ಯುದ್ಧಕ್ಕೆ ಸಿದ್ಧ: ಸುದೀಪ್ ಮಾತಿನ ನಿಜವಾದ ಅರ್ಥ ಏನು? ವಿವರಿಸಿದ ಕಿಚ್ಚನ ಆಪ್ತ ರಾಜು ಗೌಡ

ಯುದ್ಧಕ್ಕೆ ಸಿದ್ಧ: ಸುದೀಪ್ ಮಾತಿನ ನಿಜವಾದ ಅರ್ಥ ಏನು? ವಿವರಿಸಿದ ಕಿಚ್ಚನ ಆಪ್ತ ರಾಜು ಗೌಡ


ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ‘ಮಾರ್ಕ್’ (ಮಾರ್ಕ್) ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ. ಅಲ್ಲಿ ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ನೀಡಿದ ಹೇಳಿಕೆಯಿಂದ ದರ್ಶನ್ (ದರ್ಶನ್) ಅಭಿಮಾನಿಗಳು ಗರಂ ಆಗಿದ್ದಾರೆ. ಆದರೆ ಸುದೀಪ್ ಅವರ ಮಾತಿನ ಉದ್ದೇಶ ಮತ್ತು ಹಿನ್ನೆಲೆ ಏನು ಎಂದು ಆಪ್ತ ರಾಜು ಗೌಡ ವಿವರಿಸಿದ್ದಾರೆ. ‘ನಾನು ಮತ್ತು ಸುದೀಪ್ ಅವರ ಜೊತೆಯಲ್ಲಿ ಇದ್ದಾಗ ಅವರಿಗೆ ಒಂದು ಫೋನ್ ಕರೆ ಬಂದಿತ್ತು. ಈ ಬಾರಿ ನಿಮ್ಮ ವಿರುದ್ಧ ಭಾರಿ ಪ್ರಬಲವಾಗಿ ಪೈರಸಿ ಸಂಚು ನಡೆದಿದೆ. ಆದಷ್ಟು ನೀವು ನಿಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿ ಆ ಫೋನ್ ಕರೆಯಲ್ಲಿ ಹೇಳಲಾಗಿದೆ. ಸುದೀಪ್ ಅವರ ಅಭಿಮಾನಿಗಳ ಹೆಸರಲ್ಲಿ ನಕಲಿ ಸಂಘಗಳನ್ನು ಸೃಷ್ಟಿಸಿ ಏನೇನೋ ಹಾಕುತ್ತಿದ್ದಾರೆ. ಆ ವಿಚಾರವನ್ನೇ ಸುದೀಪ್ ಅವರು ವೇದಿಕೆಯಲ್ಲಿ ಮಾತನಾಡಿದ್ದು’ ಎಂದು ರಾಜು ಗೌಡ ಅವರು ಹೇಳಿದ್ದಾರೆ.

‘ನಾವೆಲ್ಲರೂ ಯುದ್ಧಕ್ಕೆ ಸಿದ್ಧ ಅಂತ ಸುದೀಪ್ ಅವರು ಹೇಳಿದ್ದು ಒಬ್ಬ ಸ್ಟಾರ್ ನಟರ ವಿರುದ್ಧ ಅಲ್ಲ. ಯಾವುದೇ ಒಂದು ಸಿನಿಮಾ ಬಗ್ಗೆಯೂ ಅವರ ಹೇಳಿಕೆ ನೀಡಿಲ್ಲ. ಅವರು ಹೇಳಿದ್ದು ಬೇರೆ. ಇಲ್ಲಿ ಆಗುತ್ತಿರುವ ಚರ್ಚೆಯೇ ಬೇರೆ. ಪೈರಸಿ ವಿರುದ್ಧ ನಮ್ಮ ಹೋರಾಟ. ನಕಲಿ ಫ್ಯಾನ್ಸ್ ಸಂಘಗಳಿಂದ ಆಗುತ್ತಿರುವ ಅಪಪ್ರಚಾರ ಸರಿ ಅಲ್ಲ ಅಂತ ಸುದೀಪ್ ಹೇಳಿದ್ದು’ ಎಂದು ರಾಜು ಗೌಡ.

‘ದರ್ಶನ್ ವಿರುದ್ಧವಾಗಿ ಸುದೀಪ್ ಅವರು ಹೇಳಿಕೆ ನೀಡಿಲ್ಲ. ಆ ರೀತಿಯ ಸಂದರ್ಭ ಕೂಡ ಇಲ್ಲ. ಯಾರಿಗೆ ತಟ್ಟಬೇಕೋ ತಟ್ಟುತ್ತೆ ಅಂತ ಸುದೀಪ್ ಅವರು ಹೇಳಿದ್ದು ಪೈರಸಿಯವರಿಗೆ. ಪೈಲ್ವಾನ್ ಸಿನಿಮಾ ಬಂದಾಗ ಪೈರಸಿ ಎಷ್ಟು ಕಾಟ ಕೊಟ್ಟಿತ್ತು ಎಂಬುದು ನಿಮ್ಮೆಲ್ಲರಿಗೂ ಗೊತ್ತು. ನಿರ್ಮಾಪಕರು ಕಣ್ಣೀರು ಹಾಕುವಂತಹ ಪರಿಸ್ಥಿತಿ ಬಂದಿತ್ತು. ಅಂದು ಪೈರಸಿ ಮಾಡಿದವರಿಗೆ ಒಂದು ಗತಿ ಕಾಣಿಸಿದ್ದರೆ ಇಂದು ಈ ಪರಿಸ್ಥಿತಿ ಬರಲಿದೆ. ಪೈರಸಿ ವಿರುದ್ಧ ಸೈಲೆಂಟ್ ಆಗಿ ಇರಬಾರದು, ಕಾನೂನಿನ ಹೋರಾಟ ಮಾಡಬೇಕು ಎಂಬುದು ಸುದೀಪ್ ಅವರ ಮಾತಿನ ಅರ್ಥ’ ಎಂದು ರಾಜು ಗೌಡ ಅವರು ಹೇಳಿದ್ದಾರೆ.

‘ಸುದೀಪ್ ಅವರ ಅಭಿಮಾನಿಗಳು ಅಂತ ಹೇಳಿಕೊಂಡು ಕೆಲವರು ಅಪಪ್ರಚಾರದ ಪೋಸ್ಟ್ ಹಾಕಿದ್ದರು. ಅಂಥವರು ನಿಜವಾಗಿಯೂ ಸುದೀಪ್ ಅಭಿಮಾನಿಗಳಲ್ಲ. ಕಾಂಜಿಪೀಂಚಿ ಪೋಸ್ಟ್ ಹಾಕುವವರು ಸುದೀಪ್ ಫ್ಯಾನ್ಸ್ ಅಲ್ಲ. ಅವರು ಕ್ಲಾಸ್ ಆಗಿರುತ್ತಾರೆ. ಮಾಸ್ ಆಗಿ ಸುದೀಪಣ್ಣನ ಜೊತೆ ನಿಂತಿದ್ದಾರೆ. ಸುಳ್ಳು ಸುದ್ದಿ ಹರಡುವುದು ಸರಿ ಅಲ್ಲ. ಅಂಥವರಿಗೆ ನಾವು ಎಚ್ಚರಿಕೆ ಕೊಟ್ಟಿದ್ದೇವೆ’ ಎಂದು ರಾಜು ಗೌಡ.

ಇದನ್ನೂ ಓದಿ: ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?

‘ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಏನು ಮಾತಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಏನಾದರೂ ಸ್ಪಷ್ಟವಾಗಿ ಒಬ್ಬರ ಹೆಸರು ಹೇಳಿ ಮಾತನಾಡಿದ್ದರೆ ಅವರಿಗೆ ಉತ್ತರ ಕೊಡುತ್ತಾರೆ. ದರ್ಶನ್ ವಿರುದ್ಧವಾಗಿ ಸುದೀಪ್ ಅವರು ಹೇಳಿಕೆ ನೀಡಿಲ್ಲ. ಪೈರಸಿ ಎಂಬುದು ಎಲ್ಲ ಸ್ಟಾರ್ ಹೀರೋಗಳ ಸಮಸ್ಯೆಯಾಗಿದೆ. ಯಾವುದೇ ಅಭಿಮಾನಿಗಳು ಸುಮ್ಮನೆ ಮಾತಾಡೋದಿಲ್ಲ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕು ಎಂಬುದೇ ಸುದೀಪ್ ಅವರ ಮಾತಿನ ಅರ್ಥ’ ಎಂದು ರಾಜು ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *