ಬೆಂಗಳೂರು, ಡಿ.27: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (ಕೆಂಪೇಗೌಡ ವಿಮಾನ ನಿಲ್ದಾಣ) ಹಳದಿ ಬೋರ್ಡ್ ಚಾಲಕರ ಪಿಕಾಪ್ ಸಮಯ ಹಾಗೂ ದಂಡದ ನಿಯಮ ಜಾರಿಗೆ, ಹೊಸ ನಿಯಮ ಜಾರಿ ಚಾಲಕರು ಪ್ರತಿಭಟನೆಗೆ ಮಣಿದ ಏರ್ಪೋಟ್ ಆಡಳಿತ ಮಂಡಳಿ ಇದೀಗ ಹೊಸ ದರ ಹಾಗೂ ನಿಯಮವನ್ನು ಜಾರಿ ಮಾಡಿದೆ. 10 ನಿಮಿಷದಿಂದ 15 ನಿಮಿಷಕ್ಕೆ ಹಳದಿ ಬೋರ್ಡ್ ಕ್ಯಾಬ್‌ಗಳ ಪಿಕಪ್ ಸಮಯವಾಗಿತ್ತು. ಟರ್ಮಿನಲ್ 1ರ P3 ಮತ್ತು P4 ನಲ್ಲಿ ಪಿಕಪ್ ಸಮಯ ಒಟ್ಟು ಮಾಡಲ್ಪಟ್ಟಿದೆ. 15 ನಿಮಿಷದ ಉಚಿತ ಪಿಕಪ್ ಸಮಯ ಮೀರಿದರೆ 15 ರಿಂದ 45 ನಿಮಿಷಗಳು ಹೆಚ್ಚುವರಿಯಾಗಿ ಉಳಿದುಕೊಂಡರೆ 100 ರೂ. ದಂಡ ಹಾಕಲು ಎಂಬ ನಿಯಮವನ್ನು ತರಲಾಯಿತು.
ಇದೀಗ ಈ ನಿಯಮವನ್ನು ಸಡಿಲಗೊಳಿಸಿ 45 ನಿಮಿಷಕ್ಕಿಂತ ಹೆಚ್ಚುವರಿಯಾಗಿ ನಿಲುಗಡೆ ಮಾಡಿದ್ರೆ ಗಂಟೆಗೆ 100 ರೂ. ಬದಲಿಗೆ 50 ರೂ ದಂಡ ಹಾಕಲಾಗುವುದು. ಒಂದು ದಿನ ಪೂರ್ತಿ ವಾಹನ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ರೆ 600 ರೂ. ಪೈನ್ ಹಾಕಲಾಯಿತು. ಇದೀಗ ಒಂದು ದಿನಕ್ಕೂ ಪಾರ್ಕಿಂಗ್ ನಲ್ಲಿ ವಾಹನ ಉಳಿದ್ರೆ ದಿನಕ್ಕೆ 350 ರೂಪಾಯಿ ದಂಡ ಕಟ್ಟ ಎಂದು ಕೆಂಪೇಗೌಡ ಏರ್ಪೋಟ್ ಆಡಳಿತ ಮಂಡಳಿ ಹೊಸ ದಂಡ ದರ ಪಟ್ಟಿ ಬಿಡುಗಡೆ ಮಾಡಿದೆ.
ಈ ಹಿಂದೆ ಹಳದಿ ಬೋರ್ಡ್ ಕ್ಯಾಬ್ಗೆ 8 ನಿಮಿಷ ಮಾತ್ರ ಉಚಿತ ಪಾರ್ಕಿಂಗ್ ನೀಡಿದ್ದ ಕೆಐಎಬಿ. ನಂತರದಲ್ಲಿ ಈ ನಿಮಯವನ್ನು ಬದಲಿಸಿ, 8 ನಿಮಿಷದ ನಂತರ 150 ರೂ ದಂಡ ಹಾಕಲು ಎಂದು ಹೇಳಿತ್ತು. ಈ ನಿಯಮದ ವಿರುದ್ಧ ಕ್ಯಾಬ್ ಚಾಲಕರು ಏರ್ಪೋಟ್ ಟೋಲ್ ಬಳಿ ಪ್ರತಿಭಟನೆ ನಡೆಸಿದರು. ಚಾಲಕರ ಪ್ರತಿಭಟನೆ ಬೆನ್ನಲ್ಲೇ ಸಭೆ ನಡೆಸಿ ಇದೀಗ ಹಳದಿ ಬೋರ್ಡ್‌ಗಳಿಗೆ ಹೊಸ ದರ ಹಾಗೂ ಸಮಯವನ್ನು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ರೂಲ್ಸ್: ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಫಿಕ್ಸ್
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಆಗಮನ ಪ್ರದೇಶಗಳಲ್ಲಿ ಸುರಕ್ಷತೆ, ಶಿಸ್ತು, ಇತರ ನಿಬಂಧನೆಗಳನ್ನು ಅನುಸರಿಸಲು ಹೊಸ ನಿಯಮಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಸುಮಾರು 1,30,000 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ 3ನೇ ಅತಿದೊಡ್ಡ ವಿಮಾನ ನಿಲ್ದಾಣ. ಸುಮಾರು 1 ಲಕ್ಷ ವಾಹನಗಳು ಪ್ರತಿದಿನ ಏರ್‌ಪೋರ್ಟ್ ಮಾರ್ಗದಲ್ಲಿ ಸಂಚಾರ ನಡೆಸುತ್ತವೆ. ಟರ್ಮಿನಲ್‌ಗಳ ಮುಂಭಾಗ ಇರುವ ಕರ್ಬ್ಸೈಡ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಯಾವುದೇ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳಲ್ಲಿ ನಿಯಮಗಳು ತರಲಾಗಿದೆ. ಇದರೊಂದಿಗೆ ಟರ್ಮಿನಲ್ 1 ರಲ್ಲಿ ಯಲ್ಲೋ ಬೋರ್ಡ್ ಕಾರುಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಯಲ್ಲೋ ಬೋರ್ಡ್ ಕಾರುಗಳಿಗೆ P3, P4 ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದೀಗ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:27 am, ಶನಿ, 27 ಡಿಸೆಂಬರ್ 25