ಈ ತಿಂಗಳ ಅಂತ್ಯದಿಂದ ಬಿಗ್ ಬಾಸ್ ಸೀಸನ್ -12 ಶುರುವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆ ಮಾಡ್ಲಿಕ್ಕೆ ನಾನ್ ರೆಡಿ ಅಂತ ಸಜ್ಜಾಗಿ ನಿಂತಿದ್ದಾರೆ. ಮುಂದಿನ ನೂರು ದಿನ ಕಿಚ್ಚನ ಕಿರುತೆರೆ ಕಮಾಲ್ ನಡೆಯಲಿದೆ. ಬಿಗ್ ಬಾಸ್ ಮುಗಿಯೋ ಮೊದಲೇ ಮಾರ್ಕ್ ಮೂಲಕ ಬಿಗ್ ಸ್ಕ್ರೀನ್ನಲ್ಲೂ ಕಿಚ್ಚ ಅಬ್ಬರಿಸಲಿದ್ದಾರೆ. ಇದೇ ಸೆಪ್ಟೆಂಬರ್ 28ರಿಂದ ಬಿಗ್ ಬಾಸ್ ಸೀಸನ್-12 ಶುಭಾರಂಭ ಆಗ್ತಾ ಇದೆ. ಸುದೀಪ್ ಮತ್ತೆ ವಾರಾಂತ್ಯಕ್ಕೆ ಹಾಜರಾಗಿ ಕಿಚ್ಚನ ಕಟಕಟೆ ನಡೆಸಿಕೊಡಲಿದ್ದಾರೆ. ಸದ್ಯ ಬಿಗ್ ಬಾಸ್ ಹೊಸ ಪ್ರೋಮೋ ರಿಲೀಸ್ ಆಗಿದ್ದು ಕಿಚ್ಚ ನಾನ್ ರೆಡಿ ಅಂದಿದ್ದಾರೆ. ಈ ಸಾರಿಯ ಬಿಗ್ ಬಾಸ್ ಶೋಗೆ ಕಿಚ್ಚ ಸುದೀಪ್ ಸಾಕಷ್ಟು ಇನ್ಪುಟ್ಸ್ ಕೊಟ್ಟಿದ್ದು ಶೊ ಮತ್ತಷ್ಟು ರೋಚಕವಾಗಿರುತ್ತೆ ಅಂತ ಹೇಳಲಾಗ್ತಾ ಇದೆ. ಈಗಾಗ್ಲೇ ಕಲರ್ಸ್ ವಾಹಿನಿ ಬೇರೆ ಬೇರೆ ಕ್ಷೇತ್ರಗಳ ಸ್ಪರ್ಧಿಗಳನ್ನ ಫೈನಲ್ ಕೂಡ ಮಾಡಿದೆಯಂತೆ.
ಹೌದು ಬಿಗ್ ಬಾಸ್ ಚಿತ್ರೀಕರಣದ ನಡುವೆಯೇ ಸುದೀಪ್ ಮಾರ್ಕ್ ಶೂಟಿಂಗ್ನಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗ್ಲೇ ಅನೌನ್ಸ್ ಮಾಡಿರೋ ಹಾಗೆ ಮಾರ್ಕ್ ಕ್ರಿಸ್ ಮಸ್ಗೆ ತೆರೆಗೆ ಬರೋದು ಫಿಕ್ಸ್ ಆಗಿದೆ. ಸೋ ಕಿಚ್ಚ ಬಿಗ್ ಬಾಸ್ ನಡುವೆಯೇ ಮಾರ್ಕ್ ಶೂಟಿಂಗ್ ಮುಗಿಸಿಕೊಡಲಿದ್ದಾರೆ. ಡಿಸೆಂಬರ್ ಅಂತ್ಯದ ಹೊತ್ತಿಗೆ ಬಿಗ್ ಬಾಸ್ ಕೊನೆಯ ಹಂತಕ್ಕೆ ಬಂದಿರುತ್ತೆ. ಅದೇ ಟೈಮ್ಗೆ ಮ್ಯಾಕ್ಸ್ ರಿಲೀಸ್ ಆಗಲಿದೆ. ಸೋ ಕಿಚ್ಚನ ಕಿರುತೆರೆಯ ಕಮಾಲ್ ಕೊನೆಯಾಗುವಷ್ಟರಲ್ಲಿ ಬಿಗ್ ಸ್ಕ್ರೀನ್ ಮೇಲೆ ಸುದೀಪ್ ಧಮಾಕಾ ಶುರುವಾಗಲಿದೆ. ಡಿಸೆಂಬರ್ 12ಕ್ಕೆ ದರ್ಶನ್ ನಟನೆಯ ದಿ ಡೆವಿಲ್ ರಿಲೀಸ್ ಫಿಕ್ಸ್ ಆಗಿದೆ. ದರ್ಶನ್ ಜೈಲಿನಲ್ಲಿದ್ದು ಈ ಸಿನಿಮಾಗೆ ಭರ್ಜರಿ ಪ್ರಚಾರ ಮಾಡಿ ರಿಲೀಸ್ ಮಾಡೋದಕ್ಕೆ ಚಿತ್ರತಂಡ ಸಜ್ಜಾಗಿದೆ.
ಇನ್ನೂ ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಶೆಟ್ಟಿ, ನಟಿಸಿರೋ ಮಲ್ಟಿಸ್ಟಾರರ್ ಮೂವಿ 45 ಡಿಸೆಂಬರ್ 25ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಕೂಡ ದೊಡ್ಡ ನಿರೀಕ್ಷೆಯನ್ನ ಮೂಡಿಸಿದೆ. ಈ ಎರಡರ ನಡುವೆ ನಾನು ಕೂಡ ಬರ್ತಿನಿ ಅಂತಿದ್ದಾರೆ ಕಿಚ್ಚ. ಅಸಲಿಗೆ ಕಳೆದ ವರ್ಷ ಕ್ರಿಸ್ ಮಸ್ಗೆ ತೆರೆಗೆ ಬಂದ ಮ್ಯಾಕ್ಸ್ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸೋ ಈ ವರ್ಷ ಕ್ರಿಸ್ ಮಸ್ ಮಿಸ್ ಮಾಡಂಗಿಲ್ಲ ಅಂತಿದ್ದಾರೆ ಕಿಚ್ಚ ಸುದೀಪ್. ಸೋ ಮಾರ್ಕ್ ಚಿತ್ರೀಕರಣ ಭರದಿಂದ ನಡೀತಾ ಇದ್ದು ಕ್ರಿಸ್ ಮಸ್ ಗೆ ರಿಲೀಸ್ ಟಾರ್ಗೆಟ್ ಸೆಟ್ ಮಾಡಿಕೊಂಡಿದೆ. ಸೋ ಸುದೀಪ್ ಬಿಗ್ ಬಾಸ್ ನಡು ನಡುವೆ ಮಾರ್ಕ್ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಈ ವರ್ಷದ ಸೆಕೆಂಡ್ ಹಾಫ್ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಿಚ್ಚನಿಂದ ಅನ್ಲಿಮಿಟೆಡ್ ಎಂಟರ್ಟೈನ್ಮೆಂಟ್ ಸಿಗಲಿದೆ.