Headlines

ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್; ದೂರಿನ ಬೆನ್ನಲ್ಲೇ ಸ್ನೇಹಿತನ ಮನೆಯಲ್ಲಿ ಬಾಯ್‌ ಫ್ರೆಂಡ್ ಶ*ವವಾಗಿ ಪತ್ತೆ!

ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್; ದೂರಿನ ಬೆನ್ನಲ್ಲೇ ಸ್ನೇಹಿತನ ಮನೆಯಲ್ಲಿ ಬಾಯ್‌ ಫ್ರೆಂಡ್ ಶ*ವವಾಗಿ ಪತ್ತೆ!

ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್; ದೂರಿನ ಬೆನ್ನಲ್ಲೇ ಸ್ನೇಹಿತನ ಮನೆಯಲ್ಲಿ ಬಾಯ್‌ ಫ್ರೆಂಡ್ ಶ*ವವಾಗಿ ಪತ್ತೆ!

ತಿರುವನಂತಪುರ: ಇತ್ತೀಚಿಗಿನ ಯುವ ತಲೆಮಾರು ವಿವಾಹ ಪೂರ್ವ ಲೈಂ*ಗಿಕ ಚಟುವಟಿಕೆಗಳನ್ನು ನಡೆಸುವ ಪ್ರಕರಣಗಳ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಆದರೆ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುವ ವಿಕೃತಿಗಳು ಅನಾಹುತಗಳಿಗೆ ಆಸ್ಪದ ಮಾಡಿಕೊಡುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ

ಪ್ರೇಯಸಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತೋನ್ನಕ್ಕಲ್‌ನ ಲಾಲ್‌ಬಾಗ್‌ ನಗರದ ನಿವಾಸಿ ಕಿರಣ್ (27) ಮೃತ ಯುವಕ. ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ, ಪಕ್ಕದ ಮನೆಯಲ್ಲಿದ್ದ ಸ್ನೇಹಿತನ ಮನೆಯಲ್ಲಿ ಈ ಘಟನೆ ನಡೆದಿದೆ.

ಕಿರಣ್ ಪ್ರೀತಿಸುತ್ತಿದ್ದ ಯುವತಿ ಜೊತೆಗಿನ ಖಾಸಗಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಹರಿಬಿಟ್ಟಿದ್ದಾನೆ ಎಂದು ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಪೊಲೀಸರು ಕಿರಣ್ ಸೇರಿದಂತೆ 4 ಜನರ ವಿರುದ್ಧ ಕೇಸ್ ದಾಖಲಿಸಿದ್ದರು. ಇದರಿಂದ ಕಿರಣ್ ತೀವ್ರವಾಗಿ ಮನನೊಂದಿದ್ದ ಎನ್ನಲಾಗಿದೆ.

’ಆ ವಿಡಿಯೋಗಳನ್ನು ತಾನು ಹರಿಬಿಟ್ಟಿಲ್ಲ’ ಅಂತ ಕಿರಣ್ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಕಿರಣ್ ಫೋನ್‌ನಲ್ಲಿದ್ದ ದೃಶ್ಯಗಳನ್ನು ಆತನಿಗೆ ತಿಳಿಯದಂತೆ ಬೇರೆ ಯಾರಾದರೂ ಲೀಕ್ ಮಾಡಿರಬಹುದಾ ಎಂಬ ಅನುಮಾನವೂ ಇದೆ. ಈ ಬಗ್ಗೆ ವಿವರವಾದ ತನಿಖೆ ನಡೆಸಿದರಷ್ಟೇ ಸತ್ಯ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೇಸ್ ದಾಖಲಾದ ನಂತರ, ಮನೆಯ ಬಳಿ ಬಂದ ಪೊಲೀಸ್ ಜೀಪ್ ನೋಡಿ ಕಿರಣ್ ಹೆದರಿದ್ದ. ಹಾಗಾಗಿ ಮನೆಯಿಂದ ಹೊರಗೆ ಹೋಗಿದ್ದ. ಭಾನುವಾರ ರಾತ್ರಿ, ಪಕ್ಕದಲ್ಲೇ ಇರುವ ತನ್ನ ಸ್ನೇಹಿತನ ಮನೆಗೆ ಬಂದಿದ್ದ.

ಸೋಮವಾರ ಬೆಳಗ್ಗೆ ಸ್ನೇಹಿತನ ಜೊತೆ ಮಲಗಿದ್ದ ಕಿರಣ್, ಮನೆಯೊಳಗಿನ ಹುಕ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣವೇ ಆತನನ್ನು ಚಿರಯಿನ್‌ಕೀಳ್ ಸರ್ಕಾರಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆತನ ಜೀವ ಉಳಿಸಲು ಸಾಧ್ಯವಾಗಲಿಲ್ಲ.

Source link

Leave a Reply

Your email address will not be published. Required fields are marked *