್ನ ಮೊದಲ ರಾಜ್ಯ ಪ್ರಶಸ್ತಿ ನೀಡಿದ ತಮಿಳುನಾಡು ಸರ್ಕಾರಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ಅವಕಾಶ ನೀಡಿದ ನಿರ್ದೇಶಕರಿಗೆ, ಸದಾ ಬೆಂಬಲವಾಗಿ ನಿಂತ ಸಹೋದ್ಯೋಗಿಗಳು, ತಂತ್ರಜ್ಞರು ಮತ್ತು ನನ್ನ ತಂಡಕ್ಕೆ ಧನ್ಯವಾದ. ಹಾಗೆಯೇ, ಪ್ರಶಸ್ತಿ ಗೆದ್ದ ಎಲ್ಲರಿಗೂ ನನ್ನ ಪ್ರೀತಿ ಮತ್ತು ಅಭಿನಂದನೆಗಳು."
View this post on Instagram
A post shared by Keerthy Suresh (@keerthysureshofficial)

ಜೆ.ಕೆ. ಚಂದ್ರು ನಿರ್ದೇಶನದ ‘ರಿವಾಲ್ವರ್ ರೀಟಾ’ ಕೀರ್ತಿ ನಟನೆಯ ಕೊನೆಯ ಚಿತ್ರವಾಗಿತ್ತು. ಈ ವರ್ಷ ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಅವರ ಹಲವು ಚಿತ್ರಗಳು ಬಿಡುಗಡೆಯಾಗಲಿವೆ.

Source link
'ಹೂವು ಸೂಪರ್' ಎಂದ ಫ್ಯಾನ್‌ಗೆ ಕ್ಯೂಟ್ ರಿಪ್ಲೆ ಕೊಟ್ಟ ನಟಿ ಕೀರ್ತಿ ಸುರೇಶ್! ವಿಡಿಯೋ ವೈರಲ್