Headlines

ಕಿಚ್ಚ ಸುದೀಪ್ ಕಾಲೆಳೆದ ರೀತಿಗೆ ನಾಚಿ ನೀರಾದ ಹಾಸ್ಯ ನಟ ಯೋಗಿ ಬಾಬು

ಕಿಚ್ಚ ಸುದೀಪ್ ಕಾಲೆಳೆದ ರೀತಿಗೆ ನಾಚಿ ನೀರಾದ ಹಾಸ್ಯ ನಟ ಯೋಗಿ ಬಾಬು


ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ಅವರು ‘ಮಾರ್ಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಮೀರಿ ಸಿನಿಮಾ ಯಶಸ್ಸು ಕಂಡಿದೆ ಎಂದರೂ ತಪ್ಪಾಗಲಾರದು. ಈ ಸಿನಿಮಾದಲ್ಲಿ ತಮಿಳು ನಟ ಯೋಗಿ ಬಾಬು ಕೂಡ ನಟಿಸಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡುವಾಗ ಯೋಗಿ ಬಾಬು ಅವರ ಹೊಗಳ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಯೋಗಿ ಬಾಬು ಅವರು ಸ್ಟಾರ್ ಹೀರೋ ಅವರು ಬ್ಯೂಸಿ ಎಂದರೂ ತಪ್ಪಾಗಲಾರದು. ಅವರು ಹಲವು ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸುತ್ತಿರುತ್ತಾರೆ. ‘ಮಾರ್ಕ್’ ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದರು. ಅವರು ಹಂತ ಹಂತವಾಗಿ ಸಿನಿಮಾ ಶೂಟ್ ಗೆ ಬಂದಿದ್ದರಂತೆ. ಈ ಬಗ್ಗೆ ಸುದೀಪ್ ಮಾತನಾಡಿದ್ದರು.

‘ನಮ್ಮ ಸೆಟ್‌ನಲ್ಲಿ ಬ್ಯುಸಿ ಹೀರೋ ಎಂದರೆ ಅದು ಯೋಗಿ ಬಾಬು. ನಮ್ಮ ಸೆಟ್ ನಲ್ಲಿ ಒಂದು ಕಾಲು, ಮತ್ತೊಂದು ಸೆಟ್ ನಲ್ಲಿ ಮತ್ತೊಂದು ಕಾಲಿತ್ತು. ಅವರು ಇನ್ ಸ್ಟಾಲ್ ಮೆಂಟ್ ಅಲ್ಲಿ ನಟಿಸಿದ್ದಾರೆ. ವಾಹನ ಖರೀದಿ ಮಾಡ್ತೀರಾ. ಹಣವನ್ನು ಮಾತ್ರ ಇನ್ಸ್ಟಾಲ್ಮೆಂಟ್ನಲ್ಲಿ ಕಟ್ಟೋದು ತಾನೆ? ವಾಹನ ಇನ್‌ಸ್ಟಾಲ್‌ಮೆಂಟ್‌ನಲ್ಲಿ ಬರುತ್ತಾ’ ಎಂದು ಪ್ರಶ್ನೆ ಮಾಡಿದ್ದಾರೆ ಸುದೀಪ್.

‘ಪ್ಯಾಕಪ್ ಎಂದು ಹೇಳಿದರು. ಇನ್ನೇನು ಸೆಟ್ ನಿಂದ ಹೋಗಬೇಕು, ಯೋಗಿ ಅವರು ಬಂದಿದ್ದಾರೆ ಶೂಟ್ ಮಾಡಬೇಕು ಎಂದು ನಿರ್ದೇಶಕರು ಹೇಳಿದ್ದಾರೆ. ಅವರು ನಮ್ಮ ಆಸ್ತಿ. ಇಡೀ ತಂಡ ಚೆನ್ನಾಗಿ ಕೆಲಸ ಮಾಡಿದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್

ಯೋಗಿ ಬಾಬು ತಮಿಳಿನ ಖ್ಯಾತನಾಮರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳಿನ ಸ್ಟಾರ್ ಗಳ ಜೊತೆ ನಟಿಸಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *