
ನಟ ದಳಪತಿ ವಿಜಯ್ ಹಾಗೂ ನಟಿ ತ್ರಿಷಾ (ತ್ರಿಷಾ) ಮಧ್ಯೆ ಸಂಬಂಧ ಇದೆ ಎಂಬ ವಿಷಯ ಚರ್ಚೆ ಆಗುತ್ತಿದೆ. ಹೀಗಿರುವಾಗಲೇ ವಿಜಯ್ ಅವರ ಪತ್ನಿ ಗಂಭೀರ ಆರೋಪ ಮಾಡಿದ್ದು, ಪತಿಗೆ ನಟಿಯ ಜೊತೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ಮದುವೆಯಲ್ಲಿ ಕಾಣಿಸಿಕೊಂಡಿದ್ದು ಚರ್ಚೆ ಹುಟ್ಟುಹಾಕಿದೆ. ಈ ಬೆಳವಣಿಗೆಯಿಂದ ತ್ರಿಷಾ ಅವರು ಟೀಕೆ ಎದುರಿಸಬೇಕಾಗಿ ಬಂದಿದೆ. ಈ ಎಲ್ಲ ವಿಷಯಗಳಿಗೆ ಖುಷ್ಬೂ ಸುಂದರ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ನಟಿಯ ಪರ ಬ್ಯಾಟ್ ಬೀಸಿದ್ದಾರೆ.
ಖುಷ್ಬೂ ಅವರು ಕನ್ನಡ, ತಮಿಳು ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿದವರು. ಅವರು ಈಗ ರಾಜಕೀಯದಲ್ಲಿ ಬ್ಯೂಸಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಖುಷ್ಬೂ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹೊರ ಹಾಕುತ್ತಾ ಇರುತ್ತಾರೆ. ಈಗ ಅವರು ತ್ರಿಷಾ ವಿಷಯದಲ್ಲಿ ತಮ್ಮ ಅಭಿಪ್ರಾಯ.
‘ದುರದೃಷ್ಟವಶಾತ್, ನೀವು ಸೀನಿದ್ದರೂ ಸಹ ಅದನ್ನು ಬೇರೆಯವರನ್ನು ದೂಷಿಸಲು ಬಯಸುವ ಕಾಲದಲ್ಲಿ ನಾವಿದ್ದೇವೆ. ಅವರಿಬ್ಬರ (ವಿಜಯ್ ಹಾಗೂ ತ್ರಿಷಾ) ಬಗ್ಗೆ ನನಗೆ ತಿಳಿದಿದೆ. ತ್ರ್ಯಾಶ್ (ತ್ರಿಶಾ) ನನಗೆ ತುಂಬಾ ಹತ್ತಿರವಾದವರು. ನಾನು ಭೇಟಿಯಾದ ಅತ್ಯಂತ ಗೌರವಾನ್ವಿತ ಮಹಿಳೆಯರಲ್ಲಿ ತ್ರಿಷಾ ಕೂಡ ಒಬ್ಬರು ಮತ್ತು ಅತ್ಯಂತ ಸೌಮ್ಯ ಸ್ವಭಾವದವರು’ ಎಂದು ಖುಷ್ಬೂ ಹೇಳಿದ್ದಾರೆ.
ತ್ರಿಷಾ ಅವರ ಆಪ್ತ ಸ್ನೇಹಿತೆ ಎಂದು ಬಣ್ಣಿಸಿರುವ ಖುಷ್ಬು ಅವರು, ಸಾರ್ವಜನಿಕ ವ್ಯಕ್ತಿಗಳ ವೈಯಕ್ತಿಕ ಅನಗತ್ಯ ಆಸಕ್ತಿ ವಹಿಸುವುದರಿಂದ ಹೆಚ್ಚಿನ ಟೀಕೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತ್ರಿಷಾ ಬರ್ತ್ ಡೇ ದಿನ ದಳಪತಿ ವಿಜಯ್ ರಾಜಕೀಯ ಭವಿಷ್ಯ; ಚುನಾವಣೆಗೂ ಮುನ್ನವೇ ಡಿವೋರ್ಸ್?
‘ಕುಳಿತು ಕಾಮೆಂಟ್ ಮಾಡುವವರಿಗೆ ಅವರ ಜೀವನದಲ್ಲಿ ಏನಾಗುತ್ತಿದೆ ಎಂಬುದು ಬೇಕಾಗಿಲ್ಲ. ಅವರಿಗೆ ಬೇರೆಯವರ ಜೀವನ ನೋಡುವುದರಲ್ಲೇ ಖುಷಿ ಸಿಗುತ್ತದೆ. ಅವರು ಬೇರೆಯವರ ಬಗ್ಗೆ ಕಾಮೆಂಟ್ ಮಾಡುವುದರಲ್ಲಿ ಆನಂದ ಪಡೆಯುತ್ತಾರೆ. ನಾವು ಒಂದು ಪೋಸ್ಟ್ ಅನ್ನು ನಮಗೆ ವ್ಯರ್ಥ ಮಾಡಬಾರದು ಎಂಬುದು ನನ್ನ ಅಭಿಪ್ರಾಯ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.