ನಟಿ ನಿಶ್ವಿಕಾ ನಾಯ್ಡು (ನಿಶ್ವಿಕಾ ನಾಯ್ಡು) ಅವರ ಸಿನಿಮಾಗಳಲ್ಲಿ ಹೀರೋಯಿನ್ ಆಗಿಯೇ ಸ್ಪೆಷಲ್ ಸಾಂಗ್ ಗಳಲ್ಲಿ ಡ್ಯಾನ್ಸ್ ಮಾಡುವ ಮೂಲಕವೂ ಮಿಂಚುತ್ತಿದ್ದಾರೆ. ಈಗ ಅವರು ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ (ಮಾರ್ಕ್ ಚಲನಚಿತ್ರ) ಸಿನಿಮಾದ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ‘ಮಸ್ತ್ ಮಲೈಕಾ..’ ಎಂಬ ಈ ಹಾಡು ಈಗ ಬಿಡುಗಡೆಯಾಗಿದೆ. ಸುದೀಪ್ (ಕಿಚ್ಚ ಸುದೀಪ್) ಮತ್ತು ನಿಶ್ವಿಕಾ ನಾಯ್ಡು ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹೊಸ ವರ್ಷದ ಪಾರ್ಟಿಗಳಲ್ಲಿ ಕೂಡ ಈ ಹಾಡು ಧೂಳೆಬ್ಬಿಸಲಿದೆ. ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.
ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ಕ್ರಿಸ್ಮಸ್ ಪ್ರಯುಕ್ತ ತೆರೆಗೆ ಬರಲಿದೆ. ಪ್ರಚಾರ ಕಾರ್ಯ ಕೂಡ ಭರದಿಂದ ಸಾಗಿದೆ. ಪ್ರಚಾರದ ಭಾಗವಾಗಿ ‘ಮಾರ್ಕ್’ ಸಿನಿಮಾದ ‘ಮಸ್ತ್ ಮಲೈಕಾ’ ಹಾಡನ್ನು ಬಿಡುಗಡೆ ಮಾಡಿದೆ, ಅಭಿಮಾನಿಗಳಿಗೆ ಈ ಹಾಡು ಇಷ್ಟವಾಗುತ್ತಿದೆ. ಅನೂಪ್ ಭಂಡಾರಿ ಅವರು ಈ ಹಾಡನ್ನು ಬರೆದಿದ್ದಾರೆ.
ಈ ಹಾಡಿನಲ್ಲಿ ಮಲೈಕಾ ಆಗಿ ನಿಶ್ವಿಕಾ ನಾಯ್ಡು ಅವರು ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಈ ಹಾಡು ಬಿಡುಗಡೆಯಾಗಿದೆ. ಕನ್ನಡದಲ್ಲಿ ಈ ಹಾಡಿಗೆ ಸುದೀಪ್ ಮಗಳು ಸಾನ್ವಿ ಮತ್ತು ನಕಾಶ್ ಅಜೀಜ್ ಅವರು ಧ್ವನಿ ನೀಡಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ‘ಸೈಕೋ ಸೈತಾನ್..’ ಹಾಡು ಕೂಡ ಸಖತ್ ಸೌಂಡು ಮಾಡಿದೆ. ಈಗ ‘ಮಸ್ತ್ ಮಲೈಕಾ’ ಬಿಡುಗಡೆ ಆಗಿದೆ.
‘ಮಸ್ತ್ ಮಲೈಕಾ’ ಹಾಡು:
‘ಮ್ಯಾಕ್ಸ್’ ಸಿನಿಮಾ ಖ್ಯಾತಿಯ ವಿಜಯ್ ಕಾರ್ತಿಕೇಯನ್ ಅವರು ‘ಮಾರ್ಕ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆ ಮೂಲಕ ಕಿಚ್ಚ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರು ಮತ್ತೊಮ್ಮೆ ಒಂದಾಗಿ ಕೆಲಸ ಮಾಡಿದ್ದಾರೆ. ‘ಮ್ಯಾಕ್ಸ್’ ರೀತಿಯೇ ‘ಮಾರ್ಕ್’ ಚಿತ್ರಕ್ಕೆ ಇಷ್ಟ ಆಗಲಿದೆ ಎಂಬ ಭರವಸೆ ಚಿತ್ರತಂಡಕ್ಕೆ ಇದೆ. ಟ್ರೇಲರ್ ಗಮನ ಸೆಳೆದಿದೆ.
ಇದನ್ನೂ ಓದಿ: ಮಾರ್ಕ್ ಟ್ರೇಲರ್ ವೀವ್ಸ್ ಪೇಯ್ಡ್ ಎಂದವರಿಗೆ ಮುಟ್ಟಿನೋಡಿಕೊಳ್ಳೋ ಉತ್ತರ ಕೊಟ್ಟ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ಜೊತೆ ದೀಪಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ , ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ. ‘ಸತ್ಯ ಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್’ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.