ಕಿಚ್ಚ ಸುದೀಪ್ (ಸುದೀಪ್) ಪ್ರಸ್ತುತ ಬಿಗ್‌ಬಾಸ್ ಕನ್ನಡ ನಿರೂಪಣೆ ಜೊತೆಗೆ ಅನೂಪ್ ಭಂಡಾರಿ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ‘ಮಾರ್ಕ್’ ಹೆಸರಿನ ಹೊಸ ಸಿನಿಮಾ ಸಹ ಶುರುವಾಗಿದೆ. ಸುದೀಪ್ ಅವರು ತಮ್ಮ ಸಿನಿಮಾಗಳ ಘೋಷಣೆಯನ್ನು ತಾವೇ ಮಾಡುತ್ತಾರೆ. ಅದೂ ಸಿನಿಮಾದ ಚಿತ್ರೀಕರಣ ಶುರು ಆಗುವ ಸಮಯದಲ್ಲಿ ಮಾತ್ರವೇ ಸಿನಿಮಾದ ಬಗ್ಗೆ ಸುದ್ದಿ ಹಂಚಿಕೊಳ್ಳುತ್ತಾರೆ. ಆದರೆ ಇದೀಗ ಸುದೀಪ್ ಅವರ ಹೊಸ ಸಿನಿಮಾದ ಸುದ್ದಿ ತೆಲುಗು ರಿಯಾಲಿಟಿ ಶೋ ಒಂದರಿಂದ ಲೀಕ್ ಆಗಿದೆ.
ತೆಲುಗಿನಲ್ಲಿ ಹಲವಾರು ಸಿಂಗಿಂಗ್ ರಿಯಾಲಿಟಿ ಶೋ ನಡೆಯುತ್ತವೆ. ಅದರಲ್ಲಿ ತೆಲುಗು ಇಂಡಿಯನ್ ಐಡಲ್ ಸಹ ಒಂದು. ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಅವರು ಈ ಶೋನ ಜಡ್ಜ್‌ಗಳಲ್ಲಿ ಒಬ್ಬರಾಗಿದ್ದಾರೆ. ತೆಲುಗು ಇಂಡಿಯನ್ ಐಡಲ್ ಶೋನಲ್ಲಿ ಕರ್ನಾಟಕದ ಯುವಕ ದರ್ಶನ್ ನಾರಾಯಣ್ ಸ್ಪರ್ಧಿ ಆಗಿದ್ದಾರೆ. ಇತ್ತೀಚೆಗೆ ಅವರು ವೇದಿಕೆಯಲ್ಲಿ ‘ಕಿರಿಕ್ ಪಾರ್ಟಿ’ ತೆಲುಗು ಸಿನಿಮಾದ ಹಾಡನ್ನು ಹಾಡಿದರು. ದರ್ಶನ್ ಹಾಡಿದ ರೀತಿ ಜಡ್ಜ್‌ಗಳಿಗೆ ಬಹಳ ಇಷ್ಟವಾಯ್ತು.
ಜಡ್ಜ್‌ಗಳಲ್ಲಿ ಒಬ್ಬರಾಗಿದ್ದಾರೆ ಎಸ್ ತಮನ್, ದರ್ಶನ್ ಅವರ ಹಾಡುಗಾರಿಕೆಯನ್ನು ಕೊಂಡಾಡಿದರು, ‘ನಾನು ಮುಂದಿನ ಸಿನಿಮಾ ಕನ್ನಡದಲ್ಲಿ ಮಾಡುತ್ತಿದ್ದೇನೆ. ಸಂತೋಷ್ ಆನಂದ್ ರಾಮ್ ನಿರ್ದೇಶನ, ಸುದೀಪ್ ಅವರ ನಾಯಕ. ನೀವು ಆ ಸಿನಿಮಾದಲ್ಲಿ ಒಂದು ಹಾಡು ಹಾಡಬೇಕು. ವಿಜಯ್‌ಪ್ರಕಾಶ್ ಅವರನ್ನು ಸಹ ನಾನು ರೆಕಾರ್ಡಿಂಗ್‌ಗೆ ಕರೆಯುತ್ತೀನಿ’ ಎಂದು ಹೇಳಿದ್ದಾರೆ. ಇದು ಖಂಡಿತವಾಗಿಯೂ ದರ್ಶನ್ ನಾರಾಯಣ್ ಗೆ ಖುಷಿ ತಂದಿದೆ. ಸುದೀಪ್ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ತಂದಿದೆ.
ಅಸಲಿಗೆ ಸಂತೋಷ್ ಆನಂದ್ ರಾಮ್ ಜೊತೆಗೆ ಸುದೀಪ್ ಸಿನಿಮಾ ಮಾಡುತ್ತಿರುವುದು ಗುಟ್ಟಾಗಿಯೇ ಇತ್ತು. ಇದೀಗ ತೆಲುಗು ರಿಯಾಲಿಟಿ ಶೋನಲ್ಲಿ ಸುದ್ದಿ ಹೊರಬಿದ್ದಿದೆ. ‘ರಾಮಾಚಾರಿ’, ‘ರಾಜಕುಮಾರ’ ಅಂಥಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಸಂತೋಷ್ ಆನಂದ್ ರಾಮ್ ಇದೀಗ ಸುದೀಪ್ ಜೊತೆಗೆ ಕೈ ಜೋಡಿಸಿದ್ದಾರೆ. ಸುದೀಪ್ ಹಾಗೂ ಸಂತೋಷ್ ಆನಂದ್ ರಾಮ್ ಸಿನಿಮಾಕ್ಕೆ ಹೊಂಬಾಳೆ ಬಂಡವಾಳ ಹೂಡುವ ಸಾಧ್ಯತೆ ಇದೆ.
ಸುದೀಪ್ ಅವರು ಪ್ರಸ್ತುತ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಮಾರ್ಕ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಮ್ಯಾಕ್ಸ್’ ಚಿತ್ರತಂಡವೇ ಈಗ ‘ಮಾರ್ಕ್’ ಸಿನಿಮಾನಲ್ಲಿಯೂ ಇದೆ. ಇವೆರಡರ ಬಳಿಕ ಬಹುಷಃ ಸಂತೋಷ್ ಆನಂದ್ ಚಾಲನೆರಾಮ್ ಜೊತೆಗಿನ ಸಿನಿಮಾಕ್ಕೆ ಸಿಗಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:12 pm, ಮಂಗಳವಾರ, 21 ಅಕ್ಟೋಬರ್ 25