Headlines

ಬೆಂಗಳೂರು ವಿಮಾನ ನಿಲ್ದಾಣದಿಂದ 60 ದಶಲಕ್ಷ ಗುಲಾಬಿ ರಫ್ತು: ಹೂವಿನ ರಫ್ತಿನಲ್ಲಿ ದಾಖಲೆ

ಬೆಂಗಳೂರು ವಿಮಾನ ನಿಲ್ದಾಣದಿಂದ 60 ದಶಲಕ್ಷ ಗುಲಾಬಿ ರಫ್ತು: ಹೂವಿನ ರಫ್ತಿನಲ್ಲಿ ದಾಖಲೆ


ಬೆಂಗಳೂರು, ಫೆ.17: ಪ್ರೇಮಿಗಳ ದಿನದ ಅಂಗವಾಗಿ ಜಾಗತಿಕವಾಗಿ ಬೇಡಿಕೆಯನ್ನು ಪೂರೈಸುವಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಯಶಸ್ವಿಯಾಗಿದೆ. ಈ ಬಾರಿಯ ದಾಖಲೆ 60 ಕೋಟಿಗೂ ಹೆಚ್ಚು ಗುಲಾಬಿ ಹೂವುಗಳನ್ನು ಪ್ರಪಂಚದಾದ್ಯಂತ ಸಾಗಿಸುವ ಮೂಲಕ ಬೆಂಗಳೂರು ತನ್ನ ರಫ್ತು ಸಾಮರ್ಥ್ಯವನ್ನು ಹೊಂದಿದೆ. ಕಳೆದ ವರ್ಷಕ್ಕೆ ಹೂವುಗಳ ಒಟ್ಟು ತೂಕದಲ್ಲಿ ಶೇ. 64ರಷ್ಟು ಮತ್ತು ಹೂವುಗಳ ಸಂಖ್ಯೆ ಶೇ. 38ರಷ್ಟು ಬಹುದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿದೆ. ಒಟ್ಟು 2,700 ಮೆಟ್ರಿಕ್‌ಟನ್‌ಗಳಿಗೆ ಅಧಿಕ ತೂಕದ ಹೂವುಗಳನ್ನು ರವಾನಿಸಲಾಗಿದೆ.

ಒಟ್ಟು 26 ಅಂತಾರಾಷ್ಟ್ರೀಯ ತಾಣಗಳಿಗೆ ಸುಮಾರು 305 ಮೆಟ್ರಿಕ್ ಟನ್ ಹೂವುಗಳನ್ನು ಕಳುಹಿಸಲಾಗಿದೆ. ಸಿಂಗಾಪುರ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕೌಲಾಲಂಪುರ್, ಅಬುಧಾಬಿ, ನ್ಯೂಯಾರ್ಕ್ ಮತ್ತು ಕುವೈತ್ ನಗರಗಳಿವೆ. ವಿಶೇಷವೆಂದರೆ, ಲಾಸ್ ಏಂಜಲೀಸ್ ಮತ್ತು ಲಂಡನ್ ಗ್ಯಾಟ್ವಿಕ್ ರೀತಿಯ ಹೊಸ ನಗರಗಳಿಗೆ ಬೆಂಗಳೂರಿನ ಗುಲಾಬಿ ತಲುಪಿದೆ. ಒಳಗೆ 47 ತಾಣಗಳಿಗೆ ಒಟ್ಟು 2,402 ಮೆಟ್ರಿಕ್ಟನ್ ಹೂವುಗಳನ್ನು ಭಾರತದ ಸಾಗಿಸಲಾಗಿದೆ. ದೆಹಲಿ ಮತ್ತು ಕೋಲ್ಕತ್ತಾ ಪ್ರಮುಖ ಮಾರುಕಟ್ಟೆಗಳಾಗಿದ್ದರೆ, ಲಕ್ನೋ ಮತ್ತು ಚಂಡೀಗಢ ನಗರಗಳು ಶೇ. 150ಕ್ಕೂ ಹೆಚ್ಚು ಬೆಳವಣಿಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕೋಲಾರದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ

ಹೂವುಗಳು ಬಾಡದಂತೆ ತಾಜಾವಾಗಿ ಗ್ರಾಹಕರು ಕೈ ಸೇರಲು ಕೆಂಪೇಗೌಡ ವಿಮಾನ ನಿಲ್ದಾಣದ ಅತ್ಯಾಧುನಿಕ ‘ಕೋಲ್ಡ್ ಚೈನ್’ ಮೂಲಸೌಕರ್ಯವು ಪ್ರಮುಖವಾಗಿದೆ. ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಸುಧಾರಿತ ತಾಪಮಾನ ನಿರ್ವಹಣೆಯಿಂದಾಗಿ ಹೂವುಗಳ ಸಂಗ್ರಹಣೆ ಮತ್ತು ಸಾಗಣೆ ಯಾವುದೇ ಅಡ್ಡಿಯಿಲ್ಲದೆ ಸುಗಮವಾಗಿ ನಡೆದಿದೆ. ಈ ಮೂಲಕ ಸತತ ಐದನೇ ವರ್ಷವೂ ರಫ್ತಿನಲ್ಲಿ ಕೆಐಎ ಭಾರತದ ಮುಂಚೂಣಿ ವಿಮಾನ ನಿಲ್ದಾಣವಾಗಿ ನಿಂತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *