ಪ್ರಮುಖ ನಟಿ ರವೀನಾ ಟಂಡನ್ (ರವೀನಾ ಟಂಡನ್) ಅವರು ಮೋದಿ ಬಯೋಪಿಕ್ ‘ಮಾ ವಂದೇ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದು ಕೂಡ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಪಾತ್ರದಲ್ಲಿ ಅನ್ನೋದು ವಿಶೇಷ. ಪ್ರಧಾನಿ ಮೋದಿ ಅವರ ಜೀವನದ ಉದ್ದಕ್ಕೂ ಹೀರಾಬೆನ್ ಬೆಂಬಲವಾಗಿ ನಿಂತಿದ್ದರು. ಈ ದೃಷ್ಟಿಯಿಂದ ಈ ಪಾತ್ರ ಸಿನಿಮಾದಲ್ಲಿ ತುಂಬಾನೇ ಪ್ರಮುಖ ವಸ್ತು. ರವೀನಾ ಈ ಪಾತ್ರಕ್ಕೆ ಸೂಕ್ತವಾದ ಆಯ್ಕೆ ಎಂದು ಅನೇಕರು ಹೇಳಿದ್ದಾರೆ.
ರವೀನಾ ಟಂಡನ್ ಅವರು ತಮ್ಮ ವೃತ್ತಿ ಜೀವನದಲ್ಲಿ ನಾಯಕಿ ಆಗಿ ಮಿಂಚಿದ್ದಾರೆ. ಅವರು ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆಜಿಫ್ 2’ ಚಿತ್ರದಲ್ಲಿ ಪ್ರಧಾನಿ ಪಾತ್ರ ಮಾಡಿದ್ದರು. ಈಗ ರಿಯಲ್ ಪ್ರಧಾನಿ ತಾಯಿ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಲುಕ್ ಟೆಸ್ಟ್ ನಡೆದಿದ್ದು, ರವೀನಾ ಹೊಂದಿಕೆ ಆಗುವಂತಿದೆ ಎಂದು ವರದಿಯಾಗಿದೆ.
17ರಂದು ಮೋದಿ ಜನ್ಮದಿನ. ಈ ವಿಶೇಷ ದಿನಂದು ‘ಮಾವಂದೇ’ ಸಿನಿಮಾ ಘೋಷಣೆ ಆಗಿದೆ. ಕ್ರಾಂತಿ ಕುಮಾರ್ ಸಿಎಚ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಿಲ್ವರ್ ಕಾಸ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೀರ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ಉನ್ನಿ ಮುಕುಂದನ್ ನಟಿಸುತ್ತಿದ್ದಾರೆ. ಅವರು ಈ ಸಿನಿಮಾದ ಭಾಗವಾಗಲು ಎಗ್ಸೈಟ್ ಆಗಿದ್ದಾರೆ.
ಚಿತ್ರತಂಡದ ಆಪ್ತರ ಪ್ರಕಾರ, ಹೀಬೆನ್ ಪಾತ್ರದ ಬಗ್ಗೆ ಕೇಳಿದಾಗ ರವೀನಾ ಅವರು ಭಾವುಕರಾದರಂತೆ. ಪಾತ್ರದ ಶಕ್ತಿ, ಆಳ ನೋಡಿ ಅವರಿಗೆ ಖುಷಿಯಾಗಿದೆ. ಹೀರಾಬೆನ್ ತಮ್ಮ ತಾಯಿಯನ್ನು ಬಾಲ್ಯದ ದಿನಗಳಲ್ಲಿ ಕಳೆದುಕೊಂಡರು. ಆದರೂ ಅವರು ದೈರ್ಯದಿಂದ ಎಲ್ಲವನ್ನೂ ಮುನ್ನಡೆಸಿದರು. ಈ ಕಥೆ ರವೀನಾ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿದಂತೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ; ಶಿವಮೊಗ್ಗದ ಮಂಜುನಾಥ್ ಪತ್ನಿ ಮಾತು ಕೇಳಿ ರವೀನಾ ಟಂಡನ್ ರಕ್ತ ಕೋತ
‘ಮಾ ವಂದೇ’ ಸಿನಿಮಾದಲ್ಲಿ ರಾಜಕೀಯ ಯಶೋಗಾಥೆ ತಾಯಿ ಹಾಗೂ ಮಗನ ಬಾಂಧವ್ಯವನ್ನು ಹೈಲೈಟ್ ಮಾಡುವುದು ನಿರ್ದೇಶಕನ ಉದ್ದೇಶ. ಮೋದಿ ಅವರ ಜೀವನವನ್ನು ಉತ್ತಮಗೊಳಿಸಲು ಹೀರಾಬೆನ್ ಮಾಡಿದ ತ್ಯಾಗದ ಚಿತ್ರವು ಪ್ರಮುಖವಾಗಿ ಗಮನ ಹರಿಸುತ್ತದೆ. ಈ ಸಿನಿಮಾ ಆರಂಭಕ್ಕೂ ಮೊದಲು ರವೀನಾ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 3:05 pm, ಗುರುವಾರ, 13 ನವೆಂಬರ್ 25