ಸರ್ಕಾರದ ಮನೆಗಳ ಕರ್ಮಕಾಂಡ ಬಯಲು: ಭಯದಲ್ಲೇ ಬದುಕುತ್ತಿವೆ ನೂರಾರು ಕುಟುಂಬಗಳು

ಸರ್ಕಾರದ ಮನೆಗಳ ಕರ್ಮಕಾಂಡ ಬಯಲು: ಭಯದಲ್ಲೇ ಬದುಕುತ್ತಿವೆ ನೂರಾರು ಕುಟುಂಬಗಳು


ಬೆಂಗಳೂರು, ಜನವರಿ 05: ಸದ್ಯ ರಾಜಧಾನಿಯಲ್ಲಿ ಕೋಗಿಲು (ಕೋಗಿಲು ಲೇಔಟ್ ಸಾಲು) ನಿವಾಸಿಗಳ ವಸತಿ ಬಗ್ಗೆ ದೊಡ್ಡ ಚರ್ಚೆ ಕೇಳಿ ಬರ್ತಿದೆ. ಕಡಿಮೆ ದುಡ್ಡನಲ್ಲಿ ಸರ್ಕಾರ ಕೋಗಿಲು ನಿವಾಸಿಗಳಿಗೆ ಮನೆ ನೀಡುವುದಕ್ಕೆ ಮುಂದಾಗಿದೆ. ಆದರೆ ಈ ನಡುವೆ ಇದೀಗ ರೂ. ಖರ್ಚು ಮಾಡಿ ಮನೆ ಪಡೆದಿರುವ ಕರ್ನಾಟಕ ಹೌಸಿಂಗ್ ಬೋರ್ಡ್ (ಕೆಎಚ್‌ಬಿ) ನಿವಾಸಿಗಳು ನಮ್ಮ ಗೋಳು ಕೇಳಿ ಎನ್ನುತ್ತಾರೆ. ಸದ್ಯ ನೂರಾರು ಕುಟುಂಬಗಳು ಭಯದಲ್ಲೇ ಬದುಕಿವೆ.

ಕೋಗಿಲು ಬಡಾವಣೆ ಅನಧಿಕೃತ ಮನೆಗಳ ತೆರವು ವಿಚಾರದಲ್ಲಿ ರಾಜಕೀಯ ಜೋರಾಗಿದೆ. ಉಚಿತ ಮನೆ ನೀಡಲು ಸರ್ಕಾರವು ಜೋಶ್ ನಲ್ಲಿದೆ. ಆದರೆ ಸರ್ಕಾರದ್ದೆ ಮನೆಗಳು ಬೀಳುವ ಸಮಯದಲ್ಲಿ ಇಲ್ಲಿ ವಾಸಿಸುವ ಜನರ ಗೋಳು ಕೇಳೋರಿಲ್ಲ. ಕರ್ನಾಟಕ ಗೃಹ ಮಂಡಳಿಯ 800 ಫ್ಲಾಟ್‌ಗಳ ಸ್ಥಿತಿ ಡೇಂಜರ್ ಹಂತದಲ್ಲಿವೆ. ಕಳಪೆ ಕಾಮಗಾರಿಯ ನಿವಾಸಿಗಳು ಕಂಗಾಲಾಗಿದ್ದಾರೆ, ನೂರಾರು ಕುಟುಂಬಗಳು ಭಯದಲ್ಲೇ ಬದುಕುತ್ತಿವೆ.

