Headlines

ವರ್ಷಗಳ ಬಳಿಕ ಪ್ರಯೋಗಕ್ಕೆ ಮುಂದಾದ ಸುದೀಪ್: ಒಪ್ತಾರಾ ಅಭಿಮಾನಿಗಳು?

ವರ್ಷಗಳ ಬಳಿಕ ಪ್ರಯೋಗಕ್ಕೆ ಮುಂದಾದ ಸುದೀಪ್: ಒಪ್ತಾರಾ ಅಭಿಮಾನಿಗಳು?


ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ನಟನೆಯ ‘ಮಾರ್ಕ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಆಕ್ಷನ್ ತುಂಬಿರುವ ಟ್ರೈಲರ್ ಅನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸುದೀಪ್ ಅವರು ಒಂದರ ಹಿಂದೊಂದು ಆಕ್ಷನ್-ಥ್ರಿಲ್ಲರ್ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದು, ಸುದೀಪ್ ಅವರ ಹೈಟು, ಪರ್ಸನಾಲಿಟಿ, ಡೈಲಾಗ್ ನ ಗತ್ತು ಆಕ್ಷನ್ ಸಿನಿಮಾಗಳಿಗೆ ಅದ್ಭುತವಾಗಿ ಸೂಟ್ ಆಗಿದೆ. ಆದರೆ ಸುದೀಪ್ ಚಿತ್ರರಂಗಕ್ಕೆ ಬಂದಿದ್ದು ಆಕ್ಷನ್ ಹೀರೋ ಅಲ್ಲ ಬದಲಾಗಿ ರೊಮ್ಯಾಂಟಿಕ್ ಹೀರೋ ಆಗಿ. ಆದರೆ ಕಳೆದ ಹಲವು ವರ್ಷಗಳಿಂದ ರೊಮ್ಯಾಂಟಿಕ್ ಸಿನಿಮಾಗಳ ಮುಖವನ್ನೇ ಮಾಡಿಲ್ಲ ಸುದೀಪ್, ಆದರೆ ಈಗ ಅಂಥಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

‘ಸ್ಪರ್ಶ’ದಂಥಾ ಅದ್ಭುತ ಪ್ರೇಮಕತೆಯ ಮೂಲಕ ನಾಯಕ ನಟರಾದ ಸುದೀಪ್, ಆರಂಭದ ದಿನಗಳಲ್ಲಿ ಹೆಚ್ಚು ನಟಿಸಿದ್ದು ಪ್ರೇಮಕಥಾ ಸಿನಿಮಾಗಳಲ್ಲಿಯೇ. ಹ್ಯಾಂಡ್ಸಮ್ ಹೀರೋ ಆಗಿದ್ದ ಸುದೀಪ್ ಅವರನ್ನು ಹೆಚ್ಚು ಪ್ರೇಮಕಥಾ ಸಿನಿಮಾಗಳಿಗೆ ನಿರ್ದೇಶಕರು ಬಳಸಿಕೊಂಡರು. ಸುದೀಪ್ ಅವರು ಹಲವು ಅದ್ಭುತ ಪ್ರೇಮಕಥಾ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ. ‘ಹುಚ್ಚ’, ‘ಚಂದು’, ‘ನಲ್ಲ’, ‘ಮೈ ಆಟೋಗ್ರಾಫ್’, ‘ಮುಸ್ಸಂ ಮಾತು’, ‘ಜಸ್ಟ್ ಮಾತಲ್ಲಿ’ ಇನ್ನೂ ಹಲವಾರು ಪ್ರೇಮಕಥಾ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ.

ಆದರೆ ಕಳೆದ ಕೆಲವಾರು ವರ್ಷಗಳಿಂದ ಸುದೀಪ್ ಅವರು ಒಂದು ಅಪ್ಪಟ ರಾಮ್-ಕಾಮ್ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಈಗ ಸುದೀಪ್ ಮತ್ತೊಮ್ಮೆ ರಾಮ್-ಕಾಮ್ ಕತೆಯೊಂದಕ್ಕೆ ಕೈ ಹಾಕಿದ್ದಾರೆ. ‘ಮಾರ್ಕ್’ ಸಿನಿಮಾದ ಪ್ರಚಾರದಲ್ಲಿರುವ ಸುದೀಪ್ ಅವರು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ‘ಬಹಳ ವರ್ಷಗಳ ನಂತರ ಒಂದು ಒಳ್ಳೆಯ ಪ್ರೇಮಕಥಾ ಸಿನಿಮಾ ಮಾಡಲು ಮುಂದಾಗಿದ್ದೀನಿ. ಕತೆ ಕೇಳಿದ್ದು, ಕತೆ ಅದ್ಭುತವಾಗಿದೆ. ಸಿನಿಮಾಕ್ಕೆ ಒಪ್ಪಿಗೆ ಸೂಚಿಸಲಾಗಿದೆ, ಚಿತ್ರೀಕರಣ ಪ್ರಾರಂಭ ಆಗಲಿದೆ’. ಸಿನಿಮಾದ ಕಥೆ ಒಪ್ಪ ಸಿನಿಮಾ ಹೇಳಿರುವ ಸುದೀಪ್, ನಿರ್ದೇಶನ ಮಾಡುತ್ತಿರುವುದು ಯಾರು ಇತ್ಯಾದಿ ಮಾಹಿತಿಗಳಿಲ್ಲ.

ಸುದೀಪ್ ಅವರ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿದೆ. ಸುದೀಪ್ ಅವರ ಹಿಂದಿನ ಸಿನಿಮಾ ‘ಮ್ಯಾಕ್ಸ್’ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ’ ಸಿನಿಮಾವನ್ನೂ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಸತ್ಯಜ್ಯೋತಿ ಫಿಲಂಸ್ ಮತ್ತು ಕಿಚ್ಚ ಸುದೀಪ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಸಿನಿಮಾ ಕನ್ನಡದಲ್ಲಿ ಇತರ ಕೆಲವು ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸುದೀಪ್ ಜೊತೆಗೆ ಮಲೆಯಾಳಂ ನಟ ಶೈನ್ ಟಾಮ್ ಚಾಕೊ, ತಮಿಳಿನ ಯೋಗಿ ಬಾಬು, ತೆಲುಗಿನ ವಿಕ್ರಂ ಚಂದ್ರ, ನಟಿಯಾದ ರೋಷಿನಿ ಪ್ರಕಾಶ್, ನಿಶ್ವಿಕಾ ನಾಯ್ಡು ಅವರು ನಟಿಸಿದ್ದಾರೆ. ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *