‘ಸುದೀಪ್​​ ಸರ್ ಬಗ್ಗೆ ಯೋಚಿಸೋದಾದ್ರೂ ಈ ಯಮ ಕಿಂಕರರ ದಾಟಬೇಕು’; ರಜತ್-ವಿನಯ್

‘ಸುದೀಪ್​​ ಸರ್ ಬಗ್ಗೆ ಯೋಚಿಸೋದಾದ್ರೂ ಈ ಯಮ ಕಿಂಕರರ ದಾಟಬೇಕು’; ರಜತ್-ವಿನಯ್


'ಸುದೀಪ್ ಸರ್ ಬಗ್ಗೆ ಯೋಚಿಸೋದಾದ್ರೂ ಈ ಯಮ ಕಿಂಕರರ ದಾಟಬೇಕು'; ರಜತ್-ವಿನಯ್

ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ (ಸತೀಶ್) ಅವರು ನಟ ಸುದೀಪ್ ಮೇಲೆ ನಿರಂತರವಾಗಿ ಟೀಕೆಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈ ಪ್ರಕರಣದಲ್ಲಿ ಸುದೀಪ್ ಪರವಾಗಿ ವಿನಯ್ ಹಾಗೂ ರಜತ್ ಮಾತನಾಡುತ್ತಿದ್ದಾರೆ. ಇವರ ವಿರುದ್ಧ ಸತೀಶ್ ದೂರು ದಾಖಲು ಮಾಡಿದ್ದಾರೆ. ಹೀಗಿರುವಾಗಲೇ ರಜತ್ ಅವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಯಾವಾಗಲೂ ಸುದೀಪ್ ಪರ ನಿಲ್ಲೋದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಜೊತೆಗೆ ಒಂದು ಎಚ್ಚರಿಕೆಯನ್ನು ತಿಳಿಸಲಾಗಿದೆ.

ಸತೀಶ್ ಅವರು ಮೂತ್ರ ಮಾಡುವ ವಿಡಿಯೋ ಹಾಕಿದ್ದಲ್ಲದೆ, ‘ದಾದಾ ಯಾರ್ ಗೊತ್ತಾ’ ಹಾಡನ್ನು ಪೋಸ್ಟ್ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಆ ಬಳಿಕ ಸತೀಶ್ ಅವರನ್ನು ರಜತ್ ಪ್ರಶ್ನೆ ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆಯನ್ನು ಸಹ ನೀಡಿದ್ದರು. ಜೊತೆಗೆ, ವಿನಯ್ ಕೂಡ ರಜತ್ ಬೆಂಬಲಕ್ಕೆ ನಿಂತು, ಸತೀಶ್ ಅವರಿಗೆ ಎಚ್ಚರಿಕೆ ನೀಡಿದ್ದರು. ಈ ವಿಷಯಕ್ಕೆ ಸತೀಶ್ ರಜತ್ ಹಾಗೂ ವಿನಯ್ ಮೇಲೆ ಕೇಸ್ ಹಾಕಿದ್ದಾರೆ.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ರಜತ್ ಕಿಶನ್ ಜಿ (@bujjjjii) ಅವರು ಹಂಚಿಕೊಂಡ ಪೋಸ್ಟ್

ಈ ಬೆನ್ನಲ್ಲೇ ಪೋಸ್ಟ್ ಮಾಡಿರೋ ರಜತ್ ಅವರು, ‘ನಮ್ಮ ಬಾದ್ ಶಾ ಕಿಚ್ಚ ಸರ್ ಬಗ್ಗೆ ಮಾತಾಡೋದು ಅಲ್ಲ, ಕೆಟ್ಟದಾಗಿ ಯೋಚನೆ ಮಾಡ್ಬೇಕು ಅಂದರೂ ಈ ಯಮ ಕಿಂಕರನ ಮೊದಲು ದಾಟಬೇಕು. ವಿ ಲವ್ ಯೂ ಸರ್’ ಎಂದು ಸುದೀಪ್ ಜೊತೆ ಇರೋ ಫೋಟೋನ ವಿನಯ್ ಹಾಗೂ ರಜತ್ ಕೊಲ್ಯಾಬರೇಷನ್ ಅಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಕೇಸ್ ಆದ್ಮೇಲೆ ರಾಜಿಗೆ ಬಂದ ವಿನಯ್ ಗೌಡ’: ಖಡಕ್ ತಿರುಗೇಟು ಕೊಟ್ಟ ಡಾಗ್ ಸತೀಶ್

ರಜತ್ ಅವರು ಸುದೀಪ್ ಅಭಿಮಾನಿ. ಬಿಗ್ ಬಾಸ್ ಗೆ ಬಂದ ಬಳಿಕ ಸುದೀಪ್ ಅವರ ಜೊತೆ ಒಳ್ಳೆಯ ನಂಟು ಬೆಳೆಯಿತು. ವಿನಯ್ ಹಾಗೂ ರಜತ್ ಮಚ್ಚಿನ ಕೇಸ್ ಅಲ್ಲಿ ಒಳಕ್ಕೆ ಹೋದಾಗ, ಅವರನ್ನು ಬಿಡಿಸಿ ಕರೆದೊಯ್ದಿದ್ದು ಸುದೀಪ್ ಬಂಧನ. ಈ ವಿಷಯವನ್ನು ರಜತ್ ಅವರು ಅನೇಕ ಬಾರಿ ಹೇಳಿದ್ದರು. ಈ ಕಾರಣದಿಂದ ಸುದೀಪ್ ಬಗ್ಗೆ ಯಾರೋ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದಾಗ ಅವರು ವಿರೋಧಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *