
ಚಿಕ್ಕಮಗಳೂರು, ಏಪ್ರಿಲ್ 08): ಕೇರಳ ಮೂಲದ 14 ವರ್ಷದ ಶ್ರೀ ನಂದಾ ಎಂಬ ಹುಡುಗಿ ಚಿಕ್ಕಮಗಳೂರಿನ (ಚಿಕ್ಕಮಗಳೂರು) ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ (ಚಂದ್ರದ್ರೋಣ ಪರ್ವತಗಳು) ನಾಪತ್ತೆಯಾಗಿದ್ದಾಳೆ. 40 ಜನರ ಪ್ರವಾಸಿ ತಂಡದೊಂದಿಗೆ ಬಂದಿದ್ದ ಶ್ರೀ ನಂದಾ ಮಾಣಿಕ್ಯಧಾರಾ ಬಳಿ ಕಾಣೆಯಾಗಿದ್ದಾಳೆ. ಆದರೆ, ನಾಪತ್ತೆಯಾಗುವ ಕೆಲವು ನಿಮಿಷಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾಳೆ. ಸಂಬಂಧಿ ಬಾಲಕಿಯೊಂದಿಗೆ ಸೆಲ್ಫಿ ಮಾಡಿಕೊಂಡಿದ್ದು, ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ಶ್ರೀ ನಂದಾ ಏಕಾಏಕಿ ನಾಪತ್ತೆಯಾಗಿದ್ದಾಳೆ. ಹೀಗಾಗಿ ಶ್ರೀ ನಂದಾ ನಾಪತ್ತೆ ಹಿಂದೆ ಹಲವು ಅನುಮಾನಗಳು ಕಂಡುಬಂದಿದ್ದು, ಸದ್ಯ ಅಗ್ನಿಶಾಮಕ, ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಡ್ರೋನ್ ಸಹಾಯದಿಂದ ಬಾಲಕಿಯ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.