ಇದನ್ನೂ ಓದಿ: ಕೋಗಿಲು ಕದನ: ಬಿಜೆಪಿ ವಿರುದ್ಧ ಸಚಿವ ಕೃಷ್ಣಭೈರೇಗೌಡ ಸ್ಫೋಟಕ ಆರೋಪ

ಕೆಂಗೇರಿಯಲ್ಲಿ ಕೆಹೆಚ್‌ಬಿ ಫ್ಲಾಟ್‌ನ ಬಹುಮಹಡಿ ವಸತಿ ಯೋಜನೆಯಲ್ಲಿ ಮನೆ ಪಡೆದವರು ಪರದಾಡಿದ್ದಾರೆ. ಸರ್ಕಾರದ ಮೇಲೆ ಭರವಸೆ ಇಟ್ಟು 2012ರಲ್ಲಿ ಫ್ಲಾಟ್ ಖರೀದಿಸಿದ ಜನರಿಗೆ ಈಗ ಸಂಕಷ್ಟ ಶುರುವಾಗಿದೆ. ನಾವು ಸುಮ್ಮನೆ ಭರವಸೆಗಳನ್ನು ಕೊಡುವುದಿಲ್ಲ, ಆದರೆ ಕೊಟ್ಟ ಭರವಸೆಗಳನ್ನು ಖಂಡಿತ ನೀಡುತ್ತೇನೆ ಎಂದು ಸುಳ್ಳು ಪ್ರಚಾರ ನೀಡುತ್ತೇವೆ, ಕೆಹೆಚ್‌ಬಿ ಮಾತು ನಂಬಿ 13 ವರ್ಷಗಳ ಹಿಂದೆ ಸರಾಸರಿ 40 ಲಕ್ಷ ರೂ ಕೊಟ್ಟು ಫ್ಲಾಟ್ ಖರೀದಿಸಿದ ಜನರು ಈಗ ಪರದಾಡಿದ್ದಾರೆ. ಮನೆಯ ಗೋಡೆಗಳ ಸಿಮೆಂಟ್ ಕಿತ್ತು ಬರ್ತಿದೆ. ಮಳೆಗಾಲದಲ್ಲಿ ಮನೆಗಳು ಸೊರಗುತ್ತವೆ. ಗೋಡೆಗಳ ಸಿಮೆಂಟ್ ಕಿತ್ತು ಬರುತ್ತಿದೆ. ನಾಗರಾಜ್ ಎನ್ನುವವರು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟು 6 ಅಂಗಡಿ 20 ಗುಂಟೆ ಜಾಗದಲ್ಲಿರುವ 808 ಫ್ಲಾಟ್‌ಗಳು, 13 ವರ್ಷಗಳ ಹಿಂದೆ 3,500 ಸಾವಿರ ಚದರ ಅಡಿಗೆ ಹಣ ಕೊಟ್ಟು ಜನರು ಫ್ಲಾಟ್ ಖರೀದಿಸಿದ್ದರು. ಆದರೆ ಒಂದೇ ವರ್ಷದಲ್ಲಿ ಫ್ಲಾಟ್ ಕಳಪೆ ಕಾಮಗಾರಿ ಬಟಬಯಲಾಗಿದೆ. ಸರಾಸರಿ 297, 4006, 405 ಕೋಟಿ ರೂ ವೆಚ್ಚದಲ್ಲಿ ನಿವಾಸಿಗಳು 808 ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಇಷ್ಟೆಲ್ಲಾ ಖರ್ಚು ಮಾಡಿ ಮನೆ ಖರೀದಿಸಿದರೂ ಕೂಡ ಖಾತೆ ಸಿಕ್ಕಿಲ್ಲ. ಈ ನಡುವೆ ಇರುವ ಮನೆಗಳ ಗೋಡೆಗಳು ಕೂಡ ಕೈಗೆ ಕಿತ್ತು ಬರುತ್ತಿವೆ. ಸ್ವಿಮ್ಮಿಂಗ್ ಪೂಲ್ ಕೂಡ ಸಂಪೂರ್ಣ ಕಳಪೆ, ನಮ್ಮ ಗೋಳು ಕೇಳಿ ಅಂತಿದ್ದಾರೆ.

ಇದನ್ನೂ ಓದಿ: ಕೋಗಿಲು ನಿವಾಸಿಗಳ ಪಟ್ಟಿ ಸಿದ್ಧ: ಲೇಔಟ್‌ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ

ಒತ್ತುವರಿ ಮಾಡಿಕೊಂಡ ಕೋಗಿಲು ಮನೆ ನಿರ್ಮಾಣ ಮಾಡಿದ ನಿವಾಸಿಗಳಿಗೆ ಸರ್ಕಾರ ಹಿಂದೆ ಮುಂದೆ ನೋಡದೆ ಕಡಿಮೆ ಬಜೆಟ್ನಲ್ಲಿ ಮನೆಗಳನ್ನು ನೀಡಲು ಮುಂದಾಗಿದೆ. ಆದರೆ ಬಹುತೇಕ ರೂ ಹಣ ನೀಡಿ ಮನೆ ಪಡೆದಿರುವ ನಿವಾಸಿಗಳಿಗೆ ಸರ್ಕಾರ ಕಳಪೆ ಮನೆ ನೀಡಿದೆ. ಇನ್ನಾದರೂ ಸರ್ಕಾರ ಕೆಹೆಚ್‌ಬಿ ಕೊಂಚ ಇತ್ತ ಗಮನ ಹರಿಬೇಕು ಅಂತಿದ್ದಾರೆ ನಿವಾಸಿಗಳು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *