ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ (ಮಾರ್ಕ್) ಡಿಸೆಂಬರ್ 25 ರಂದು ಕನ್ನಡದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ತಮಿಳು ವರ್ಷನ್ ಜನವರಿ 1 ರಂದು ರಿಲೀಸ್ ಆಗಿದೆ. ಈ ಚಿತ್ರ ನೋಡಿದ ತಮಿಳಿಗರು ಇಷ್ಟಪಟ್ಟಿದ್ದಾರೆ. ಅವರಿಗೆ ಇದು ತಮಿಳು ಸಿನಿಮಾ ರೀತಿಯ ಫೀಲ್ ಆಗಿದೆ. ಹೀಗಾಗಿ ತಮಿಳುನಾಡಿನ ಪ್ರೇಕ್ಷಕರು ಪಾಸಿಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಸಿನಿಮಾದ ಗಳಿಗೆ ಮತ್ತಷ್ಟು ನಿರೀಕ್ಷೆ ಇದೆ.
‘ಮಾರ್ಕ್’ ಸಿನಿಮಾ ತಮಿಳಿಗರಿಗೆ ಹೆಚ್ಚು ಇಷ್ಟ ಆಗೋಕೆ ಕಾರಣವೂ ಇದೆ. ಅನೇಕ ತಮಿಳು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನವೀನ್ ಚಂದ್ರ, ಯೋಗಿ ಬಾಬು ಸೇರಿದಂತೆ ಬಹುತೇಕರು ತಮಿಳಿಗರು. ನಿರ್ದೇಶಕ ವಿಜಯ್ ಕಾರ್ತಿಕೇಯ ಕೂಡ ತಮಿಳಿನವರೇ. ಸುದೀಪ್ ಕೂಡ ತಮ್ಮ ಪಾತ್ರ ತಮಿಳಿನಲ್ಲಿ ಡಬ್ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ಅವರಿಗೆ ಇಷ್ಟ ಆಗಿದೆ.
‘ಮಾರ್ಕ್’ ಚಿತ್ರಕ್ಕೆ ತಮಿಳಿನಲ್ಲಿ 60ಕ್ಕೂ ಹೆಚ್ಚು ಶೋಗಳು ಸಿಕ್ಕಿವೆ. ದೇಶದ ವಿಮರ್ಶಕರು ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ. ಹೀಗೆ ಮುಂದುವರಿದರೆ ಶೋಗಳ ಸಂಖ್ಯೆ ಹೆಚ್ಚಾಗಬಹುದು. ದಳಪತಿ ವಿಜಯ್ ನಟನೆಯ ‘ಜನ ನಾಯಕನ್’ ಸಂಕ್ರಾಂತಿ ಪ್ರಯುಕ್ತ ಜನವರಿ 14 ರಂದು ರಿಲೀಸ್ ಆಗಲಿದೆ. ಅಲ್ಲಿವರೆಗೆ ‘ಮಾರ್ಕ್’ ಚಿತ್ರ ಆ ಕಡೆ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.
ಇದನ್ನೂ ಓದಿ: ಹೊಸ ವರ್ಷದಂದು ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿದ ‘ಮಾರ್ಕ್’ ಸಿನಿಮಾ
‘ಮ್ಯಾಕ್ಸ್’ ರೀತಿಯೇ ‘ಮಾರ್ಕ್’ ಸಿನಿಮಾ ಕಥೆ ವೇಗವಾಗಿ ಸಾಗುತ್ತಿದೆ. ಚಿತ್ರ ಕಥೆಯ ವೇಗದ ಕಾರಣದಿಂದ ಸಿನಿಮಾ ಇಷ್ಟವಾಗುತ್ತದೆ. ಸಿನಿಮಾದ ಹಾಡುಗಳು, ಸುದೀಪ್ ಆ್ಯಕ್ಷನ್ ಜನರಿಗೆ ಇಷ್ಟವಾಗಿದೆ. ಈ ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ ಚಿತ್ರದ. ನಾಲ್ಕು ದಿನಕ್ಕೆ ಸಿನಿಮಾ 35 ಕೋಟಿ ರೂಪಾಯಿ ಗಳಿಸಿದೆ ಎಂದು ತಂಡ ರಿವೀಲ್ ಮಾಡಿತ್ತು. ಸುದೀಪ್ ಅವರು ಇಂದು ಬಿಗ್ ಬಾಸ್ ನಡೆಸಿಕೊಡಲಿದ್ದಾರೆ. ‘ಮಾರ್ಕ್’ ಸಿನಿಮಾ ಕಾರಣಕ್ಕೆ ಅವರಿಗೆ ಕಳೆದ ವಾರ ಶೋ ನಡೆಸಲು ಸಾಧ್ಯವಾಗಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.