‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್

‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್


ಕಿಚ್ಚ ಸುದೀಪ್ ಅವರು ಬೇರೆ ಬೇರೆ ಕೆಲಸಗಳಲ್ಲಿ ಬ್ಯೂಸಿ ಆಗಿದ್ದಾರೆ. ಬಿಗ್ ಬಾಸ್, ಸಿಸಿಎಲ್ ಮುಗಿಯಿತು. ‘ಬಿಲ್ಲ ರಂಗ ಬಾಷ’ (ಬಿಲ್ಲಾ ರಂಗ ಬಾಷಾ) ಸಿನಿಮಾ ಸೆಟ್ಟೇರುವುದು ತಡ ಆಗುತ್ತಿದೆ. ಅದಕ್ಕೆ ಕಾರಣ ಏನಾಗಿದೆ ಎಂದು ಸುದೀಪ್ ಅವರು ವಿವರಿಸಿದ್ದಾರೆ. ‘ನಾನು ಮಾರ್ಕ್ ಸಿನಿಮಾಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದೆ. ಬಳಿಕ ಸಿಸಿಎಲ್ ನನಗೆ ಸ್ವಲ್ಪ ರಿಲೀಫ್ ನೀಡಿತು. ನಾನು ಕೂಡ ಮನುಷ್ಯ. ಸಿನಿಮಾ ಮಾಡಬೇಕು. ಆದರೆ ಯಾಂತ್ರಿಕವಾಗಿ ಸಿನಿಮಾ ಮಾಡೋಕೆ ನನ್ನಿಂದ ಆಗಲ್ಲ. ನನಗೆ ಒಂದು ಸಣ್ಣ ಬ್ರೇಕ್ ಬೇಕು. ಯಾವುದನ್ನಾದರೂ ನಾವು ತುಂಬಾ ಪ್ರೀತಿಸಿದರೆ ನಾವು ಸ್ವಲ್ಪ ದೂರ ಇರಬೇಕು. ಆಗ ಮತ್ತೆ ಪ್ರೀತಿ ಬೆಳೆಯುತ್ತದೆ. ಒಮ್ಮೆ ಬಿಲ್ಲ ರಂಗ ಬಾಷ ಶುರುವಾದರೆ ಮತ್ತೆ ಈ ಕಡೆ ತಿರುಗಿ ನೋಡಲ್ಲ. 8-9 ತಿಂಗಳು ಅದರಲ್ಲೇ ಕಳೆಯುತ್ತದೆ’ ಎಂದ ಸುದೀಪ್ (ಕಿಚ್ಚ ಸುದೀಪ್) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *